207ಸಿಟಿ.. 3.3ಲಕ್ಷ ಟಿಕೆಟ್ಸ್.. 6780ಶೋ: ರಾಮಾಯಣ ರಂಗು

ಆತ್ಮಹತ್ಯೆ! (8)

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಅಭೂತಪೂರ್ವ ಸುನಾಮಿ ಬಾಕ್ಸ್ ಆಫೀಸ್‌ನಲ್ಲಿ ಏಳೋದಕ್ಕೆ ರೆಡಿಯಾಗಿದೆ. ದೀಪಾವಳಿ ಧಮಾಕಾಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ರಾಮಾಯಣ ಚಿತ್ರದ ಅಡ್ವಾನ್ಸ್ ಬುಕಿಂಗ್ ಧೂಳೆಬ್ಬಿಸುತ್ತಿದೆ. ರಣಬೀರ್ ಕಪೂರ್ ರಾಮನಾಗಿ, ರಾಕಿ ಭಾಯ್ ಯಶ್ ರಾವಣನಾಗಿ ಕೌಂಟರ್‌ಗೆ ಧುಮುಕುತ್ತಿದ್ದಂತೆ ಇಡೀ ಸಿನಿಪ್ರಿಯರ ಲೋಕವೇ ತಬ್ಬಿಬ್ಬಾಗಿದೆ.

207ಸಿಟಿ.. 3.3ಲಕ್ಷ ಟಿಕೆಟ್ಸ್.. 6780ಶೋ.. ರಾಮಾಯಣ ರಂಗು

ರಾಮನಾಮ ಜಪ.. ಬಾಕ್ಸ್ ಆಫೀಸ್‌ನಲ್ಲಿ ಹಣದ ಹೊಳೆ..!

ರಾಮನಿಗೆ ಜೈ.. ರಾವಣನಾಗಿ ಬಂದ ಯಶ್‌‌ಗೆ ಅಭಿಮಾನಿಗಳ ಆರತಿ

​ಐಮ್ಯಾಕ್ಸ್ ಹಾಗೂ 4DX ಸ್ಕ್ರೀನ್‌ಗಳಲ್ಲಿ ಹೌಸ್‌ಫುಲ್ ಬೋರ್ಡ್..!

ರಿಲೀಸ್ ದಿನಾಂಕ ಹತ್ತಿರವಾಗುತ್ತಿದ್ದಂತೆ ಗಾಂಧಿನಗರದಿಂದ ಹಿಡಿದು ಬಾಲಿವುಡ್‌ನ ಪ್ರತಿಯೊಂದು ಟಿಕೆಟ್ ಕೌಂಟರ್‌ನಲ್ಲಿ ರಾಮನ ಜಪ ಶುರುವಾಗಿದೆ. ಭಾರತದಾದ್ಯಂತ ಕೇವಲ 24 ರಿಂದ 48 ಗಂಟೆಗಳ ಅವಧಿಯಲ್ಲಿ 207ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಟಿಕೆಟ್‌ಗಳು ಹಾಟ್ ಕೇಕ್‌ನಂತೆ ಮಾರಾಟವಾಗುತ್ತಿವೆ. ಮುಂಗಡ ಕೌಂಟರ್ ಓಪನ್ ಆಗ್ತಿದ್ದಂತೆಯೇ 3.3 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿ ಹೋಗಿದ್ದು, ಒಟ್ಟು 6,780 ಶೋಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಅಭಿಮಾನಿಗಳ ಈ ಅಸಾಧಾರಣ ಮುಗಿಬೀಳುವಿಕೆಯನ್ನು ನೋಡಿ ಥಿಯೇಟರ್ ಮಾಲೀಕರು ತಬ್ಬಿಬಾಗಿದ್ದಾರೆ.

ಬೆಂಗಳೂರು, ದೆಹಲಿ ಮತ್ತು ಮುಂಬೈ ನಗರಗಳು ಈ ಮುಂಗಡ ಬುಕಿಂಗ್ ಪ್ರವಾಹದ ಮುಂಚೂಣಿಯಲ್ಲಿ ನಿಂತಿವೆ. ವಿಶೇಷವಾಗಿ ಕನ್ನಡಿಗರ ನೆಚ್ಚಿನ ಯಶ್ ರಾವಣನಾಗಿ ಕಬ್ಬನ್ ಪಾರ್ಕ್‌ನಿಂದ ಕೆಂಪೇಗೌಡ ಏರ್‌ಪೋರ್ಟ್‌ವರೆಗೆ ಸೃಷ್ಟಿಸಿರುವ ಕ್ರೇಜ್ ಸಣ್ಣದಲ್ಲ. ಕನ್ನಡ ಆವೃತ್ತಿಯೊಂದಕ್ಕೇ ಅಡ್ವಾನ್ಸ್ ಬುಕಿಂಗ್‌ನಲ್ಲಿ ಬರೋಬ್ಬರಿ 2.36 ಕೋಟಿಗೂ ಅಧಿಕ ಹಣ ಹರಿದುಬಂದಿದ್ದು, ಬೆಂಗಳೂರು ನಗರವೊಂದರಲ್ಲೇ ಸಾವಿರಾರು ಅಭಿಮಾನಿಗಳು ಅಡ್ವಾನ್ಸ್ ಶೋಗಳನ್ನು ಹೌಸ್‌ಫುಲ್ ಮಾಡಿದ್ದಾರೆ. ಯಶ್ ಅವರ ಸ್ಕ್ರೀನ್ ಪ್ರೆಸೆನ್ಸ್ ನೋಡಲು ದಕ್ಷಿಣ ಭಾರತದ ಪ್ರೇಕ್ಷಕರು ಕಾಯುತ್ತಿದ್ದಾರೆ.

