ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ಹೀರೋ ಆಗ್ಬೇಕು ಅನ್ನೋ ಕನಸು ಸಾಕಷ್ಟು ಮಂದಿಗೆ ಇರುತ್ತೆ. ಆದ್ರೆ ಆ ಟಾಸ್ಕ್ ಬಂದಾಗ ಅವ್ರಿಗೆ ಸೂಪರ್ ಸ್ಟಾರ್ಗಳ ಸಾಥ್ ಸಿಕ್ರೆ ಅದ್ರ ಮಜಾನೇ ಬೇರೆ. ಜಯಸೂರ್ಯ–ಸಾಗರ್ ದಿ ಟಾಸ್ಕ್ ಚಿತ್ರಕ್ಕೆ ಮೊನ್ನೆ ಬಾದ್ಷಾ ಸುದೀಪ್ ಬೆಂಬಲ ನೀಡಿದ್ರು. ಇದೀಗ ಧ್ರುವ ಸರ್ಜಾ ಬೆನ್ನು ತಟ್ಟಿದ್ದಾರೆ.
ದಿ ಟಾಸ್ಕ್.. ಸ್ಯಾಂಪಲ್ಸ್‌ನಿಂದ ಭರವಸೆ ಮೂಡಿಸಿರೋ ಸಿನಿಮಾ. ಇದೇ ನವೆಂಬರ್ 21ಕ್ಕೆ ಪ್ರೇಕ್ಷಕರ ಮುಂದೆ ಅದೃಷ್ಠ ಪರೀಕ್ಷೆಗೆ ಬರ್ತಿರೋ ಈ ಸಿನಿಮಾ ಕ್ರೈಂ ಥ್ರಿಲ್ಲರ್ ಜಾನರ್‌ನಿಂದ ಕೂಡಿದ್ದು, ಸಿನಿಮಾ ನೋಡುವ ಕಾತುರತೆ ಹೆಚ್ಚಿಸಿದೆ. ಅದಕ್ಕೆ ಕಾರಣ ನಟ, ನಿರ್ದೇಶಕ ರಾಘು ಶಿವಮೊಗ್ಗ. ಹೌದು.. ರಂಗಭೂಮಿ ಜೊತೆ ಸಿನಿಮಾ, ಸೀರಿಯಲ್ ಲೋಕದಲ್ಲೂ ದೊಡ್ಡ ಛಾಪು ಮೂಡಿಸಿರೋ ರಾಘು ಶಿವಮೊಗ್ಗ, ನಟನೆಗೂ ಸೈ, ಡೈರೆಕ್ಷನ್‌ಗೂ ಜೈ. ಇತ್ತೀಚೆಗೆ ನಿರ್ದೇಶನದಿಂದ ದೂರ ಉಳಿದಿದ್ದ ಅವರು, ದಿ ಟಾಸ್ಕ್‌ಗೆ ಆ್ಯಕ್ಷನ್ ಕಟ್ ಹೇಳಿ, ಅದ್ರಲ್ಲಿ ತಾವು ಕೂಡ ನಟಿಸಿದ್ದಾರೆ.
ಜಯಸೂರ್ಯ-ಸಾಗರ್ ‘ಟಾಸ್ಕ್’ಗೆ ಧ್ರುವ ಸ್ಟಾರ್ ಬಲ..!
ಮೊನ್ನೆ ಸುದೀಪ್ ಸಾಥ್.. ಈಗ ಆ್ಯಕ್ಷನ್ ಪ್ರಿನ್ಸ್ ಬೆನ್ನೆಲುಬು
ಈ ಟಾಸ್ಕ್ ಚಿತ್ರದಿಂದ ಜಯಸೂರ್ಯ ಹಾಗೂ ಸಾಗರ್ ಅನ್ನೋ ಇಬ್ಬರು ಪ್ರಾಮಿಸಿಂಗ್ ಸಿನಿಮೋತ್ಸಾಹಿ ಚಿಗುರುಮೀಸೆ ಹುಡುಗರು ಚಿತ್ರರಂಗಕ್ಕೆ ಹೀರೋಗಳಾಗಿ ಲಾಂಚ್ ಆಗ್ತಿದ್ದಾರೆ. ಇವ್ರ ಸಿನಿಮಾ ಪ್ಯಾಷನ್ ಮೆಚ್ಚಿ ಕಿಚ್ಚ ಸುದೀಪ್ ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡಿಕೊಟ್ಟಿದ್ರು. ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಆಡಿಯೋ ಲಾಂಚ್ ಮಾಡಿ, ತಂಡಕ್ಕೆ ಬೆಂಬಲ ನೀಡಿದ್ದಾರೆ. ಹೊಸಬರಿಗೆ ಪ್ರೋತ್ಸಾಹ ನೀಡುವ ಧ್ರುವ ನಡೆಯನ್ನ ಮೆಚ್ಚಲೇಬೇಕು.
ಅಂದಹಾಗೆ ಜಯಸೂರ್ಯ ಅವ್ರ ತಂದೆ ರಾಜೇಶ್ ಅವರು ಡಿಸಿಪಿ ಆಗಿದ್ದು, ಅವ್ರ ಜೀವಮಾನದಲ್ಲಿ ಭೇದಿಸಿದ ಅದೆಷ್ಟೋ ಕ್ರೈಂ ಕಥೆಗಳ ಅನುಭವಗಳನ್ನೇ ಇಟ್ಕೊಂಡು ಈ ಸಿನಿಮಾ ಕಟ್ಟಲಾಗಿದೆಯಂತೆ. ನೈಜ ಘಟನೆ ಆಧಾರಿತ ಈ ಸಿನಿಮಾ, ಶಾಲಾ ಮಕ್ಕಳಿಗೆ ಜಾಸ್ತಿ ಕನೆಕ್ಟ್ ಆಗಲಿದ್ದು ಅಚ್ಯುತ್ ಕುಮಾರ್, ಕಿಶೋರ್, ಶ್ರೀಲಕ್ಷ್ಮೀ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್ ಕುಪ್ಳಿಕರ್, ಹರಿಣಿ ಶ್ರೀಕಾಂತ್, ಸಂಪತ್ ಮೈತ್ರಿಯಾ, ಬಾಲಾಜಿ ಮನೋಹರ್, ಜಟ್ಟ ಗಿರಿರಾಜ್ ಸೇರಿದಂತೆ ತಾರಾಗಣ ಚಿತ್ರದಲ್ಲಿದೆ.
ಲೋಕಪೂಜ್ಯ ಪಿಕ್ಚರ್ ಬ್ಯಾನರ್‌ನಡಿ ವಿಜಯ್ ಕುಮಾರ್ ಹಾಗೂ ರಾಮಣ್ಣ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸದ್ಯ ಬಿಡುಗಡೆ ಆಗಿರುವ ಸಾಗುವ ದಾರಿಯ ತುಂಬಾ ಹಾಡನ್ನು ಸೇಮಿ ಱಪ್ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ರಾಘು ಶಿವಮೊಗ್ಗ, ಚೇತನ್ ನಾಯ್ಕ್ ಧ್ವನಿಯಾಗಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಒದಗಿಸಿದ್ದಾರೆ. ಕೇವಲ ಮನರಂಜನೆ ಅಲ್ಲದೇ ಒಂದು ಮೆಸೇಜ್ ಇರುವ ಈ ಟಾಸ್ಕ್ ಸಿನಿಮಾ, ನವೆಂಬರ್ 21ರಂದು ರಾಜ್ಯಾದ್ಯಂತ ಬಿಡುಗಡೆ ಆಗ್ತಿದೆ.
