ಕಾಂತಾರ-1: ಚಿತ್ರೀಕರಣದ ವೇಳೆ ಅನುಭವಿಸಿದ ನೋವು ಹಂಚಿಕೊಂಡ ರಿಷಬ್‌ ಶೆಟ್ಟಿ

Untitled design (66)

ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ‘ಕಾಂತಾರ-1’ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರೀಕರಣದ ಸಮಯದಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಸಾಮಾಜಿಕ ಜಾಲತಾಣ (x)ನಲ್ಲಿ ಹಂಚಿಕೊಂಡಿದ್ದಾರೆ. ‘ಕಾಂತಾರ-1’ ಚಿತ್ರದ ಅಗಾಧ ಯಶಸ್ಸಿನ ನಡುವೆ, ರಿಷಬ್ ಶೆಟ್ಟಿ ಚಿತ್ರೀಕರಣದ ಸಮಯದಲ್ಲಿ ಅನುಭವಿಸಿದ ತೊಂದರೆಗಳ ಬಗ್ಗೆ ನೆನದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಅವರು ಸೋಷಿಯಲ್ ಮೀಡಿಯಾದಲ್ಲಿ ಚಿತ್ರೀಕರಣದ ಸಮಯದಲ್ಲಿ ಊದಿಕೊಂಡಿದ್ದ ತಮ್ಮ ಕಾಲಿನ ಫೋಟೋವನ್ನು ಹಂಚಿಕೊಂಡು, ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಚಿತ್ರೀಕರಿಸುವಾಗ ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ದೇಹ ಆ ಸಮಯದಲ್ಲಿ ನಿತ್ರಾಣವಾಗಿತ್ತು. ಆದರೆ, ಇಂದು ಕೋಟ್ಯಂತರ ಪ್ರೇಕ್ಷಕರು ಚಿತ್ರವನ್ನು ನೋಡಿ ಮೆಚ್ಚುತ್ತಿದ್ದಾರೆ ಎಂಬುದು ಸಂತೋಷದ ಸಂಗತಿ.ಇದಕ್ಕೆಲ್ಲ ನಾವು ನಂಬಿದ ದೈವದ ಆಶೀರ್ವಾದ, ಸಿನಿಮಾ ನೋಟಿ ಅಭಿಪ್ರಾಯ ತಿಳಿಸಿದ ನಿಮ್ಮೆಲ್ಲರಿಗೂ ಧನ್ಯವಾದ ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Exit mobile version