ಟ್ರಂಪ್ ಹತ್ಯೆಗೆ ಇರಾನ್ ಸಂಚು? ಇಸ್ರೇಲ್‌ನಿಂದ ಸ್ಫೋಟಕ ಮಾಹಿತಿ

Untitled design (24)

ಇರಾನ್ ಹಾಗೂ ಅಮೆರಿಕಾ ನಡುವಿನ ಸಂಘರ್ಷ ತಾರಕಕ್ಕೇರಿ ತಿಂಗಳುಗಳು ಕಳೆದಿದ್ದರೂ, ಪ್ರಾದೇಶಿಕ ಉದ್ವಿಗ್ನತೆ ಮಾತ್ರ ಇನ್ನೂ ತಿಳಿಗೊಂಡಿಲ್ಲ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಎರಡೂ ದೇಶಗಳ ನಡುವೆ ಮತ್ತೊಮ್ಮೆ ನೇರ ಯುದ್ಧದ ಲಕ್ಷಣಗಳು ಗೋಚರಿಸುತ್ತಿವೆ.

ಇಸ್ರೇಲ್ ಬಹಿರಂಗಪಡಿಸಿದ ಮಾಹಿತಿ :

ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧ ಕಠಿಣ ನಿಲುವು ತಳೆದಿರುವ ಇಸ್ರೇಲ್, ಇದೀಗ ಮತ್ತೊಂದು ಸ್ಫೋಟಕ ಮಾಹಿತಿಯನ್ನು ಹೊರಹಾಕಿದೆ. ಇಸ್ರೇಲಿ ಗುಪ್ತಚರ ಮೂಲಗಳ ಪ್ರಕಾರ, ಇರಾನ್ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಪ್ರತಿಕಾರಕ್ಕೆ ಸಂಚು ರೂಪಿಸುತ್ತಿದೆ ಎನ್ನಲಾಗಿದ್ದು, ಇದು ಅಮೆರಿಕಾದ ಕಳವಳವನ್ನು ಹೆಚ್ಚಿಸಿದೆ.

ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚಿನ ಆರೋಪ:

ತಮ್ಮ ಸರ್ವೋಚ್ಚ ನಾಯಕರನ್ನು ಕಳೆದುಕೊಂಡಿರುವ ಆಕ್ರೋಶದಲ್ಲಿರುವ ಇರಾನ್, ಪ್ರಸ್ತುತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಸಂಚು ರೂಪಿಸುತ್ತಿದೆ ಎಂದು ಅಮೆರಿಕಾದ ಮಿತ್ರರಾಷ್ಟ್ರವಾಗಿರುವ ಇಸ್ರೇಲ್ ಗಂಭೀರ ಆರೋಪ ಮಾಡಿದೆ. ಒಂದು ವೇಳೆ ಇರಾನ್ ಇಂತಹ ಸಾಹಸಕ್ಕೆ ಕೈಹಾಕಿದ್ದೇ ಆದಲ್ಲಿ, ಅದು ಇರಾನ್ ಪಾಲಿಗೆ ಭೀಕರ ಪರಿಣಾಮಗಳನ್ನು ತಂದೊಡ್ಡಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕಾರದ ಹಪಹಪಿಯಲ್ಲಿರುವ ಇರಾನ್ ಏನಾದರೂ ಇಂತಹ ಹೆಜ್ಜೆ ಇಟ್ಟರೆ, ಅಮೆರಿಕಾ ತನ್ನ ಮಿತ್ರರಾಷ್ಟ್ರಗಳು ಹಾಗೂ ನ್ಯಾಟೋ (NATO) ಒಕ್ಕೂಟದ ಬಲಿಷ್ಠ ಸೇನಾ ಪಡೆಯನ್ನು ಇರಾನ್ ವಿರುದ್ಧ ಸಜ್ಜುಗೊಳಿಸುವ ಸಾಧ್ಯತೆಯಿದೆ. ಇದು ಇರಾನ್‌ನ ಇಡೀ ಸಾರ್ವಭೌಮತ್ವಕ್ಕೆ ದೊಡ್ಡ ಹೊಡೆತ ನೀಡಲಿದೆ.

ಪ್ರಾದೇಶಿಕ ರಾಜತಾಂತ್ರಿಕತೆಯಲ್ಲಿ ಪಾಕಿಸ್ತಾನದ ಸಂದಿಗ್ಧತೆ: ಮತ್ತೊಂದೆಡೆ, ನೆರೆಯ ದೇಶವಾದ ಪಾಕಿಸ್ತಾನ ಕೂಡ ಈ ಬಿಕ್ಕಟ್ಟಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಕಳೆದ ಬಾರಿ ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ಸಂದರ್ಭದಲ್ಲಿ ಮಧ್ಯಸ್ಥಿಕೆ ವಹಿಸಲು ಯತ್ನಿಸಿದ್ದ ಪಾಕಿಸ್ತಾನದ ಪ್ರಯತ್ನಗಳು ವಿಫಲವಾಗಿದ್ದವು. ಎರಡೂ ದೇಶಗಳು ಪಾಕಿಸ್ತಾನದ ರಾಜತಾಂತ್ರಿಕ ನಡೆಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಆದರೆ, ಪ್ರಸ್ತುತ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ಪಾಕಿಸ್ತಾನವು ಅಮೆರಿಕಾದ ಒತ್ತಡಕ್ಕೆ ಮಣಿದು ಈ ಸಂಘರ್ಷದಲ್ಲಿ ಭಾಗಿಯಾಗಬೇಕಾದ ಅಥವಾ ಪ್ರಮುಖ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಬಹುದು. ಒಂದು ವೇಳೆ ಪಾಕಿಸ್ತಾನ ಈ ಬಿಕ್ಕಟ್ಟಿನಲ್ಲಿ ಅಪ್ರಬುದ್ಧ ನಿರ್ಧಾರ ಕೈಗೊಂಡರೆ, ಅದು ಈಗಾಗಲೇ ಆರ್ಥಿಕವಾಗಿ ಜರ್ಜರಿತವಾಗಿರುವ ಆ ದೇಶಕ್ಕೆ ಮತ್ತಷ್ಟು ಭಾರಿ ನಷ್ಟವನ್ನು ಉಂಟುಮಾಡುವುದು ಖಚಿತ ಎನ್ನಲಾಗುತ್ತಿದೆ.

Exit mobile version