ಪಾತ್ರವನ್ನ ಪಾತ್ರವಾಗಿ ನೋಡಿ: ಕರ್ಣ ಧಾರಾವಾಹಿ ಫ್ಯಾನ್ಸ್ ಟ್ರೋಲಿಂಗ್ ವಿರುದ್ಧ ನಮ್ರತಾ ಖಡಕ್‌ ಎಚ್ಚರಿಕೆ

ಟ್ರಂಪ್ ಗೆ (7)

ಜನಪ್ರಿಯ ಧಾರಾವಾಹಿ ‘ಕರ್ಣ’ದಲ್ಲಿ ನಿತ್ಯಾ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ನಮ್ರತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಅವಹೇಳನಕಾರಿ ಕಾಮೆಂಟ್‌ಗಲ ವಿರುದ್ಧ ಸಿಡಿದೆದ್ದಿದ್ದಾರೆ. ಧಾರಾವಾಹಿಯ ಕಥಾಹಂದರದಲ್ಲಿ ನಿತ್ಯಾ ಪಾತ್ರವು ಕರ್ಣ ಮತ್ತು ನಿಧಿಯ ಪ್ರೀತಿಗೆ ಅಡಚಣೆಯಾಗುವುದನ್ನು ಆಧಾರಮಾಡಿಕೊಂಡು, ಕೆಲವು ಅಭಿಮಾನಿಗಳು ನಟಿ ನಮ್ರತಾ ಅವರ ವೈಯಕ್ತಿಕ ಜೀವನ ಹಾಗೂ ಅವರ ಕುಟುಂಬದ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ.

ಕರ್ಣ ಧಾರಾವಾಹಿಯ ಇತ್ತೀಚಿನ ಎಪಿಸೋಡ್‌ಗಳಲ್ಲಿ, ಕರ್ಣನ ತಂದೆಯ ಕುತಂತ್ರದಿಂದಾಗಿ ಕರ್ಣ ಮತ್ತು ನಿತ್ಯಾ (ನಮ್ರತಾ) ಅವರ ನಡುವೆ ವಿವಾಹ ನಡೆಯಲಿದೆ. ಈ ಕಥಾಸರಣಿಯು ಕರ್ಣ-ನಿಧಿ ಜೋಡಿಯ ಅಭಿಮಾನಿಗಳನ್ನು ಕೆರಳಿಸಿದೆ. ಕರ್ಣ ಹಾಗೂ ನಿದು ಪಾತ್ರವನ್ನ ಮೆಚ್ಚಿದ  ಕೆಲವು ಅಭಿಮಾನಿಗಲು, ನಿತ್ಯಾ(ನಮ್ರತಾ) ಅವರ ವೈಯಕ್ತಿಕ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನ ಮಾಡಿದ್ದಾರೆ. 

ಈ ಕಿರುಕುಳದಿಂದ ಮನನೊಂದ ನಮ್ರತಾ ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾಮ್‌ಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ. ಪಾತ್ರವನ್ನು ಪಾತ್ರವಾಗಿ ನೋಡಿ. ಈ ರೀತಿ ಕಾಮೆಂಟ್ ಪೋಸ್ಟ್ ಮಾಡಿದರೆ ಸೈಬರ್ ಕ್ರೈಮ್‌ಗೆ ಕಂಪ್ಲೇಂಟ್ ಮಾಡಬೇಕಾಗುತ್ತೆ ಎಂದು ಇಲ್ಲಸಲ್ಲದ ಕಮೆಂಟ್‌ ಮಾಡುತ್ತಿದ್ದ ಹುಚ್ಚು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 

Exit mobile version