ನೇಹಾ ಕೊ*ಲೆ ಕೇಸ್: ದರ್ಶನ್‌ಗೆ ಕೊಟ್ಟಂತೆ ನನಗೂ ಜಾಮೀನು ಕೊಡಿ-ಆರೋಪಿ ಫಯಾಜ್!

ನೇಹಾ ಹ*ತ್ಯೆ ಪ್ರಕರಣ: ಫಯಾಜ್‌ನ ಜಾಮೀನು ಅರ್ಜಿಗೆ ನಾಳೆ ತೀರ್ಪು!

1 (13)

ಹುಬ್ಬಳ್ಳಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್, ತನಗೆ ಜಾಮೀನು ನೀಡುವಂತೆ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ಗೆ ಜಾಮೀನು ಮಂಜೂರಾದಂತೆ ತನಗೂ ಜಾಮೀನು ನೀಡಬೇಕೆಂದು ಫಯಾಜ್ ತನ್ನ ಅರ್ಜಿಯಲ್ಲಿ ಕೋರಿದ್ದಾನೆ.

ಈ ಪ್ರಕರಣದ ವಿಚಾರಣೆ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಆಗಸ್ಟ್ 4ರಂದು ಜಾಮೀನು ಅರ್ಜಿಯ ಕುರಿತು ಅಂತಿಮ ಆದೇಶ ಹೊರಬೀಳಲಿದೆ.

ನೇಹಾ ತಂದೆ ನಿರಂಜನ್ ಹಿರೇಮಠ ಈ ಬೆಳವಣಿಗೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ನಟ ದರ್ಶನ್ ತಮ್ಮ ನಟನೆ ಮತ್ತು ಒಳ್ಳೆಯ ಕೆಲಸಗಳಿಂದ ಜನರಿಗೆ ಮಾದರಿಯಾಗಬೇಕಿತ್ತು. ಆದರೆ, ಕೊಲೆ ಆರೋಪಿಗಳಿಗೆ ಜಾಮೀನಿನ ಮೂಲಕ ಮಾದರಿಯಾಗಿದ್ದಾರೆ. ಇದು ನಿಜಕ್ಕೂ ನೋವಿನ ಸಂಗತಿ. ನನ್ನ ಮಗಳಿಗೆ ಆದ ಅನ್ಯಾಯ ಯಾರಿಗೂ ಆಗಬಾರದು,” ಎಂದು ಅವರು ಕಣ್ಣೀರಿಟ್ಟು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಏಪ್ರಿಲ್ 18, 2024ರಂದು ಸಂಜೆ 4:45ರ ಸುಮಾರಿಗೆ, ಫಯಾಜ್ ಎಂಬಾತ ಕಾಲೇಜಿನಿಂದ ಹೊರಬರುತ್ತಿದ್ದ ನೇಹಾ ಹಿರೇಮಠಳನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದ ಎಂದು ಆರೋಪಿಸಲಾಗಿದೆ. ಈ ಘಟನೆಯು ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳಿಗೆ ಕಾರಣವಾಗಿತ್ತು.

Exit mobile version