ಚಿಕ್ಕಬಳ್ಳಾಪುರ: ಮದುವೆಯಾದ ಕೇವಲ 15 ದಿನಗಳಲ್ಲಿ ಪತಿಗೆ ಕೈಕೊಟ್ಟು ಮನೆಯಲ್ಲಿದ್ದ ಚಿನ್ನಾಭರಣಗಳೊಂದಿಗೆ ಯುವತಿ ಪರಾರಿಯಾಗಿರುವ ಘಟನೆ ಚಿಜಕ್ಕಬಳ್ಳಾಪುರದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಭಾಸ್ಕರ್ ಎಂಬುವವರು ವಿವಾಹವಾಗಲು ಹುಡುಗಿಯ ಹುಡುಕಾಟದಲ್ಲಿದ್ದರು. ಈ ವೇಳೆ ಕೆಲವು ಮಧ್ಯವರ್ತಿಗಳ (ಬ್ರೋಕರ್) ಸಂಪರ್ಕಕ್ಕೆ ಬಂದ ಭಾಸ್ಕರ್ ಅವರಿಗೆ, ಬಾಗೇಪಲ್ಲಿ ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮದ ನೇತ್ರ ಎಂಬಾಕೆಯ ಪರಿಚಯ ಮಾಡಿಕೊಡಲಾಗಿತ್ತು. ಬ್ರೋಕರ್ ಗಳ ಮಾತು ನಂಬಿದ ಭಾಸ್ಕರ್, ಒಂದೇ ದಿನದಲ್ಲಿ ಹುಡುಗಿಯನ್ನು ನೋಡಿ, ಅದೇ ದಿನ ವಿವಾಹವಾಗಲು ಒಪ್ಪಿಕೊಂಡಿದ್ದರು.ಬಳಿಕ ಅದೇ ದಿನ ಸರಳವಾಗಿ ಕುಟುಂಬದ ಸಮ್ಮುಖದಲ್ಲಿ ವಿವಾಹವೂ ಆಗಿತ್ತು.
ಮದುವೆಯಾದ ನಂತರ ಈ ನವಜೋಡಿ ಚಿಂತಾಮಣಿ ತಾಲ್ಲೂಕಿನ ಗೌನಿಚೆರುವುಪಲ್ಲಿ ಗ್ರಾಮದಲ್ಲಿರುವ ಪತಿಯ ಮಾವ ವೆಂಕಟರವಣರೆಡ್ಡಿ ಅವರ ಮನೆಯಲ್ಲಿದ್ದರು.ಕಳೆದ 15 ದಿನಗಳಿಂದ ಸಂಸಾರ ನಡೆಸುತ್ತಿದ್ದ ನೇತ್ರ, ಇತ್ತೀಚೆಗೆ ಭಾಸ್ಕರ್ ಅವರು ಕೆಲಸದ ನಿಮಿತ್ತ ಮದನಪಲ್ಲಿಗೆ ತೆರಳಿದ್ದರು. ಗಂಡ ಮನೆಯಲ್ಲಿ ಇಲ್ಲದ ಸಮಯವನ್ನೇ ಬಳಸಿಕೊಂಡ ನೇತ್ರ, ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ. ಭಾಸ್ಕರ್ ಮದನಪಲ್ಲಿಯಿಂದ ಹಿಂದಿರುಗಿ ಬರುವಷ್ಟರಲ್ಲಿ ಪತ್ನಿ ನಾಪತ್ತೆಯಾಗಿದ್ದು ಕಂಡು ಆಘಾತಕ್ಕೊಳಗಾಗಿದ್ದಾರೆ.
ಬಳಿಕ ಈ ಯುವತಿಯ ಬಗ್ಗೆ ತಿಳಿಯುತ್ತಿದ್ದಂತೆ ಭಾಸ್ಕರ್ ಆಘಾತಕ್ಗಕೊಳಗಾಗಿದ್ದಾನೆ ಕಾರಣ, ಯುವತಿಗೆ ಈಗಾಗಲೆಏ ಮದುವೆಯಾಗಿದ್ದು, ಮಕ್ಕಳು ಸಹ ಇದ್ದರು ಎಂದು ತಿಳಿದುಬಂದಿದೆ. ಈ ಕುರಿತು ಬ್ರೋಕರ್ ಗಳಾಗಲಿ ಅಥವಾ ನೇತ್ರಳ ಕುಟುಂಬದವರಾಗಲಿ ಭಾಸ್ಕರ್ ರಿಂದ ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಕೂಡಲೆ ಭಾಸ್ಕರ್ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಬ್ರೋಕರ್ ಗಳು ಮತ್ತು ನೇತ್ರ ಸೇರಿಕೊಂಡು ತನಗೆ ಮೋಸ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.