ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ 33ನೇ ಹುಟ್ಟುಹಬ್ಬ

Untitled design 2025 10 03t121524.843

ಬೆಂಗಳೂರು, ಅಕ್ಟೋಬರ್ 03: ಚಂದನವನದ ಡಿಂಪಲ್ ಕ್ವೀನ್ ಎಂದೇ ಪ್ರಖ್ಯಾತರಾದ ನಟಿ ರಚಿತಾ ರಾಮ್ ಅವರು ಇಂದು 33ನೇ ವಯಸ್ಸನ್ನು ಪ್ರವೇಶಿಸಿದರು. ಅವರ ಬೆಂಗಳೂರಿನ ಆರ್.ಆರ್.ನಗರ ನಿವಾಸದ ಬಳಿ ನಿನ್ನೆ ರಾತ್ರಿಯಿಂದಲೇ ನೂರಾರು ಅಭಿಮಾನಿಗಳು ಸೇರಿ ಶುಭಾಶಯ ತಿಳಿಸಿದ್ದಾರೆ.

ಹುಟ್ಟುಹಬ್ಬದ ಸಂಭ್ರಮವನ್ನು ಮುನ್ನೆಡೆಸುತ್ತಿರುವ ‘ಲ್ಯಾಂಡ್ ಲಾರ್ಡ್’ ಸಿನಿಮಾ ತಂಡವು ವಿಶೇಷ ಆಯೋಜನೆ ಮಾಡಿದೆ. ಈ ಸಿನಿಮಾದ ನಟ ದುನಿಯಾ ವಿಜಯ್ ಅವರನ್ನು ಒಳಗೊಂಡ ತಂಡವು ಅದ್ದೂರಿಯಗಿ ಹುಚ್ಚುಹಬ್ಬ ಆಚರಿಸಿದೆ. ಈ ಸಂದರ್ಭದಲ್ಲಿ ಡೊಳ್ಳು ಕುಣಿತ ಮತ್ತು ಯಕ್ಷಗಾನ ಕಲಾವಿದರ ನೃತ್ಯ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ನಟಿಯು ಇಂದು ಸಂಜೆ ವರೆಗೂ ತನ್ನ ನಿವಾಸದ ಬಳಿ ಸೇರಿದ್ದ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ.

ರಚಿತಾ ರಾಮ್ ಅವರ ನಿಜವಾದ ಹೆಸರು ಬಿಂದ್ಯಾ ರಾಮ್. 2013ರಲ್ಲಿ ದರ್ಶನ್ ಅವರ ನಾಯಕತ್ವದ ