ಸೇಲ್‌..ಸೇಲ್‌..₹18 ಕೋಟಿಗೆ ಕನ್ಯತ್ವ ಸೇಲ್‌..!

ವಿದ್ಯಾರ್ಥಿನಿ ಕನ್ಯತ್ವ ಖರೀದಿಸಿದ ಹಾಲಿವುಡ್‌ ಹೀರೋ..!

Untitled design (37)

ಈಗಿನ ಆಧುನಿಕ ಯುಗದಲ್ಲಿ ಆನ್‌ಲೈನಲ್ಲಿ ಏನ್‌ ಬೇಕಾದ್ರೂ ಸಿಗುತ್ತೆ ಬಿಡಿ ಅನ್ನೋ ಮಾತಿಗೆ ಸಾಕ್ಷಿ ಅನ್ನೋವಂತೆ ಹುಡುಗಿಯೊಬ್ಬಳು ತನ್ನ ಕನ್ಯತ್ವವನ್ನು ಆನ್‌ಲೈನ್‌ನಲ್ಲಿ ಹರಾಜು ಹಾಕಿದ್ದಾರೆ. ಹಾಲಿವುಡ್‌ ಹೀರೋ ಒಬ್ಬ ಕೋಟಿ ಕೋಟಿ ಹಣ ಕೊಟ್ಟು ಆ ಕನ್ಯತ್ವವನ್ನು ಖರೀದಿ ಮಾಡಿರೋದು ವಿಶ್ವಾದ್ಯಂತ ಸಂಚಲನವನ್ನೇ ಸೃಷ್ಟಿಮಾಡಿದೆ. ಅಷ್ಟಕ್ಕೂ ಕನ್ಯತ್ವ ಸೇಲ್‌ ನಿಜಕ್ಕೂ ನಡೆಯುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಲಂಡನ್‌ನ ಮಾಂಚೆಸ್ಟರ್‌ ನಿವಾಸಿಯಾಗಿರೋ 22 ವರ್ಷದ ವಿದ್ಯಾರ್ಥಿನಿ ಲಾರಾ ತನ್ನ ಕನ್ಯತ್ವವನ್ನು ಎಸ್ಕಾರ್ಟ್ ಏಜೆನ್ಸಿಯ ವೇದಿಕೆಯ ಮೂಲಕ ಆನ್‌ಲೈನ್‌ನಲ್ಲಿ ಹರಾಜಿಗಿಟ್ಟು ಬರೋಬ್ಬರಿ 18 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾಳೆ. ಈ ಹುಡುಗಿ ಆನ್‌ಲೈನ್‌ ತನ್ನ ಕನ್ಯತ್ವವನ್ನು ಮಾರಿದ್ದಾಳೆ. ಶಿಕ್ಷಣ ಮತ್ತು ಭವಿಷ್ಯದ ಭದ್ರತೆಗಾಗಿ ಈ ನಿರ್ಧಾರ ಕೈಗೊಂಡಿದ್ದಾಳೆ ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ. ಹಾಲಿವುಡ್‌ ಹೀರೋ ಜೆಫ್ರಿ ಬರೋಬ್ಬರಿ 1.7 ಮಿಲಿಯನ್‌ ಅಂದ್ರೆ 18 ಕೋಟಿ ರೂಪಾಯಿ ಕೊಟ್ಟು ಈ ಹುಡುಗಿಯ ಕನ್ಯತ್ವವನ್ನು ಖರೀದಿ ಮಾಡಿರೋದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗ್ತಿದ್ದು ವಿಶ್ವಾದ್ಯಂತ ಈ ಹುಡುಗಿ ಸುದ್ದಿಯಾಗಿದ್ದಾಳೆ. ಅಷ್ಟಕ್ಕೂ ಏನಿದು ಕನ್ಯತ್ವ ಹರಾಜು? ಆನ್‌ಲೈನಲ್ಲಿ ಇದು ಹೇಗೆ ನಡೆಯುತ್ತದೆ ಅನ್ನೋದ್ರ ಡೀಟೈಲ್ಸ್‌ ಇಲ್ಲಿದೆ ನೋಡಿ.

ಎಸ್ಕಾರ್ಟ್‌ ಏಜೆನ್ಸಿ ಅನ್ನೋದು ಆನ್‌ಲೈನಲ್ಲಿ ವೇಶ್ಯಾವಾಟಿಕೆ ನಡೆಸೋ ಏಜೆನ್ಸಿಯಾಗಿದೆ. ಈ ಆನ್‌ಲೈನ್‌ ಹರಾಜಿನಲ್ಲಿ ರಾಜಕಾರಣಿಗಳು, ವ್ಯಾಪಾರ ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳು ಪಾಲ್ಗೊಳ್ಳುತ್ತಾರೆ. ವಿದ್ಯಾರ್ಥಿನಿ ಲಾರಾಳ ಬಿಡ್ ಅನ್ನು ಗೆದ್ದುಕೊಂಡಿರೋದು ಹಾಲಿವುಡ್ ತಾರೆ ಜೆಫ್ರಿ. ಈಕೆಯ ಕನ್ಯತ್ವವನ್ನು 1.7 ಮಿಲಿಯ ಡಾಲರ್‌ ಅಂದರೆ ಸುಮಾರು 18 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದಾನೆ.

