ಅಮೆರಿಕದಿಂದಲೇ ಭಾರತದ ಸಿಂಧೂ ನದಿ ಅಣೆಕಟ್ಟೆ ನಾಶ ಮಾಡುವುದಾಗಿ ಬೆದರಿಕೆ ಹಾಕ್ ಸೇನಾಧಿಪತಿ!

"ಪಾಕ್ ಸೇನಾಧಿಕಾರಿಯಿಂದ ಭಾರತಕ್ಕೆ ಪರಮಾಣು ಬೆದರಿಕೆ!

0 (70)

ವಾಷಿಂಗ್ಟನ್: ಪಾಕಿಸ್ತಾನ ಸೇನಾಧಿಪತಿ ಜನರಲ್ ಅಸಿಮ್ ಮುನೀರ್ ಅಮೆರಿಕದಿಂದ ಭಾರತಕ್ಕೆ ಪರಮಾಣು ಬೆದರಿಕೆ ಹಾಕಿದ್ದಾರೆ. ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಭಾರತ ಸಿಂಧೂ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆಯನ್ನು ನಾವು ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ”ಎಂದು ಬೆದರಿಕೆ ಹಾಕಿದ್ದಾರೆ.

ಅಸಿಮ್ ಮುನೀರ್ ತಮ್ಮ ಭಾಷಣದಲ್ಲಿ, “ನಾವು ಪರಮಾಣು ಶಕ್ತಿ ಹೊಂದಿದ ರಾಷ್ಟ್ರ. ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಬಂದರೆ, ಅರ್ಧ ಜಗತ್ತನ್ನು ನಾಶಮಾಡುವ ಸಾಮರ್ಥ್ಯ ನಮ್ಮದು”ಎಂದು ಹೇಳಿದ್ದಾರೆ. ಅವರು ಭಾರತವನ್ನು “ಫೆರಾರಿ ಕಾರ್” ಮತ್ತು ಪಾಕಿಸ್ತಾನವನ್ನು “ಡಂಪ್ ಟ್ರಕ್” ಎಂದು ಹೋಲಿಸಿ, “ಟ್ರಕ್ಗೆ ಡಿಕ್ಕಿ ಹೊಡೆದರೆ ಫೆರಾರಿ ಯಾರಿಗೆ ಹಾನಿ?” ಎಂದು ಪ್ರಶ್ನಿಸಿದ್ದಾರೆ.

ಭಾರತದಿಂದ ಅಸ್ತಿತ್ವದ ಬೆದರಿಕೆಯನ್ನು ಎದುರಿಸಿದರೆ ಇಸ್ಲಾಮಾಬಾದ್ ಅರ್ಧ ಜಗತ್ತನ್ನ ನಾಶಪಡಿಸುತ್ತದೆ. ನಾವು ಪತನವಾಗ್ತಿದ್ದೀವಿ ಎಂದರೆ ನಮ್ಮ ಜೊತೆಗೆ ಅರ್ಧ ಜಗತ್ತನ್ನು ನಾಶಪಡಿಸುತ್ತೇವೆ ಎಂದು ಪಾನ್ ಸೇನಾಧಿಕಾರಿ ತಿಳಿಸಿದ್ದಾರೆ.

ಪಾಕಿಸ್ತಾನದ ದ್ವಿಮುಖ ನೀತಿ:

ಅಂತರರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ಈ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಭಾರತದ ವಿದೇಶಾಂಗ ಸಚಿವಾಲಯ ಸೂಚಿಸಿದೆ.

Exit mobile version