ಹಾವನ್ನು ನುಂಗಿದ ಕಪ್ಪೆ,ಅಪರೂಪದ ದೃಶ್ಯ ಕಂಡು ಬೆರಗಾದ ಸ್ಥಳೀಯರು..!

Untitled design 2025 10 18t122611.552

ಪ್ರಕೃತಿಯಲ್ಲಿ ಹಾವು ಕಪ್ಪೆಯನ್ನು ನುಂಗುವುದು ಸಾಮಾನ್ಯ. ಆದರೆ ಕಪ್ಪೆಯೇ ತನ್ನ ಗಾತ್ರಕ್ಕಿಂತ ದೊಡ್ಡದಾದ ಹಾವನ್ನು ನುಂಗುವುದು ಅಪರೂಪ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಾವಿನಕೆರೆ ಸಮೀಪದ ಹಂದಿಗೋಡು ಗ್ರಾಮದಲ್ಲಿ ನಡೆದಿರುವುದು ಇಂಥದೇ ಅದ್ಭುತ ಘಟನೆ.

ಪ್ರಕೃತಿ ಪ್ರೇಮಿ ಪೂರ್ಣಚಂದ್ರ ಅವರ ಮನೆ ಬಳಿ ಸಂಭವಿಸಿದ ಈ ಘಟನೆಯನ್ನು ಸ್ಥಳೀಯರು ನೋಡಿದ್ದಾರೆ. ‘ಹಗಳ’ ಜಾತಿಯ ಹಾವೊಂದನ್ನು ಒಂದು ಕಪ್ಪೆ ತಲೆ ಮುಂದಾಗಿ ನುಂಗಲು ಆರಂಭಿಸಿದಾಗ, ಸುತ್ತಮುತ್ತಲಿದ್ದ ಇತರ ಹಾವುಗಳು ತಮ್ಮ ಸಹಜ ಪ್ರವೃತ್ತಿಯಂತೆ ಬಂದು ಹಾವನ್ನು ಬಿಡಿಸಲು ಯತ್ನಿಸಿದವು. ಆದರೆ ಕಪ್ಪೆ ಅರ್ಧದಷ್ಟು ನುಂಗಿದ ಹಾವನ್ನು ಸಂಪೂರ್ಣವಾಗಿ ನುಂಗಿ ಮುಗಿಸಿತು.

ಸಾಮಾನ್ಯವಾಗಿ ಹಾವುಗಳು ಕಪ್ಪೆಗಳನ್ನು ತಿನ್ನುವ ಪ್ರಾಣಿಗಳಾಗಿವೆ. ಆಹಾರ ಸರಪಳಿಯಲ್ಲಿ ಹಾವುಗಳು ಕಪ್ಪೆಗಳ ಮೇಲೆ ಆಧಿಪತ್ಯ ಸ್ಥಾಪಿಸಿರುತ್ತವೆ. ಆದರೆ ಈ ಘಟನೆಯಲ್ಲಿ ಆಹಾರ ಸರಪಳಿಯ ನಿಯಮವೇ ಉಲ್ಟಾ ಆಗಿದೆ. ಕಪ್ಪೆಯು ತನ್ನ ಗಾತ್ರಕ್ಕಿಂತ ದೊಡ್ಡದಾದ ಹಾವನ್ನು ನುಂಗುವುದು ಸ್ಥಳೀಯರು ನೋಡಿ ಆಶ್ಚರ್ಯಗೊಂಡಿದ್ದಾರೆ

ನಾನು ಜೀವನದಲ್ಲಿ ಹಲವು ಬಾರಿ ಹಾವು ಕಪ್ಪೆಯನ್ನು ನುಂಗುವುದನ್ನು ನೋಡಿದ್ದೇನೆ. ಆದರೆ ಕಪ್ಪೆ ಹಾವನ್ನು ನುಂಗುವುದನ್ನು ಇದೇ ಮೊದಲ ಬಾರಿ ನೋಡುತ್ತಿದ್ದೇನೆ ಎಂದು ಸ್ಥಳೀಕರು ತಮ್ಮ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಪ್ರಾಣಿಶಾಸ್ತ್ರದಲ್ಲಿ ಇಂತಹ ವಿಲೋಮ ಆಹಾರ ಸಂಬಂಧಗಳು ಅಪರೂಪವೇನಲ್ಲ. ಕೆಲವು ಕಪ್ಪೆ ಜಾತಿಗಳು ಸಣ್ಣ ಹಾವುಗಳನ್ನು ತಿನ್ನುವುದು ದಾಖಲಾಗಿದೆ. ಆದರೆ ತನ್ನ ಗಾತ್ರಕ್ಕಿಂತ ದೊಡ್ಡದಾದ ಹಾವನ್ನು ನುಂಗುವುದು ವಿಶೇಷವಾದ ಸಂಗತಿ.

Exit mobile version