ಕಾಂತಾರ ಬಿಗ್ಗೆಸ್ಟ್ ಸಕ್ಸಸ್ ಬಳಿಕ ರಿಷಬ್ ಶೆಟ್ಟಿಯ ಅಪ್‌ಕಮಿಂಗ್ ಪ್ರಾಜೆಕ್ಟ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ಆ ಪೈಕಿ ಮೊದಲು ಜೈ ಹನುಮಾನ್ ಇದ್ದರೂ ಸಹ, ಸದ್ಯ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಟಾಕ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣ ವಿವೇಕ್ ಒಬೇರಾಯ್ ತಂಡ ಸೇರಿಕೊಂಡಿರೋದು.
ರಿಷಬ್ ಶೆಟ್ಟಿ.. ಕರಾವಳಿಯ ಕುವರ, ಹೆಮ್ಮೆಯ ಕನ್ನಡಿಗ, ಕಾಂತಾರ ಚಿತ್ರದ ಮೂಲಕ ನಮ್ಮ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ವಿಶ್ವಸಂಸ್ಥೆವರೆಗೂ ಕೊಂಡೊಯ್ದ ಅತ್ಯದ್ಭುತ ಬಹುಮುಖ ಪ್ರತಿಭೆ. ಹೌದು.. ಕಷ್ಟಪಟ್ಟು ಹಂತ ಹಂತವಾಗಿ ಬೆಳೆದುಕೊಂಡು ಬಂದಂತಹ ರಿಷಬ್, ಸದ್ಯ ಡಿವೈನ್ ಸ್ಟಾರ್ ಆಗಿ ಇಡೀ ವಿಶ್ವ ಸಿನಿದುನಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಕಾಂತಾರ ಚಿತ್ರದಂತೆ ಕಾಂತಾರ-1 ಕೂಡ ವಿಶ್ವ ಸಿನಿದುನಿಯಾದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.
ರಿಷಬ್ ಛತ್ರಪತಿ.. ವಿವೇಕ್ ಒಬೇರಾಯ್ ಔರಂಗಾಜೇಬ್
ಸ್ವರಾಜ್ಯಕ್ಕಾಗಿ ಹೋರಾಡಿದ ಅಪ್ರತಿಮ ಐತಿಹಾಸಿಕ ವೀರ..!
ಬರೋಬ್ಬರಿ 867 ಕೋಟಿ ಗಳಿಸಿರೋ ಕಾಂತಾರ-1 ಅತ್ತ ಥಿಯೇಟರ್ ಜೊತೆ ಓಟಿಟಿಗೂ ಕಾಲಿಟ್ಟಿದೆ. ರಿಷಬ್ ಶೆಟ್ಟಿ ಮಾತ್ರ ತಮ್ಮ ಮುಂದಿನ ಚಿತ್ರಗಳಿಗಾಗಿ ತಯಾರಿ ನಡೆಸೋ ಮನಸ್ಸು ಮಾಡಿದ್ದು, ಅದಕ್ಕೂ ಮುನ್ನ ದಣಿದ ದೇಹ ಹಾಗೂ ಮನಸ್ಸಿಗಾಗಿ ಆಯುರ್ವೇದಿಕ್ ಟ್ರೀಟ್‌ಮೆಂಟ್ ಪಡೆಯಲಿದ್ದಾರಂತೆ. ಹೊಸ ವರ್ಷದ ಆರಂಭದಲ್ಲಿ ಜೈ ಹನುಮಾನ್ ಸಿನಿಮಾ ಸೆಟ್ಟೇರಲಿದ್ದು, ಅದಾದ ಬಳಿಕ ಲೈನ್‌ನಲ್ಲಿರೋ ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರ ಕೂಡ ಆಗಲೇ ಸದ್ದು ಮಾಡ್ತಿದೆ.
ಯೆಸ್.. ಸ್ವರಾಜ್ಯಕ್ಕಾಗಿ ಹೋರಾಡಿ ಬಹುದೊಡ್ಡ ಸಾಮ್ರಾಜ್ಯ ಕಟ್ಟಿದ ಐತಿಹಾಸಿಕ ವೀರ ಛತ್ರಪತಿ ಶಿವಾಜಿ ಮಹಾರಾಜನಾಗಿ ರಿಷಬ್ ಶೆಟ್ಟಿ ಬಣ್ಣ ಹಚ್ಚಲಿದ್ದಾರೆ. ಇದನ್ನ ಬಾಲಿವುಡ್ ಡೈರೆಕ್ಟರ್ ಸಂದೀಪ್ ಸಿಂಗ್ ನಿರ್ದೇಶಿಸಲಿದ್ದಾರೆ. ಸಿನಿಮಾದ ರಿಲೀಸ್ ಡೇಟ್ 2027ರ ಜನವರಿ 21ಕ್ಕೆ ಈಗಾಗ್ಲೇ ಫಿಕ್ಸ್ ಆಗಿದ್ದು, ಒಂದೇ ವರ್ಷದಲ್ಲಿ ಎರಡೆರಡು ಚಿತ್ರಗಳಲ್ಲಿ ತೊಡಗಿಸಿಕೊಳ್ತಾರಾ ರಿಷಬ್ ಅನ್ನೋದನ್ನ ಕಾದು ನೋಡಬೇಕಿದೆ.
ಜೈ ಹನುಮಾನ್‌ಗೂ ಮೊದ್ಲೇ ಶೆಟ್ರ ನೆಕ್ಸ್ಟ್ ವೆಂಚರ್ ಸೌಂಡ್
ಒಂದೇ ವರ್ಷ ಎರಡೆರಡು ಮೆಗಾ ಪ್ರಾಜೆಕ್ಟ್‌ಗಳಲ್ಲಿ ರಿಷಬ್
ಸದ್ಯ ಬಂದಿರೋ ಹೊಚ್ಚ ಹೊಸ ಸುದ್ದಿ ಏನಪ್ಪಾಂದ್ರೆ ದಿ ಪ್ರೈಡ್ ಆಫ್ ಭಾರತ್.. ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾದ ತಾರಾಗಣಕ್ಕೆ ಬಾಲಿವುಡ್ ನಟ ವಿವೇಕ್ ಒಬೇರಾಯ್ ಹೊಸದಾಗಿ ಸೇರ್ಪಡೆ ಆಗಿದ್ದಾರೆ. ಯೆಸ್.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್, ಭಾರತೀಯ ಚಿತ್ರರಂಗದ ಎಲ್ಲಾ ಇಂಡಸ್ಟ್ರಿಗಳ ಅಚ್ಚು ಮೆಚ್ಚಿನ ನಟ ವಿವೇಕ್ ಒಬೇರಾಯ್, ರಿಷಬ್ ಎದುರು ಖಳನಾಯಕನಾಗಿ ಕತ್ತಿ ಜಳಪಿಸಲಿದ್ದಾರೆ ಎನ್ನಲಾಗ್ತಿದೆ.
ಅಂದಹಾಗೆ ವಿವೇಕ್ ಒಬೇರಾಯ್ ಔರಂಗಾಜೇಬ್ ಪಾತ್ರ ನಿರ್ವಹಿಸಲಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದ ಮೇಲೆ ಇವರ ಆಗಮನದಿಂದ ನಿರೀಕ್ಷೆ ಡಬಲ್ ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಯಾರೆಲ್ಲಾ ಈ ಚಿತ್ರದ ತಾರಾಗಣ ಸೇರಿಕೊಳ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.





