ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರ ದಾಳಿ ಘಟನೆ ದೇಶದದ್ಯಾಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಜೀವಕಳೆದುಕೊಂಡಿದ್ದು, ಈ ಪೈಕಿ ಕರ್ನಾಟಕದ ಮಂಜುನಾಥ್ ರಾವ್ ಮತ್ತು ಭರತ್ ಭೂಷಣ್ ಅವರೂ ಸೇರಿದ್ದಾರೆ. ದಾಳಿಯ ಬಳಿಕ ಮೃತಪಟ್ಟ ಕುಟುಂಬಗಳು ಹಾಗೂ ಜನತೆಗೆ ಸಾಂತ್ವನ ನೀಡಲು ಪ್ರಧಾನಿ ಸೇರಿದಂತೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಹೀನ ಕೃತ್ಯದ ನಡುವೆ ಬಾಲಿವುಡ್‌ನ ಬಾದ್ ಷಾ ಶಾರುಖ್ ಖಾನ್ ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. “ನಾನು ಕಾಶ್ಮೀರಕ್ಕೆ ಮಾತ್ರ ಹೋಗಲ್ಲ” ಎಂಬ ಮಾತು ಮತ್ತೆ ಗಮನ ಸೆಳೆಯುತ್ತಿದೆ.
ಶಾರುಖ್ ಖಾನ್ ಅವರ ಕಾಶ್ಮೀರ ಕುರಿತು ಭಾವನಾತ್ಮಕ ಸಂಬಂಧ
2012ರಲ್ಲಿ ‘ಜಬ್ ತಕ್ ಹೈ ಜಾನ್’ ಚಿತ್ರ ಶೂಟಿಂಗ್ ವೇಳೆ ಶಾರುಖ್ ಖಾನ್ ಕಾಶ್ಮೀರಕ್ಕೆ ಭೇಟಿ ನೀಡಿದ್ರು. ನಂತರ 2023ರಲ್ಲಿ ‘ಡಂಕಿ’ ಚಿತ್ರದ ಕೆಲವು ದೃಶ್ಯಗಳ ಚಿತ್ರೀಕರಣಕ್ಕೂ ಅವರು ಕಾಶ್ಮೀರಕ್ಕೆ ತೆರಳಿದ್ದರು. ಆದರೆ ಇವೆರಡನ್ನು ಬಿಟ್ಟರೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬಾರಿಯೂ ಕಾಶ್ಮೀರಕ್ಕೆ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿಲ್ಲ.
ಈ ನಿರ್ಧಾರದ ಹಿಂದೆ ಭಾವನಾತ್ಮಕ ಕಾರಣವಿದೆ ಎಂದು ಹೇಳಿದ್ದಾರೆ. ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರು ತಮ್ಮ ತಂದೆಗೆ ನೀಡಿದ ಭರವಸೆ ಬಗ್ಗೆ ವಿವರಿಸಿದ್ದಾರೆ.
“ನನ್ನ ತಂದೆಯ ತಾಯಿ ಕಾಶ್ಮೀರಿ. ‘ನಾನು ನಿನ್ನ ಜೊತೆ ಕಾಶ್ಮೀರವನ್ನು ತೋರಿಸುತ್ತೇನೆ. ನೀನು ನನ್ನಿಲ್ಲದೆ ಕಾಶ್ಮೀರಕ್ಕೆ ಹೋಗಬೇಡ’ ಎಂದು ನನ್ನ ತಂದೆ ಎಂದಿದ್ದರು. ಆದರೆ ನನ್ನ ತಂದೆ ಚಿಕ್ಕ ವಯಸ್ಸಿನಲ್ಲೇ ನಿಧನರಾದರು. ನಾನು ಇಡೀ ಜಗತ್ತನ್ನು ಸುತ್ತಿದ್ರು, ಆದರೆ ಕಾಶ್ಮೀರಕ್ಕೆ ಕೇವಲ ಕೆಲಸಕ್ಕಾಗಿ ಹೋಗಿದ್ದೇನೆ. ನನ್ನ ತಂದೆಯ ಮಾತನ್ನು ಪಾಲಿಸುವ ನಂಬಿಕೆಯಿಂದ ನಾನು ಇದುವರೆಗೆ ಮನಸ್ಸಿನಿಂದ ಕಾಶ್ಮೀರ ಪ್ರವಾಸ ಮಾಡಿಲ್ಲ.”
ಈ ಮಾತುಗಳು ಪುನಃ ವೈರಲ್ ಆಗುತ್ತಿರುವುದು, ಈಗ ನಡೆದ ಭೀಕರ ಉಗ್ರ ದಾಳಿಯ ಹಿನ್ನಲೆಯಲ್ಲಿ, ಶಾರುಖ್ ಖಾನ್ ಅವರ ಮಾತುಗಳು ವೈರಲ್ ಆಗ್ತಿದೆ.
ಕಾಶ್ಮೀರವನ್ನು ಶಾಂತಿಯ ತೋಟವೆಂದು ಕರೆಯಲಾಗುತ್ತಿತ್ತು. ಆದರೆ ಇತ್ತೀಚಿನ ದಾಳಿಗಳು, ಪ್ರವಾಸೋದ್ಯಮದ ಮೇಲೆ ದೊಡ್ಡ ಹೊಡೆತ ನೀಡಿವೆ. ಪ್ರವಾಸಿಗರ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದರ ಜೊತೆಗೆ ಶಾರುಖ್ ಖಾನ್ ಅವರು ಜನಪ್ರಿಯ ನಟರು ತಮ್ಮ ಭಾವನಾತ್ಮಕ ಸಂಬಂಧವನ್ನು ಹಂಚಿಕೊಳ್ಳುವ ಮೂಲಕ ಕಾಶ್ಮೀರದ ಮೇಲಿನ ಎಲ್ಲರ ನಂಟು ಹಾಗೂ ಭರವಸೆ ಯನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ.





