ಅಮೆರಿಕದ ಟೆಕ್ಸಾಸ್: ಭಾನುವಾರ ಮಧ್ಯಾಹ್ನ ಟೆಕ್ಸಾಸ್‌ನ ಫೋರ್ಟ್ ವರ್ತ್ ನಗರದ ಹಿಕ್ಸ್ ಏರ್ಫೀಲ್ಡ್ ಬಳಿ ಲಘು ವಿಮಾನವೊಂದು ಪತನವಾಗಿ ಇಬ್ಬರು ವಿಮಾನ ಪ್ರಯಾಣಿಕರು ಮೃತಪಟ್ಟಿದ್ದಾರೆ .
ಸ್ಥಳೀಯ ಸಮಯದಂತೆ ಮಧ್ಯಾಹ್ನ 1:30 ಕ್ಕೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ . ವಿಮಾನವು ಏರ್ಫೀಲ್ಡ್ ಬಳಿ ಇದ್ದ ಒಂದು ಪಾರ್ಕಿಂಗ್ ಪ್ರದೇಶಕ್ಕೆ ಡಿಕ್ಕಿ ಹೊಡೆದಿದೆ. ಈ ಪ್ರದೇಶದಲ್ಲಿ ನಿಲ್ಲಿಸಿದ್ದ ಹಲವಾರು ಅರೆ-ಟ್ರೇಲರ್ ಲಾರಿಗಳು ಮತ್ತು ಕ್ಯಾಂಪರ್ ವಾಹನಗಳು ವಿಮಾನದ ಡಿಕ್ಕಿಯಿಂದಾಗಿ ಬೆಂಕಿಗೆ ಆಹುತಿಯಾಗಿವೆ . ಫೋರ್ಟ್ ವರ್ತ್ ಅಗ್ನಿಶಾಮಕ ದಳದ ಪ್ರವಕ್ತ ಕ್ರೈಗ್ ಟ್ರೋಜಸೆಕ್ ಅವರು, ವಿಮಾನದ ಜೊತೆಗೆ ಒಂದು ವಾಣಿಜ್ಯ ಕಟ್ಟಡವೂ ಸಹ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿಸಿದ್ದಾರೆ .
ಅಪಘಾತದ ನಂತರ ಪ್ರದೇಶವನ್ನು ಪೂರ್ತಿ ಆವರಿಸಿದ ದಟ್ಟನೆಯ ಕಪ್ಪು ಹೊಗೆ ಮತ್ತು ಜ್ವಾಲೆಗಳ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ . ಸ್ಥಳೀಯರಾದ ಲಾರೆನ್ ಆಂಡರ್ಸನ್ ಅವರು, ಒಂದು ದೈತ್ಯಾಕಾರದ ಕಪ್ಪು ಹೊಗೆಯ ಮೇಘ ಕಂಡಿತು ಎಂದು ವರ್ಣಿಸಿದ್ದಾರೆ . ಅಗ್ನಿಶಾಮಕ ದಳದ 10 ಇಂಜಿನ್ ವಾಹನಗಳು ಸೇರಿದಂತೆ ಹತ್ತು ಸೇನಾ ವಾಹನಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ
ಹಿಕ್ಸ್ ಏರ್ಫೀಲ್ಡ್ ಒಂದು ಖಾಸಗಿ ವಿಮಾನ ನಿಲ್ದಾಣವಾಗಿದೆ ಮತ್ತು ಪತನವಾದ ವಿಮಾನವು ಅಲ್ಲಿಂದ ಹಾರಿದ್ದಲ್ಲ ಎಂದು ವಿಮಾನ ನಿಲ್ದಾಣದ ಪ್ರತಿನಿಧಿ ತಿಳಿಸಿದ್ದಾರೆ . ಈ ಅಪಘಾತದ ಕಾರಣವನ್ನು ಫೆಡರಲ್ ಏವಿಯೇಷನ್ ಆಡ್ಮಿನಿಸ್ಟ್ರೇಷನ್ (FAA) ಮತ್ತು ನ್ಯಾಶನಲ್ ಟ್ರಾನ್ಸ್ಪೋರ್ಟೇಷನ್ ಸೇಫ್ಟಿ ಬೋರ್ಡ್ (NTSB) ಸಂಸ್ಥೆಗಳು ತನಿಖೆ ಮಾಡುತ್ತಿದ್ದು, ಪತನಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ .