ADVERTISEMENT

ದಳಪತಿ-ಪ್ರಭಾಸ್ ಫೈಟ್.. ಸಂಕ್ರಾಂತಿ-ಪೊಂಗಲ್‌‌ ದಂಗಲ್

ರಾಕಿಭಾಯ್ ಟಾಕ್ಸಿಕ್ ಎದುರು ಧುರಂಧರ್-2 ಕಮಿಂಗ್

ಈ ವರ್ಷ ಇಂಡಿಯನ್ ಸಿನಿದುನಿಯಾನ ಅವಲೋಕಿಸಿದ್ರೆ ಕನ್ನಡದ ಜೊತೆ ತಮಿಳು ಇಂಡಸ್ಟ್ರಿ ಕೂಡ ಡಲ್ ಹೊಡೆದಿತ್ತು. ಆದ್ರೆ ಹೊಸ ವರ್ಷಕ್ಕೆ ಸ್ಯಾಂಡಲ್‌ವುಡ್‌‌ನಂತೆ ಪರಭಾಷೆಗಳಲ್ಲೂ ಒಳ್ಳೊಳ್ಳೆಯ ಸಿನಿಮಾಗಳ ಲೈನಪ್ ಇದೆ. ಸಂಕ್ರಾಂತಿ-ಪೊಂಗಲ್‌‌ನಿಂದಲೇ ಸಿನಿಮೋತ್ಸವ ಶುರುವಾಗ್ತಿದ್ದು, ಯಾವ್ಯಾವ ಸೂಪರ್ ಸ್ಟಾರ್ ಬಕೆಟ್‌‌‌ನಲ್ಲಿ ಎಷ್ಟೆಷ್ಟು ಚಿತ್ರಗಳಿವೆ..? ರಶ್ಮಿಕಾ-ವಿಜಯ್ ವೆಡ್ಡಿಂಗ್ ಅಪ್ಡೇಟ್ಸ್‌ ಸಹ ಇಲ್ಲಿದೆ ನೋಡಿ.

RelatedPosts

ADVERTISEMENT
ADVERTISEMENT

ದಳಪತಿ-ಪ್ರಭಾಸ್ ಫೈಟ್.. ಸಂಕ್ರಾಂತಿ-ಪೊಂಗಲ್‌‌ ದಂಗಲ್

ವಿಜಯ್ ಕಟ್ಟ ಕಡೆಯ ಸಿನಿಮಾ ‘ಜನ ನಾಯಗನ್’ ತೆರೆಗೆ

ಯೆಸ್.. ನಮ್ಮ ಕನ್ನಡ ಚಿತ್ರರಂಗದ ರೀತಿ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಒಳ್ಳೊಳ್ಳೆಯ ಸಿನಿಮಾಗಳ ಲೈನಪ್ ಇದೆ. ಟೀಸರ್, ಫಸ್ಟ್‌ಲುಕ್‌‌ಗಳಿಂದ ಸಿಕ್ಕಾಪಟ್ಟೆ ಕಿಕ್ ಕೊಡ್ತಿವೆ. ಅದೂ ಸಂಕ್ರಾಂತಿ ಹಾಗೂ ಪೊಂಗಲ್‌‌ನಿಂದಲೇ ಈ ಸಿನಿಮಾಗಳ ಉತ್ಸವ ಶುರುವಾಗ್ತಿರೋದು ವಿಶೇಷ.

ಡಾರ್ಲಿಂಗ್ ಪ್ರಭಾಸ್ ನಟನೆಯ ಮೊದಲ ಹಾರರ್ ಮೂವಿ ರಾಜಾಸಾಬ್. ಈ ಚಿತ್ರ ಸಂಕ್ರಾಂತಿ ವಿಶೇಷ ಜನವರಿ 9ಕ್ಕೆ ವರ್ಲ್ಡ್‌ವೈಡ್ ತೆರೆಗೆ ಬರ್ತಿದೆ. ಸಂಜಯ್ ದತ್ ಹಾಗೂ ಪ್ರಭಾಸ್ ತಾತಾ-ಮೊಮ್ಮಗನಾಗಿ ಕಮಾಲ್ ಮಾಡಿದ್ದು, ಟ್ರೈಲರ್ ನೆಕ್ಸ್ಟ್ ಲೆವೆಲ್‌‌ಗಿದೆ. ವೆರೈಟಿ ಜಾನರ್ ಆಫ್ ಸಿನಿಮಾಗಳಲ್ಲಿ ನಟಿಸ್ತಿರೋ ಡಾರ್ಲಿಂಗ್ ನಿಮ್ಮನ್ನ ಭಯ ಪಡಿಸೋಕೆ ಬರ್ತಿದ್ದಾರೆ.