ಕಳೆದ ಕೆಲವು ದಿನಗಳಿಂದ ತಣ್ಣಗಾಗಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಇದೀಗ ಮತ್ತೆ ಸ್ಫೋಟಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಅಮೆರಿಕ ಹಾಗೂ ಇಸ್ರೇಲ್ ದೇಶಗಳು ಇರಾನ್ ಮೇಲೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಭೀಕರ ದಾಳಿಗೆ ತಂತ್ರ ರೂಪಿಸುತ್ತಿವೆ ಎಂಬ ವರದಿಗಳು ಜಗತ್ತನ್ನು ಮತ್ತೊಮ್ಮೆ ತೀವ್ರ ಆತಂಕಕ್ಕೆ ತಳ್ಳಿವೆ.
ಮದರ್ ಆಫ್ ಆಲ್ ಬಾಂಬ್ಸ್ ಎಚ್ಚರಿಕೆ
ಮೂಲಗಳ ಪ್ರಕಾರ, ಇರಾನ್ ವಿರುದ್ಧ ನಿರ್ಣಾಯಕ ಹಾಗೂ ಸರ್ವನಾಶದ ದಾಳಿ ನಡೆಸಲು ಅಮೆರಿಕ ಸಿದ್ಧತೆ ನಡೆಸುತ್ತಿದ್ದು, ಇಸ್ರೇಲ್ನೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ. ಈ ಕುರಿತು ಇರಾನ್ ಉನ್ನತ ನಾಯಕರೊಂದಿಗೆ ನಡೆದ ಚರ್ಚೆಗಳು ವಿಫಲಗೊಂಡಿದ್ದು, ಯುದ್ಧವು ಹಿಂದೆಂದಿಗಿಂತಲೂ ಭೀಕರ ಸ್ವರೂಪ ಪಡೆಯುವ ಸಾಧ್ಯತೆಯಿದೆ.
ಇರಾನ್ನಿಂದ ತಕ್ಕ ತಿರುಗೇಟು
ಅಮೆರಿಕದ ಈ ಬೆದರಿಕೆಗೆ ಕಕ್ಕಾಬಿಕ್ಕಿಯಾಗದ ಇರಾನ್, ತಾನು ಕೂಡ ಯಾವುದೇ ಹಂತದಲ್ಲೂ ಕಮ್ಮಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಅಮೆರಿಕ ತನ್ನ ಬಳಿಯಿರುವ ಅತ್ಯಂತ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿದರೆ, ತಾವೂ ಕೂಡ ತಕ್ಕ ಪ್ರತಿ、ಯನ್ನು ನೀಡುವುದಾಗಿ ಎಚ್ಚರಿಸಿದೆ. “ನಮ್ಮ ದೇಶದ ಸಹವಾಸಕ್ಕೆ ಬಂದರೆ ಮುಂದಾಗುವ ಅಪಾಯದ ಬಗ್ಗೆ ಅಮೆರಿಕ ಎಚ್ಚೆತ್ತುಕೊಳ್ಳಬೇಕು” ಎಂದು ಇರಾನ್ ಕಟುವಾದ ಸಂದೇಶ ರವಿಸಿದೆ.
ಜಾಗತಿಕ ಆರ್ಥಿಕತೆಗೆ ಕುತ್ತು
ಈ ಮುಖಾಮುಖಿ ಹೀಗೆಯೇ ಮುಂದುವರಿದರೆ, ಏಷ್ಯಾದ ರಾಷ್ಟ್ರಗಳು ಸೇರಿದಂತೆ ಇಡೀ ವಿಶ್ವವೇ ಮತ್ತೊಮ್ಮೆ ತೀವ್ರ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಂತಹ ಗಂಭೀರ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬ ಆತಂಕ ಮೂಡಿದೆ.
