ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿಶ್ವಗಾಣಿಗರ ಸಮುದಾಯ ಚಾರಿಟೇಬಲ್ ಟ್ರಸ್ಟ್ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠ ದಾಸನಪುರ ಹೋಬಳಿ ಮಾದನಾಯಕನಹಳ್ಳಿ ಅಂಚೆ ಬೆಂಗಳೂರು ರವರಿಗೆ ಸಮಗ್ರ ಅಭಿವೃದ್ಧಿಗಾಗಿ 2011-12ನೇ ಸಾಲಿನಲ್ಲಿ ರೂ 2 ಕೋಟಿ ಹಾಗೂ 2012-13 ನೇ ಸಾಲಿನಲ್ಲಿ ಒಂದು ಕೋಟಿ ಮತ್ತು 2014-15ನೇ ಸಾಲಿನಲ್ಲಿ 2 ಕೋಟಿ ಸೇರಿ ಇಲ್ಲಿ ತನಕ ಮಠದ ಅಭಿವೃದ್ಧಿಗಾಗಿ ಒಟ್ಟು ಎಂಟುವರೆ ಕೋಟಿ ಅನುದಾನವನ್ನು ಸರ್ಕಾರದಿಂದ ಒದಗಿಸಲಾಗಿದೆ.
2011-12ನೇ ಸಾಲಿನಲ್ಲಿ ಮಂಡಿಸಿದ ಆಯವ್ಯದ ಭಾಷಣದ ಕಂಡಿಕೆಯಲ್ಲಿ ಗಾಣಿಗರ ಸಮುದಾಯದ ಗುರುಪೀಠ ಸ್ಥಾಪಿಸಲು 5 ಕೋಟಿ ರೂಗಳನ್ನು ನೀಡುವುದು ಎಂದು ಘೋಷಿಸಲಾಗಿದೆ.
ಈ ಮೂಲಕ ವೈಯಾಲಿ ಕಾವಲ್‌ನಲ್ಲಿರುವ ವಿಶ್ವಗಾಣಿಗರ ಸಮುದಾಯದ ಟ್ರಸ್ಟ್ ಇವರ ವತಿಯಿಂದ ವಿಶ್ವಗಾಣಿಗರ ಗುರುಪೀಠ ಸ್ಥಾಪನೆಗೆ ಹಂತ-ಹಂತವಾಗಿ 5 ಕೋಟಿ ಅನುದಾನವನ್ನ ನೀಡಲಾಗಿದೆ.
ಇದರಲ್ಲಿ ಸಮುದಾಯ ಭವನ ನಿರ್ಮಾಣ, ಕಟ್ಟಡ ನಿರ್ಮಾಣ, ಶೈಕ್ಷಣಿಕ ಉದ್ದೇಶ, ಧಾರ್ಮಿಕ ಚಟುವಟಿಕೆ, ಆಸ್ಪತ್ರೆ ನಿರ್ಮಾಣ, ಆರೋಗ್ಯ ಕೇಂದ್ರ ಮತ್ತು ಅಂಗವಿಕಲರಿಗಾಗಿ ಶಾಲೆ ಸ್ಥಾಪನೆ ಮಾಡಲಾಗುವುದು ಎಂದು ಅನುದಾನವನ್ನು ಸರ್ಕಾರದಿಂದ ಪಡೆದಿದ್ದಾರೆ.
ಸಂಪೂರ್ಣವಾಗಿ ಈ ಗುರುಪೀಠ ಸ್ಥಾಪನೆಗೆ ಸರ್ಕಾರವೇ ಅನುದಾನವನ್ನು ಒದಗಿಸಿರುವುದು ಇಲ್ಲಿ ಸ್ಪಷ್ಟವಾಗಿದೆ.
2022-23ನೇ ಸಾಲಿನಲ್ಲಿ ಸರ್ಕಾರದ ಆದೇಶ ಸಂಖ್ಯೆ: ಹಿಂವಕ 621 ಬಿಎಂಎಸ್ 2022 ದಿನಾಂಕ 18.10.2022 ರಲ್ಲಿ ಮೂರುವರೆ ಕೋಟಿ ಅನುದಾನವನ್ನು ಸರ್ಕಾರದ ಮಾರ್ಗಸೂಚಿಗಳನ್ನು ದಾಖಲೆಗಳನ್ನು ಪಡೆದು ಬಿಡುಗಡೆ ಮಾಡಲು ಮಂಜೂರು ಮಾಡಿ ಆದೇಶಿಸಲಾಗಿತ್ತು.
