ಯುಜಿಸಿಇಟಿ-2025 ಫಲಿತಾಂಶ ನಾಳೆ ಪ್ರಕಟ: ಸಚಿವ ಎಂ.ಸಿ ಸುಧಾಕರ್‌ರಿಂದ ಬಿಡುಗಡೆ

ಕೆಇಎನಿಂದ ಮೊಬೈಲ್ ಆ್ಯಪ್‌ನಲ್ಲಿ ಹೊಸ ಸೌಲಭ್ಯ

Befunky collage 2025 05 23t183812.126

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯುಜಿಸಿಇಟಿ-2025 (UGCET-2025) ಫಲಿತಾಂಶವನ್ನು ನಾಳೆ (ಮೇ 24, 2025) ಪ್ರಕಟಿಸಲಿದೆ. ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರು ಬೆಳಿಗ್ಗೆ 11:30ಕ್ಕೆ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. ವಿದ್ಯಾರ್ಥಿಗಳು ಮಧ್ಯಾಹ್ನ 2 ಗಂಟೆಯಿಂದ ಕೆಇಎನ ಅಧಿಕೃತ ವೆಬ್‌ಸೈಟ್‌ನಲ್ಲಿ (https://cetonline.karnataka.gov.in/kea/) ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ಈ ವರ್ಷ 3 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಇಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಯುಜಿಸಿಇಟಿ ಪರೀಕ್ಷೆಯನ್ನು ಬರೆದಿದ್ದಾರೆ.

ಫಲಿತಾಂಶ ಪರಿಶೀಲನೆ ವಿಧಾನ

ವಿದ್ಯಾರ್ಥಿಗಳು ತಮ್ಮ ಯುಜಿಸಿಇಟಿ-2025 ಫಲಿತಾಂಶವನ್ನು ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:

ADVERTISEMENT
ADVERTISEMENT
  1. ಕೆಇಎನ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ.

  2. ಮುಖಪುಟದಲ್ಲಿ ‘ಯುಜಿಸಿಇಟಿ-2025 ಫಲಿತಾಂಶ’ ಲಿಂಕ್‌ ಮೇಲೆ ಕ್ಲಿಕ್ ಮಾಡಿ.

  3. ಹೊಸ ಪುಟದಲ್ಲಿ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.

  4. ‘Submit’ ಬಟನ್ ಕ್ಲಿಕ್ ಮಾಡಿದ ನಂತರ ಫಲಿತಾಂಶ ಪ್ರದರ್ಶಿತವಾಗುತ್ತದೆ.

  5. ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.

 

ಪರೀಕ್ಷೆಯ ವಿಶೇಷತೆ

ಯುಜಿಸಿಇಟಿ-2025 ಪರೀಕ್ಷೆಯನ್ನು ವೆಬ್‌ಕಾಸ್ಟಿಂಗ್ ಮತ್ತು ಕ್ಯೂಆರ್ ಕೋಡ್‌ ಆಧಾರಿತ ಮುಖಚಹರೆ ಪತ್ತೆ ವ್ಯವಸ್ಥೆಯ ಮೂಲಕ ನಡೆಸಲಾಗಿತ್ತು. ಈ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಜಾರಿಗೆ ತರಲಾಗಿದ್ದು, ಅಭ್ಯರ್ಥಿಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಪರೀಕ್ಷೆಯು ಸುಗಮವಾಗಿ ಮತ್ತು ಪಾರದರ್ಶಕವಾಗಿ ನಡೆದಿದೆ.

ಕೆಇಎ ಮೊಬೈಲ್ ಆ್ಯಪ್: ವಿದ್ಯಾರ್ಥಿಗಳಿಗೆ ಸೌಲಭ್ಯ

ಕೆಇಎ ಈ ವರ್ಷ ಮೊದಲ ಬಾರಿಗೆ ವಿದ್ಯಾರ್ಥಿ ಸ್ನೇಹಿ ಮೊಬೈಲ್ ಅಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡಿದೆ. ಈ ಆಪ್‌ನಲ್ಲಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಎಲ್ಲ ಮಾಹಿತಿಯೂ ದೊರೆಯುತ್ತದೆ. ಅಭ್ಯರ್ಥಿಗಳು ಈ ಆ್ಯಪ್ ಮೂಲಕ ಅರ್ಜಿ ಸಲ್ಲಿಕೆ, ಆಯ್ಕೆ ದಾಖಲಾತಿ, ಸೀಟು ಆಯ್ಕೆ, ಶುಲ್ಕ ಪಾವತಿ ಮುಂತಾದ ಎಲ್ಲ ಪ್ರಕ್ರಿಯೆಗಳನ್ನು ಸುಲಭವಾಗಿ ನಿರ್ವಹಿಸಬಹುದು.

ಜೊತೆಗೆ, ಆಪ್‌ ಡೌನ್‌ಲೋಡ್ ಮಾಡಿಕೊಂಡವರಿಗೆ ಸಮಯಕ್ಕೆ ತಕ್ಕಂತೆ ಅಲರ್ಟ್ ಸಂದೇಶಗಳು ಕಳುಹಿಸಲಾಗುವುದು. ಈ ಆ್ಯಪ್ ಗ್ರಾಮೀಣ ವಿದ್ಯಾರ್ಥಿಗಳಿಗೆ ಸೈಬರ್ ಸೆಂಟರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ತಾಂತ್ರಿಕ ತೊಡಕುಗಳನ್ನು ತಪ್ಪಿಸಲು ಸಹಾಯಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ತಿಳಿಸಿದ್ದಾರೆ.

Exit mobile version