ಇಷ್ಟು ದಿನ ಚಾರುಲತಾ ಅದ್ಯಾಕೋ ಮಂಕಾಗಿ ಬಿಟ್ಟಿದ್ದಳು. ‘ಅತ್ತೆಮ್ಮ ಯಾಕೆ ಹೊಡೆಯುತ್ತಿದ್ದಾರೆ, ಬೈಯ್ಯುತ್ತಿದ್ದಾರೆ’ ಅಂತ ಚಾರುಲತಾ ತಲೆಕೆಡಿಸಿಕೊಂಡಿದ್ದಳು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಗಿರೋ ಸಮಸ್ಯೆ ಏನು ಅಂತ ಚಾರುಲತಾಗೆ ಗೊತ್ತಾಗಿದೆ. ಹೀಗಾಗಿ, ಹಳೇ ಚಾರುಲತಾ ಫಾರ್ಮ್ ಗೆ ಮರಳಿದ್ದಾಳೆ. ಶ್ರುತಿಗೆ ಆಗಿರುವ ಅನ್ಯಾಯದ ವಿರುದ್ಧ ಚಾರುಲತಾ ಅಕ್ಷರಶಃ ಹೊಡೆದಾಡಿದ್ದಾಳೆ.
ಯಾವ ಹೀರೋಗೂ ಕಮ್ಮಿ ಇಲ್ಲದ ಹಾಗೆ ರಾಮಾಚಾರಿಯ ಪತ್ನಿ ಚಾರುಲತಾ ವಿಲನ್ ಗಳ ಜೊತೆ ಫೈಟ್ ಮಾಡಿದ್ದಾಳೆ. ಶ್ರುತಿಗೆ ಮೋಸ ಮಾಡಿದವನ ಕೈ ಕಾಲು ಮುರಿದಿದ್ದಾಳೆ ಚಾರುಲತಾ. ಯಾವುದಕ್ಕೂ ಹೆದರದ, ಬೆದರದ ಚಾರುಲತಾ ಸೀರೆಯಲ್ಲೇ ರೌಡಿಗಳ ರುಂಡ ಚೆಂಡಾಡಿದ್ದಾಳೆ. ಶ್ರುತಿಗೆ ಅನ್ಯಾಯ ಮಾಡಿದವನ ವಿರುದ್ಧ ಕಾಳಿ, ದುರ್ಗಿಯ ಅವತಾರ ತಾಳಿದ್ದಾಳೆ ಚಾರುಲತಾ.
ಕೇಡಿಗಳ ಜೊತೆ ಚಾರುಲತಾ ಫೈಟ್ ಮಾಡುವ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ, ನಿನ್ನೆ ಹಾಗು ಮೊನ್ನೆ ಎಪಿಸೋಡ್ ಗಳಲ್ಲಿ ಟೆಲಿಕಾಸ್ಟ್ ಆಗಿದ್ದು, ಮಾಸ್ ಅವತಾರ ತಾಳಿರುವ ಚಾರುಲತಾಳ ಆಕ್ಷನ್ ಸಂಚಿಕೆಯನ್ನ ನೋಡಿದ ಪ್ರೇಕ್ಷಕರು ಚಾರು ಎಫರ್ಟ್ ಗೆ ಶಹಬಾಸ್ ಎಂದಿದ್ದಾರೆ.
ಶ್ರುತಿಗೆ ಮೋಸ ಮಾಡಿದವರಿಗೆ ತಕ್ಕ ಪಾಠ ಕಲಿಸಲು ಚಾರುಲತಾ ಮುಂದಾಗಿದ್ದಾರೆ. ಆದರೆ, ಇದರಿಂದ ಮೋಸ ಮಾಡಿದವನು ಪಾಠ ಕಲಿಯುತ್ತಾನಾ? ಅಷ್ಟಕ್ಕೂ ಶ್ರುತಿ ಹಿಂದೆ ಬಿದ್ದು ಮೋಸ ಮಾಡುವಂತೆ ಆ ಯುವಕನನ್ನು ಛೂ ಬಿಟ್ಟಿದ್ದು ವೈಶಾಖ ಅಂತ ಆ ಯುವಕ ಬಾಯ್ಬಿಡ್ತಾನಾ? ಚಾರುಲತಾಗೆ ಸತ್ಯ ಗೊತ್ತಾದರೆ ಮುಂದೇನು ಮಾಡ್ತಾಳೆ ಎಂಬುದೇ ಸದ್ಯದ ಕುತೂಹಲ.
ಜಾನಕಿಗೆ ಫೋನ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯ ನಂಬರ್ ಟ್ರ್ಯಾಕ್ ಮಾಡಲು ಚಾರುಲತಾ ಸೂಚಿಸಿದ್ದಾಳೆ. ಜಾನಕಿಗೆ ಬ್ಲಾಕ್ ಮೇಲ್ ಮಾಡ್ತಿರೋದು ವೈಶಾಖ ಎಂಬ ಸತ್ಯ ಮನೆಯವರಿಗೆಲ್ಲಾ ಇಂದಿನ ಸಂಚಿಕೆಯಲ್ಲಿ ಬಯಲಾಗ್ತಾ ಇದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ರಾಮಾಚಾರಿಯನ್ನು ಇಂಟ್ರೆಸ್ಟಿಂಗ್ ಮಾಡ್ತಿರೋ ಟೀಮ್, ಇನ್ನು ಮುಂದೆ ಯಾವ ಪ್ಲಾನ್ ಮಾಡಲಿದೆ ಎಂಬುದನ್ನು ಪ್ರೇಕ್ಷಕರು ಕಾಯ್ತಿದ್ದಾರೆ.