2023ರಲ್ಲಿ ತೆರೆಕಂಡ ಆರ ಸಿನಿಮಾ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದ ನಟ, ನಿರ್ದೇಶಕ ಬರಹಗಾರ ಆರ ರೋಹಿತ್ ಹಳೇ ಅನುಭವದ ಜೊತೆಗೆ ಹೊಸ ಕನಸನ್ನೊತ್ತು ಎರಡನೇ ಚಿತ್ರವನ್ನ ಅನೌನ್ಸ್ ಮಾಡಿದ್ದು, ಚಿತ್ರಕ್ಕೆ ‘ಸಹ್ಯಾದ್ರಿ’ ಅಂತ ಹೆಸರಿಟ್ಟಿದ್ದಾರೆ.
ADVERTISEMENT
ADVERTISEMENT
ದೈವ ಹಾಗೂ ದುಷ್ಟ ಶಕ್ತಿಯ ನಡುವಿನ ಸಂಘರ್ಷವನ್ನ ಆಧರಿಸಿ ಆರ ಮಾಡಿದ್ದ ರೋಹಿತ್ ಈ ಬಾರಿ, ಇನ್ನೊಂದು ಕೌತುಕ ವಿಚಾರವನ್ನ ಹೇಳಲು ಹೊರಟ್ಟಿದ್ದಾರೆ. ಸಹ್ಯಾದ್ರಿ ಪಂಚ ಭಾಷೆಯಲ್ಲಿ ಬರಲಿದ್ದು, ಟೈಟಲ್ ಟೀಸರ್ ಮೂಲಕ ಇದು ಪ್ಯಾನ್ ಇಂಡಿಯಾ ಸಿನ್ಮಾ ಅನ್ನೋದನ್ನ ಸೂಚಿಸಿದ್ದಾರೆ.
ಹೌದು, ಸಹ್ಯಾದ್ರಿ ಚಿತ್ರದ ಕಥಾಹಂದರ ಆಧ್ಯಾತ್ಮಿಕ ದರೋಡೆಕೋರ ಪ್ರಕಾರವಾಗಿದ್ದು, ಮೆದುಳಿನಲ್ಲಿ ಹೆಚ್ಚಿನ ನರಕೋಶಗಳನ್ನು ಹೊಂದಿರುವ ಅಕಾಲಿಕ ಮಗು ವಯಸ್ಸಾದಂತೆ, ಎಲ್ಲಾ ಶಕ್ತಿಯನ್ನು ತಡೆಹಿಡಿಯುವ ವಿಜಯಶಾಲಿಯಾಗುತ್ತದೆ. ಈ ಲೈನ್ ಇಟ್ಟುಕೊಂಡು ಈ ಸಲ ರೋಹಿತ್ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ..

