ಧರ್ಮಸ್ಥಳ ಪ್ರಕರಣ: ಸ್ಪಾಟ್ 9ರಲ್ಲಿ ಸಿಗಲೇ ಇಲ್ಲ ಕಳೇಬರ, 10ನೇ ಗುಂಡಿ ಅಗೆಯಲು SIT ಸಿದ್ಧತೆ!

ಅನಾಮಿಕ ತೋರಿಸಿದ ನಿರ್ಣಾಯಕ 9ನೇ ಪಾಯಿಂಟ್‌‌‌‌‌‌ ಠುಸ್‌ ಪಟಾಕಿ!

1

ಮಂಗಳೂರು: ನೇತ್ರಾವತಿ ತೀರದ ಧರ್ಮಸ್ಥಳ-ಉಜಿರೆ ರಸ್ತೆಯ ಸ್ಪಾಟ್ ನಂ.9 ರಲ್ಲಿ ‘ಆಪರೇಷನ್ ಅಸ್ಥಿಪಂಜರ’ ಕಾರ್ಯಾಚರಣೆಯ ಆರನೇ ದಿನದಂದು ಯಾವುದೇ ಶವಗಳ ಅಸ್ಥಿಪಂಜರ ಸಿಗದೇ SIT ತಂಡಕ್ಕೆ ನಿರಾಸೆಯಾಗಿದೆ. ಅನಾಮಿಕ ವ್ಯಕ್ತಿಯೊಬ್ಬರು ಸ್ಪಾಟ್ 9 ರಲ್ಲಿ ಶವಗಳಿರುವುದಾಗಿ ಒತ್ತಾಯಿಸಿದ್ದರೂ, 6 ಅಡಿ ಆಳದವರೆಗೆ ಮಿನಿ ಜೆಸಿಬಿಯಿಂದ ಅಗೆದರೂ ಒಂದು ಚೂರು ಮೂಳೆಯಾಗಲೀ, ಬಟ್ಟೆಯಾಗಲೀ ಸಿಗಲಿಲ್ಲ. ಈಗ SIT ತಂಡವು 10ನೇ ಗುಂಡಿಯ ಶೋಧಕ್ಕೆ ಸಿದ್ಧತೆ ನಡೆಸಿದ್ದು, ಈ ಪ್ರಕರಣ ರಾಜ್ಯಾದ್ಯಂತ ಕುತೂಹಲ ಮೂಡಿಸಿದೆ.

ಸ್ಪಾಟ್ ನಂ.9 ರಲ್ಲಿ ಶವಗಳಿರುವ ಬಗ್ಗೆ ಅನಾಮಿಕ ವ್ಯಕ್ತಿಯ ಮಾಹಿತಿಯ ಆಧಾರದ ಮೇಲೆ SIT ತಂಡವು ತೀವ್ರ ಕಾರ್ಯಾಚರಣೆ ನಡೆಸಿತು. ಆದರೆ, ಯಾವುದೇ ಸಾಕ್ಷ್ಯ ಸಿಗದ ಕಾರಣ, ಸಿಬ್ಬಂದಿಯು 9ನೇ ಗುಂಡಿಯನ್ನು ಮುಚ್ಚಿದ್ದಾರೆ. ಈಗ ತಂಡವು ಸ್ಪಾಟ್ ನಂ.10 ರ ಶೋಧಕ್ಕೆ ಗಮನ ಹರಿಸಿದ್ದು, ಕೆಲವೇ ಕ್ಷಣಗಳಲ್ಲಿ ಅಗೆಯುವ ಕೆಲಸ ಆರಂಭವಾಗಲಿದೆ. ಈ ಕಾರ್ಯಾಚರಣೆಯ ಫಲಿತಾಂಶದ ಮೇಲೆ ಈ ಪ್ರಕರಣದ ಮುಂದಿನ ದಿಕ್ಕನ್ನು ನಿರ್ಧರಿಸಲಾಗುವುದು.

ನೇತ್ರಾವತಿ ತೀರದ ಈ ರಹಸ್ಯಮಯ ಕಾರ್ಯಾಚರಣೆಯು ಸ್ಥಳೀಯರಲ್ಲಿ ಮಾತ್ರವಲ್ಲದೆ ರಾಜ್ಯದಾದ್ಯಂತ ಭಾರೀ ಆಸಕ್ತಿಯನ್ನು ಹುಟ್ಟುಹಾಕಿದೆ. 10ನೇ ಗುಂಡಿಯಲ್ಲಿ ಶವಗಳು ಅಥವಾ ಯಾವುದೇ ಸಾಕ್ಷ್ಯ ಸಿಗುತ್ತದೆಯೇ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Exit mobile version