DKD ಮತ್ತು ಕಾಮಿಡಿ ಕಿಲಾಡಿಗಳು ಜೂನಿಯರ್ಸ್ ಮಹಾ ಸಂಗಮದಲ್ಲಿ ಮಿಂಚಿದ ನಟ ಅಮೋಘ್

Untitled design 2026 02 03T201007.199

ಜೀ ಕನ್ನಡದ ಜನಪ್ರಿಯ ಶೋಗಳಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹಾಗೂ ‘ಕಾಮಿಡಿ ಕಿಲಾಡಿಗಳು ಜೂನಿಯರ್ಸ್’ ಈಗಾಗಲೇ ವೀಕ್ಷಕರ ಮನಗೆದ್ದಿವೆ. ಇದೀಗ ಈ ಎರಡೂ ಶೋಗಳ ‘ಮಹಾ ಸಂಚಿಕೆ’ ಪ್ರಸಾರವಾಗುತ್ತಿದ್ದು, ಇದರಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಖ್ಯಾತಿಯ ಸುಬ್ಬು ಅಲಿಯಾಸ್ ಅಮೋಘ್ ವಿಶೇಷ ಆಕರ್ಷಣೆಯಾಗಿದ್ದಾರೆ.

ಚಂದನವನದ ದಿಗ್ಗಜರಾದ ಡಾ. ಶಿವರಾಜ್ ಕುಮಾರ್, ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಹಾಗೂ ನಿಶ್ವಿಕಾ ನಾಯ್ಡು ಅವರು ಅಮೋಘ್‌ನ ಪ್ರತಿಭೆಯನ್ನು ಅತೀವವಾಗಿ ಶ್ಲಾಘಿಸಿದ್ದಾರೆ.

ಅಮೋಘ್‌ನ ಅದ್ಭುತ ನಟನೆಗೆ ಫಿದಾ ಆದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಮೋಘ್‌ನ ಚೊಚ್ಚಲ ಸಿನಿಮಾವನ್ನು ನಾನೇ ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ರಚಿತಾ ರಾಮ್, ಅಮೋಘ್ ನಾಯಕನಾಗುವ ಸಿನಿಮಾಗೆ ತಾನೇ ನಾಯಕಿಯಾಗುವುದಾಗಿ ಸಂಭ್ರಮದಿಂದ ಹೇಳಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಅವರು ಅಮೋಘ್‌ನ ಸಾಧನೆಯನ್ನು ಮೆಚ್ಚಿ, ಜೀವನದಲ್ಲಿ ನೀನು ಇನ್ನಷ್ಟು ಎತ್ತರಕ್ಕೆ ಬೆಳೆಯುವೆ ಎಂದು ಶುಭ ಹಾರೈಸಿದ್ದಾರೆ. ಜೊತೆಗೆ ನಿನ್ನ ಮೊದಲ ಸಿನಿಮಾವನ್ನ ನಾನು ಫಸ್ಟ್‌ ಡೇ ಫಸ್ಟ್‌ ಶೋನಲ್ಲಿ ನೋಡುತ್ತೀನಿ ಎಂದು ಹೇಳಿದ್ದಾರೆ. ಇದರಿಂದ ಸಂತೋಷಗೊಂಡ ಅಮೋಘ್‌ ಶಿವಣ್ಣನನ್ನು ತಬ್ಬಿ, ಅವರ ಕೈಗೆ ನಮಸ್ಕರಿದರು.

Exit mobile version