ಕ್ಯೂಟ್ ಕ್ವೀನ್ ಶ್ರೀಲೀಲಾ ಇತ್ತೀಚೆಗಷ್ಟೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ರು. ಆದ್ರೀಗ ಇಡೀ ಬಾಲಿವುಡ್ ಈ ಕನ್ನಡತಿ ಮೇಲೆ ಕಿಡಿಕಾರುತ್ತಿದೆ. ಬಣ್ಣದ ಲೋಕದಲ್ಲಿ ಎಲ್ಲವೂ ಸರಿಯಾಗಿ ಇರೋಕೆ ಸಾಧ್ಯವೇ ಇಲ್ಲ. ಅದ್ರ ಹಿಂದೆ ಸಾಕಷ್ಟು ಏರಿಳಿತಗಳು, ಕಾಲೆಳೆತಗಳು ಕೂಡ ಇರುತ್ವೆ. ಸದ್ಯ ಕಿಸಿಕ್ ಬ್ಯೂಟಿ ಮೇಲೆ ಬಿಟೌನ್ ತಿರುಗಿ ಬೀಳೋಕೆ ಕಾರಣ ಏನು ಅಂತೀರಾ..? ಇಲ್ಲಿದೆ ನೋಡಿ.
- ಕ್ಯೂಟ್ ಕ್ವೀನ್ ಮೇಲೆ ಬಾಲಿವುಡ್ ಕಿಡಿ.. ಬಣ್ಣ ಬಣ್ಣದ ಲೋಕ
- ಸೌತ್ ಮೇಕಪ್ ಆರ್ಟಿಸ್ಟ್.. ಡಬಲ್ ಫೀಸ್ ಕೇಳಿದ್ರಾ ಲೀಲಾ..?
- ಶ್ರೀಲೀಲಾ & ತಾಯಿ ಮೇಲೆ ನೆಗೆಟೀವ್ ಕ್ಯಾಂಪೇನ್ ಯಾಕೆ..?!
- ದೀಪಿಕಾಗೆ ಸೌತ್‌ನಲ್ಲಿ ಹಿನ್ನಡೆ.. ಲೀಲಾ ಮೇಲೆ ಬಿಟೌನ್ ಜಿದ್ದು?
ಸೆಲೆಬ್ರಿಟಿ ಲೈಫ್ ನೀವು ನಾವು ಊಹಿಸಿದಷ್ಟು ಸುಲಭದ್ದಲ್ಲ. ಕೊಂಚ ಯಾಮಾರಿದ್ರೂ ಕರಿಯರ್‌ಗೆ ಬಹುದೊಡ್ಡ ಡ್ಯಾಮೇಜ್ ಆಗುತ್ತೆ. ಹಾಗೆ ಇಡೀ ಲೈಫ್‌ನ ಕಳೆದುಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಸದ್ಯ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್ ಕೂಡ ಇಂತಹ ಘಟನೆಗಳಿಗೆ ಪ್ರತ್ಯಕ್ಷ ಸಾಕ್ಷಿ. ನಾವೀಗ ಹೇಳೋಕೆ ಹೊರಟಿರೋದು ನಮ್ಮ ಕನ್ನಡದ ಕ್ಯೂಟ್ ಕ್ವೀನ್ ಶ್ರೀಲೀಲಾ ಬಗ್ಗೆ. ಅರೇ ಆಕೆ ಇತ್ತೀಚೆಗಷ್ಟೇ ಬಾಲಿವುಡ್‌ಗೆ ಎಂಟ್ರಿ ಕೊಟ್ರಲ್ಲಾ..? ಈಗೇನಾಯ್ತು ಅಂತ ಹುಬ್ಬೇರಿಸಬೇಡಿ.