ಬಳಿಕ ಈ ಬಗ್ಗೆ ಮಾತನಾಡಿರೋ ವಿದ್ಯಾರ್ಥಿನಿ ಲಾರಾ, ನನಗೆ ಈ ಬಗ್ಗೆ ವಿಷಾದವಿಲ್ಲ. ಎಲ್ಲ ಹುಡುಗಿಯರು ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ ಆದರೆ ಅದಕ್ಕೆ ಪ್ರತಿಫಲವಾಗಿ ಏನನ್ನೂ ಪಡೆಯುವುದಿಲ್ಲ. ಆದರೆ ನಾನು ಈ ಕನ್ಯತ್ವ ಮಾರುವುದರ ಮೂಲಕ ನನ್ನ ಭವಿಷ್ಯವನ್ನು ಸುರಕ್ಷಿತಗೊಳಿಸಿಕೊಂಡಿದ್ದೇನು. ನಾನು ಯಾರಿಗೆ ಕನ್ಯತ್ವವನ್ನು ಕಳೆದುಕೊಳ್ಳಲಿದ್ದೇನೋ ಆತ ನನ್ನ ಶಾಶ್ವತ ಸಂಗಾತಿಯಾಗುವ ಸಾಧ್ಯತೆಯೇನೂ ಇಲ್ಲ. ಹೀಗಾಗಿ ಇದು ಜೀವಮಾನದ ಒಪ್ಪಂದವಲ್ಲ. ನಾನು ಈ ವಿಷಯದಲ್ಲಿ ತರ್ಕಬದ್ಧ ವ್ಯಕ್ತಿ. ಭಾವನೆಗಳಿಗೆ ತುತ್ತಾಗುವವಳಲ್ಲ. ನನ್ನ ನಿರ್ಧಾರಕ್ಕೆ ಬದ್ಧಳಾಗಿದ್ದೇನೆ. ನನಗೆ ಯಾವುದೇ ವಿಷಾದವಿಲ್ಲ’ ಎಂದಿದ್ದಾಳೆ.

ಲೌರಾ ಕನ್ಯೆ ಹೌದೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಲು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಆಕೆ ಕನ್ಯತ್ವ ಹೊಂದಿದ್ದಾಳೆ ಎಂಬ ವರದಿ ಬಂದ ಬಳಿಕವೇ ಅವಳನ್ನು ಹರಾಜಿಗೆ ಇಡಲಾಗಿತ್ತು. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಕೆಲವರು ಇದನ್ನು ಟೀಕಿಸಿದ್ದಾರೆ. ಆದರೆ, ಇದಕ್ಕೆ ಲೌರಾ ತಲೆಕೆಡಿಸಿಕೊಂಡಿಲ್ಲ.

ಕೆಲ ತಿಂಗಳುಗಳ ಹಿಂದೆ ಈ ಸ್ಪರ್ಧಾತ್ಮಕ ಹರಾಜು ನಡೆಯುವ ಮೊದಲು ಸಂಭಾವ್ಯ ಬಿಡ್‌ದಾರರನ್ನು ಭೇಟಿ ಮಾಡಲು ಆಕೆ ಕೆಲವು ವಿಶೇಷ ಕಾರ್ಯಕ್ರಮಗಳಿಗೆ ಹಾಜರಾಗಿದ್ದಳು. ಹರಾಜಿನ ನಂತರ ಜೆಫ್ರಿ ಎಪ್ಸ್ಟೀನ್‌ನ ಖಾಸಗಿ ದ್ವೀಪಕ್ಕೆ ಭೇಟಿ ನೀಡಿದ್ದಳು. ಅಲ್ಲಿ ಆ ಶ್ರೀಮಂತ ನಟನೊಂದಿಗೆ ರಾತ್ರಿ ಕಳೆದಳು. ಇದೀಗ ಭವಿಷ್ಯದಲ್ಲಿ ಹಣಕ್ಕಾಗಿ ಸುಗರ್ ಡ್ಯಾಡಿನ ಹುಡುಕಿಕೊಳ್ಳೋದಾಗಿ ಹೇಳಿದ್ದಾಳೆ.

ನಮ್ಮ ಭಾರತದಲ್ಲೂ ಹೆಣ್ಮಕ್ಕಳು ಆನ್‌ಲೈನ್‌ ವೇಶ್ಯಾವಾಟಿಕೆಯಲ್ಲಿ ಹರಾಜಾಗುತ್ತಾರೆ ಆದರೆ ಅದು ಬಹಳ ಗೌಪ್ಯವಾಗಿ, ಕಾನೂನಿನ ಕಣ್ಣು ತಪ್ಪಿಸಿ ನಡೆಯುತ್ತದೆ. ಆದರೆ ಲಾರಾಳಂತೆ ಖುಲ್ಲಂ ಖುಲ್ಲವಾಗಿ ನಡೆಯೋದಿಲ್ಲ ಅನ್ನೋದಷ್ಟೇ ಸಮಾಧಾನದ ಸಂಗತಿಯಾಗಿದೆ.

Exit mobile version