ಧರ್ಮಸ್ಥಳ ಶವ ಪ್ರಕರಣ: ಇಂದು 13ನೇ ಪಾಯಿಂಟ್ ಭೂಗರ್ಭ ರಹಸ್ಯ ಬಯಲಿಗೆಳೆಯುತ್ತಾ ಜಿಪಿಆರ್ ಯಂತ್ರ?

ನೇತ್ರಾವತಿ ತೀರದಲ್ಲಿ ಭೂಗರ್ಭ ಶೋಧ: ಇಂದು 13ನೇ ಪಾಯಿಂಟ್ ನತ್ತ ಎಲ್ಲರ ಚಿತ್ತ!

Your paragraph text

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ 13ನೇ ಪಾಯಿಂಟ್ ಎಂಬ ಕುತೂಹಲಕಾರಿ ಸ್ಥಳದಲ್ಲಿ, ಭೂಗರ್ಭ ರಹಸ್ಯ ಬಯಲಿಗೆಳೆಯುವ ನಿಟ್ಟಿನಲ್ಲಿ ಸೋಮವಾರ ಜಿಪಿಆರ್ (Ground Penetrating Radar) ಯಂತ್ರದ ಮೂಲಕ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಗಿದೆ.

ದೆಹಲಿಯಿಂದ ಬಂದಿದ್ದ ಡ್ರೋನ್-ಮೌಂಟೆಡ್ ಜಿಪಿಆರ್ ಉಪಕರಣವನ್ನು ನೇತ್ರಾವತಿ ಅಜೆಕುರಿ ರಸ್ತೆಯ ಸಮೀಪ, ನೇತ್ರಾವತಿ ನದಿ ಪಕ್ಕದ ಕಿಂಡಿ ಅಣೆಕಟ್ಟಿನ ಬಳಿಯಲ್ಲಿ ಹಾರಿಸಿ ಪರಿಶೀಲನೆ ಮಾಡಲಾಗಿದೆ.

ಈ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಕೆಲ ದಿನಗಳಿಂದ ಮುಂದೂಡಲ್ಪಟ್ಟಿತ್ತು. ಸೋಮವಾರದ ಪ್ರಾಯೋಗಿಕ ಹಂತದ ನಂತರ, ಇಂದು ಮಂಗಳವಾರದಿಂದ ಅಧಿಕೃತ ಶೋಧ ಕಾರ್ಯಾಚರಣೆ ಪ್ರಾರಂಭವಾಗುವ ಸಾಧ್ಯತೆ ಇದೆ.

ಸುಮಾರು 60 ಅಡಿ ಉದ್ದ ಮತ್ತು 30 ಅಡಿ ಅಗಲದ ಪ್ರದೇಶದಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಪೌರಕಾರ್ಮಿಕರು ತೆರವುಗೊಳಿಸಿದ್ದಾರೆ. ಸ್ಥಳ ಸ್ವಚ್ಛತೆ ಮುಗಿದಿರುವುದರಿಂದ ಇಂದು (ಮಂಗಳವಾರ) ಶೋಧ ಕಾರ್ಯಾಚರಣೆ ಇನ್ನಷ್ಟು ವೇಗ ಪಡೆಯುವ ನಿರೀಕ್ಷೆ ಇದೆ.

ಧರ್ಮಸ್ಥಳದ ಈ ಭೂಗರ್ಭ ಶೋಧ ಕಾರ್ಯಾಚರಣೆ ಸ್ಥಳೀಯರು ಮತ್ತು ಭಕ್ತರಲ್ಲಿ ಕುತೂಹಲವನ್ನು ಹುಟ್ಟಿಸಿದೆ. 13ನೇ ಪಾಯಿಂಟ್‌ನಲ್ಲಿ ಏನು ಪತ್ತೆಯಾಗಲಿದೆ ಎಂಬುದರತ್ತ ಈಗ ಎಲ್ಲರ ದೃಷ್ಟಿ ನೆಟ್ಟಿದೆ.

Exit mobile version