ಆಗಿರೋದಿಷ್ಟೇ.. ಕಾರ್ತಿಕ್ ಆರ್ಯನ್ ಜೊತೆ ಸೈಯಾರ ಶೈಲಿಯ ಮೂವಿ ಮಾಡ್ತಿರೋ ಶ್ರೀಲೀಲಾಗೆ ಇದೇ ಚೊಚ್ಚಲ ಬಾಲಿವುಡ್ ಸಿನಿಮಾ. ಟಾಲಿವುಡ್‌ನಲ್ಲಿ ಬಹುತೇಕ ಎಲ್ಲಾ ಸ್ಟಾರ್ಸ್ ಜೊತೆ ತೆರೆ ಹಂಚಿಕೊಂಡ ಪುಷ್ಪರಾಜ್‌ನ ಕಿಸಿಕ್ ಬ್ಯೂಟಿ, ಇದೀಗ ಬಾಲಿವುಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ ಆ ಸಿನಿಮಾ ತೆರೆಗೆ ಬರೋಕೆ ಮೊದಲೇ ಆಕೆಯ ವಿರುದ್ಧ ನೆಗೆಟೀವ್ ಕ್ಯಾಂಪೇನ್ ಶುರುವಾಗಿದೆ. ಹೌದು.. ಮೇಕಪ್ ಆರ್ಟಿಸ್ಟ್‌ಗಳನ್ನ ಈಕೆ ಸೌತ್‌ನಿಂದ ಕರೆದುಕೊಂಡು ಬರ್ತಾರೆ ಅಂತ ಬಾಲಿವುಡ್ ಮೇಕಪ್ ಆರ್ಟಿಸ್ಟ್‌ಗಳು ಕಿಡಿ ಕಾರುತ್ತಿದ್ದಾರೆ.
ಅಷ್ಟೇ ಅಲ್ಲ.. ಸೌತ್‌ನಿಂದ ಬರೋರ ಬಳಿ ಫ್ರೀ ಆಗಿ ಮತ್ತು ಕಡಿಮೆ ದುಡ್ಡಿಗೆ ಕೆಲಸ ಮಾಡಿಸಿಕೊಳ್ತಾರೆ. ಅದೇ ರೀತಿ ನಮ್ಮಿಂದಲೂ ನಿರೀಕ್ಷೆ ಮಾಡ್ತಾರೆ. ಆದ್ರೆ ನಿರ್ಮಾಪಕರುಗಳ ಬಳಿ ಡಬಲ್ ಫೀಸ್ ತೆಗೆದುಕೊಳ್ತಾರೆ ಅಂತೆಲ್ಲಾ ಶ್ರೀಲೀಲಾ ಹಾಗೂ ಅವರ ತಾಯಿ ಮೇಲೆ ಆರೋಪಗಳ ಪಟ್ಟಿಯೇ ಸಲ್ಲಿಸಿದ್ದಾರೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇದೊಂಥರಾ ಪೈರು ಬೆಳೆಯುವ ಮೊದಲೇ ಚಿವುಟಿದಂತಾಗಿದೆ. ಹೌದು.. ಈಗಷ್ಟೇ ಬಾಲಿವುಡ್‌ಗೆ ಕಾಲಿಟ್ಟಿರೋ ಲೀಲಾನ ಕುಗ್ಗಿಸೋ ಷಡ್ಯಂತ್ರ ನಡೀತಿರೋದು ಎದ್ದು ಕಾಣ್ತಿದೆ.
ಎಂಬಿಬಿಎಸ್ ಪದವಿ ಮುಗಿಸಿ, ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರೋ ಶ್ರೀಲೀಲಾ ವಿರುದ್ಧ ಈ ರೀತಿ ನೆಗೆಟೀವ್ ಕ್ಯಾಂಪೇನ್ ಮಾಡೋಕೆ ಒಂದು ಪ್ರಮುಖ ಕಾರಣ ಕೂಡ ಇದೆ. ಇತ್ತೀಚೆಗೆ ಸೌತ್‌ನ ಎರಡು ಬಿಗ್ ಬ್ಯಾನರ್, ಬಿಗ್ ಸ್ಟಾರ್ಸ್ ಹಾಗೂ ಬಿಗ್ ಸ್ಟಾರ್ ಡೈರೆಕ್ಟರ್‌ಗಳ ಸಿನಿಮಾಗಳಿಂದ ದೀಪಿಕಾ ಪಡುಕೋಣೆಯನ್ನ ಕೈಬಿಡಲಾಗಿತ್ತು. ಇದೀಗ ಸೌತ್ ನಟಿ ಹಿಂದಿಗೆ ಕಾಲಿಟ್ಟಿದ್ದು, ಆಕೆಯ ಮೇಲೆ ಆ ಜಿದ್ದು ತೀರಿಸಿಕೊಳ್ಳೋಕೆ ಮುಂದಾಗಿದೆಯಾ ಅನ್ನೋ ಅನುಮಾನ ಕೂಡ ಕಾಡ್ತಿದೆ. ಅದೇನೇ ಇರಲಿ, ಕಲೆಯನ್ನ ಎಲ್ಲರೂ ಗೌರವಿಸಬೇಕು. ಅದರ ನೆರಳಲ್ಲಿ ಅದನ್ನೇ ನಂಬಿ ಬದುಕ್ತಿರೋ ತಂತ್ರಜ್ಞರು ಕೂಡ ಬೆಳೆಯಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