ಅದರಂತೆ ಸದರಿ ಸಂಸ್ಥೆಯವರಿಂದ ಮಾರ್ಗಸೂಚಿಗಳನ್ವಯ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿತ್ತು. ಮಾರ್ಗಸೂಚಿಗಳನ್ನು ಅಗತ್ಯವಾದ ಎಲ್ಲಾ ದಾಖಲಾತಿಗಳನ್ನ ಸಲ್ಲಿಸದಿದ್ದ ಕಾರಣಗಳಿಂದಾಗಿ ಹಾಗೂ ಈಗಾಗಲೇ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯಗಳ ಕಟ್ಟಡಗಳು, ತಿಳಿಸಿ ಸಂಸ್ಥಾನ ಮಠದ ಸುತ್ತ ಕಾಂಪೌಂಡ್ ಗೋಡೆ ನಿರ್ಮಾಣ ಪ್ರವಚನ ಕೊಠಡಿ ಮತ್ತು ಸ್ವಾಮಿಗಳ ವಾಸದ ಕೊಟ್ಟಡಿಗಳ ನಿರ್ಮಾಣ ಕಾಮಗಾರಿಗಳನ್ನು ಒಳಗೊಂಡಂತಹ ಅಂದಾಜು ಪಟ್ಟಿ ಹಾಗೂ ಸಂಸ್ಥೆಯವರು ದಾಖಲಾತಿ ಸಲ್ಲಿಸಿದರು.
ಈ ಮೇಲಿನ ಕಾಮಗಾರಿಗಳಿಗೆ ಪ್ರತ್ಯೇಕವಾಗಿ ಅನುದಾನ ನೀಡಲು ಮಾರ್ಗಸೂಚಿಗಳ ಅನ್ವಯ ಅವಕಾಶವಿಲ್ಲದ ಕಾರಣ ಈ ಕುರಿತು ಸರ್ಕಾರಕ್ಕೆ ಸ್ಪಷ್ಟನೆ ಮಾರ್ಗದರ್ಶನ ನೀಡುವಂತೆ ಕೋರಲಾಗಿತ್ತು.
ಸರ್ಕಾರದ ಆದೇಶ ಸಂಖ್ಯೆ ಹಿಂವಕ 621 ಬಿಎಂಎಸ್ 2022 ದಿನಾಂಕ 18-1 2023 ರಲ್ಲಿ ಈ ಹಿಂದಿನ ಮುಖ್ಯಮಂತ್ರಿ ಅವರು ಹಿಂದೆ ಮಂಜೂರಾಗಿದ್ದ ರೂ 3.5 ಕೋಟಿಗಳ ಅನುದಾನವನ್ನು ರದ್ದುಪಡಿಸಿ ಎರಡು ಕೋಟಿಗೆ ಸೀಮಿತಗೊಳಿಸಿ ಎಂದು ಆದೇಶ ಮಾಡಿದ್ದರು.
ಹಿಂದುಳಿದ ವರ್ಗಗಳ ಜಾತಿ ಜನಾಂಗಗಳ ಸಮುದಾಯದ ಚಟುವಟಿಕೆಗಳನ್ನು ಹಾಗೂ ವಿದ್ಯಾರ್ಥಿ ನಿಲಯಗಳನ್ನು ನಡೆಸಲು ವಿವಿಧ ಹಿಂದುಳಿದ ವರ್ಗಗಳ ಜಾತಿಗಳಿಗೆ ಸೇರಿದ ಸಂಘ ಸಂಸ್ಥೆಗಳಿಗೆ ಸಮುದಾಯ ಭವನ ವಿದ್ಯಾತಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನವನ್ನು ಮಂಜೂರು ಮಾಡುವ ಉದ್ದೇಶವನ್ನು ಹೊಂದಿದೆ.
ಸಹಾಯಧನ ಪಡೆಯುವ ಸಂಸ್ಥೆಯು ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಕಾಯ್ದೆ 1960 ಅಥವಾ ಟ್ರಸ್ಟ್ ಕಾಯ್ದೆಯ ಅನ್ವಯ ನೋಂದಣಿ ನಿಯಮಗಳ ಅನ್ವಯ ಸಂಸ್ಥೆಗಳಾಗಿರಬೇಕು.
ಸಂಸ್ಥೆಯು ನೋಂದಣಿಯಾಗಿ ಕನಿಷ್ಠ ಎರಡು ವರ್ಷಗಳಾಗಿರಬೇಕು.
ಸಹಾಯಧನ ಬಯಸುವ ಸಂಘ ಸಂಸ್ಥೆಗಳು ಅಥವಾ ಟ್ರಸ್ಟ್ ಗಳು ಹಿಂದಿನ ಎರಡು ವರ್ಷಗಳ ಆಡಿಟ್ ವರದಿಗಳನ್ನು ಚಾರ್ಟರ್ಡ್ ಅಕೌಂಟೆಂಟ್ ರವರಿಂದ ಆಡಿಟ್ ಮಾಡಿಸಿ ಅರ್ಜಿಯೊಂದಿಗೆ ಸಲ್ಲಿಸಬೇಕು.
ಸಮುದಾಯ ಭವನ, ವಿದ್ಯಾರ್ಥಿ ನಿಲಯದ ಕಟ್ಟಡದ ನಿರ್ಮಾಣಕ್ಕೆ ಅನುದಾನ ಬಯಸುವವರು ಅಂದಾಜು ವೆಚ್ಚದ ಕನಿಷ್ಠ 25% ರಷ್ಟು ಮೊತ್ತವನ್ನು ಅವರ ಸ್ವಂತ ಸಂಪನ್ಮೂಲಗಳಿಂದ ಭರಿಸಬೇಕು ಎಂಬ ಇತ್ಯಾದಿ ಮಾರ್ಗಸೂಚಿ ಇದೆ. ಆದರೆ ಗಾಣಿಗ ಮಠಕ್ಕೆ ಈ ಮಾರ್ಗಸೂಚಿಗಳಿಂದ ವಿನಾಯಿತಿ ನೀಡಲಾಗಿರುತ್ತದೆ.