ರಣಬೀರ್ ಕಪೂರ್ ಶ್ರೀರಾಮನ ಸಾತ್ವಿಕ ರೂಪದಲ್ಲಿ ಕಂಗೊಳಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಜಾಗತಿಕ ಮಟ್ಟದ ಐಮ್ಯಾಕ್ಸ್  ಹಾಗೂ 4DX ಸ್ಕ್ರೀನ್‌ಗಳಲ್ಲಿ ₹2,500ಕ್ಕೂ ಹೆಚ್ಚಿನ ಪ್ರೀಮಿಯಂ ಬೆಲೆಯ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಸೋಲ್ಡ್ ಔಟ್ ಆಗುತ್ತಿವೆ. ಎ.ಆರ್. ರೆಹಮಾನ್ ಹಾಗೂ ಹಾನ್ಸ್ ಝಿಮ್ಮರ್ ಕಾಂಬಿನೇಷನ್‌ನ ಹಿನ್ನೆಲೆ ಸಂಗೀತ ಮತ್ತು ಪ್ರೈಮ್ ಫೋಕಸ್‌ನ ದೃಶ್ಯ ವೈಭವ ಸಿನಿಮಾವನ್ನು ಬೇರೆದೇ ಹಂತಕ್ಕೆ ಒಯ್ದಿದೆ.

ಬಿಡುಗಡೆಗೂ ಮುನ್ನವೇ ಭಾರತದಲ್ಲಿ ₹17 ಕೋಟಿಗೂ ಅಧಿಕ ಗ್ರಾಸ್ ಅಡ್ವಾನ್ಸ್ ಕಲೆಕ್ಷನ್ ಮಾಡುವ ಮೂಲಕ ರಾಮಾಯಣ ತನ್ನದೇ ಆದ ಇತಿಹಾಸವನ್ನು ಬರೆದಿದೆ. 6,780 ಶೋಗಳಲ್ಲಿ ಶೇಕಡಾ 80ಕ್ಕೂ ಹೆಚ್ಚು ಹಿಂದಿ ಹಾಗೂ ಕನ್ನಡ ಆವೃತ್ತಿಗಳೇ ಆಕ್ರಮಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಶೋಗಳ ಸಂಖ್ಯೆ 9,000 ಗಡಿ ದಾಟುವ ಮುನ್ಸೂಚನೆ ಸಿಕ್ಕಿದೆ. ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಮೊದಲ ದಿನದ ಕಲೆಕ್ಷನ್ ದಾಖಲೆಗಳನ್ನೆಲ್ಲ ಉಡಾಯಿಸಲು ಈ ಚಿತ್ರ ಸಜ್ಜಾಗಿದೆ.

ದೀಪಾವಳಿ ಹಬ್ಬಕ್ಕೆ ಪ್ರೇಕ್ಷಕರಿಗೆ ಕೇವಲ ಸಿನಿಮಾ ಮಾತ್ರವಲ್ಲ, ಒಂದು ದೈವಿಕ ಹಾಗೂ ದೃಶ್ಯ ಕಾವ್ಯದ ಅನುಭವ ಸಿಗಲಿದೆ. 207 ನಗರಗಳ ಮೂಲ ಮೂಲೆಗಳಲ್ಲೂ ರಾಮಾಯಣದ ಮಂತ್ರ ಪಠಣವಾಗುತ್ತಿದ್ದು, ಈ ಸಿನಿಮಾ ಭಾರತೀಯ ಪೌರಾಣಿಕ ಚಿತ್ರಗಳ ವ್ಯಾಖ್ಯಾನವನ್ನೇ ಬದಲಾಯಿಸಲಿದೆ. ಈ ಸುನಾಮಿ ಎಲ್ಲಿಗೆ ಹೋಗಿ ತಲುಪಲಿದೆ ಎಂಬುದನ್ನು ತಿಳಿಯಲು ಬಿಡುಗಡೆಯ ದಿನದವರೆಗೂ ಕಾಯಲೇಬೇಕು.

ಕೀರ್ತಿ ಪಾಟೀಲ್, ಫಿಲಂ ಬ್ಯೂಯೋ, ಗ್ಯಾರಂಟಿ ನ್ಯೂಸ್

Exit mobile version