ಸದರಿ ಸಂಸ್ಥೆಗೆ ಮಂಜೂರಾಗಿರುವ ಎರಡು ಕೋಟಿಗಳನ್ನು ಆಯುಕ್ತಾಲಯ ಸಂಪೂರ್ಣವಾಗಿ ಬಿಡುಗಡೆ ಮಾಡಿದೆ.
ಈ ಹಿಂದಿನ ಮುಖ್ಯಮಂತ್ರಿಯವರು ಗಾಣಿಗ ಮಠದ ಪ್ರಕರಣದಲ್ಲಿ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮೂರುವರೆ ಕೋಟಿಗೆ ಬದಲಾಗಿ ಎರಡು ಕೋಟಿ ಅನುದಾನ ನೀಡುವಂತೆ ಆದೇಶಿಸಿದ್ದರು. ಅದರಂತೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಈ ಹಿಂದಿನ ಮುಖ್ಯಮಂತ್ರಿ ಅವರ ಆದೇಶದಂತೆ ಮೂರುವರೆ ಕೋಟಿ ಅನುದಾನವನ್ನ ಎರಡು ಕೋಟಿಗೆ ಮಿತಿಗೊಳಿಸಿ ಆದೇಶ ಮಾಡಿರುವಂತೆ ಎರಡು ಕೋಟಿ ಅನುದಾನವನ್ನ ಪೂರ್ಣ ಪ್ರಮಾಣದಲ್ಲಿ ಈ ಮಠಕ್ಕೆ ಬಿಡುಗಡೆ ಮಾಡಲಾಗಿದೆ. ತದನಂತರ ಪುಟ್ಟಸ್ವಾಮಿಯವರು ಆರ್ಥಿಕ ಇಲಾಖೆಯನ್ನು ನೇರವಾಗಿ ಸಂಪರ್ಕಿಸಿ ಬಾಕಿ ಬಿಡುಗಡೆ ಮಾಡಬೇಕಾಗಿರುವ ಒಂದುವರೆ ಕೋಟಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿರುತ್ತಾರೆ.
ಅಂತೆ ಆರ್ಥಿಕ ಇಲಾಖೆಯು ಬಾಕಿ ಬಿಡುಗಡೆ ಮಾಡಬೇಕಿರುವ ಒಂದೂವರೆ ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಸಮ್ಮತಿಸಿದೆ ಎಂದು ತಿಳಿಸಿ ಟಿಪ್ಪಣಿ ನೀಡಿತ್ತು. ಆದರೆ ಈಗಾಗಲೇ ಮಂಜುರಾಗ ಬೇಕಿರುವ ಮೊತ್ತದ ಅನುದಾನ ಬಿಡುಗಡೆ ಮಾಡಿರುವುದರಿಂದ ಬಾಕಿ ಬಿಡುಗಡೆ ಮಾಡಬೇಕಾದ ಮೊತ್ತದ ಪ್ರಶ್ನೆ ಉದ್ಭವಿಸುವುದಿಲ್ಲ ಹಾಗೂ ಅನುದಾನದ ಲಭ್ಯತೆಯ ಬಗ್ಗೆ ಆರ್ಥಿಕ ಇಲಾಖೆಯ ಸ್ಪಷ್ಟೀಕರಣ ಕೋರಲಾಗುತ್ತದೆ.
ಅದರಂತೆ ಆರ್ಥಿಕ ಇಲಾಖೆಯು ದಿನಾಂಕ 29.03.2025 ರಂದು 25ರ ಟಿಪ್ಪಣಿಯಲ್ಲಿ ಬಾಕಿ ನೀಡಬೇಕಾಗಿರುವ ಒಂದೂವರೆ ಕೋಟಿ ಅನುದಾನವನ್ನು 2024- 25ನೇ ಆಯವ್ಯಯದಲ್ಲಿ ಭರಿಸುವಂತೆ ತಿಳಿಸಿರುತ್ತದೆ. ಅದರಂತೆ ಒಂದೂವರೆ ಕೋಟಿ ಅನುದಾನವನ್ನು ಸರ್ಕಾರದಿಂದ ಮಂಜೂರಾತಿ ಆದೇಶ ಹೊರಡಿಸಿ ಅನುದಾನವನ್ನ ಈ ಸಂಸ್ಥೆಗೆ ಬಿಡುಗಡೆ ಮಾಡಲಾಗಿರುತ್ತದೆ. ಹಾಗಾಗಿ ಈ ಸಂಸ್ಥೆಗೆ ಅಥವಾ ಮಠಕ್ಕೆ ಅನುದಾನ ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ಭ್ರಷ್ಟಾಚಾರ ಅಥವಾ ವಿಳಂಬವಾಗಲಿ ನಡೆದಿಲ್ಲ.





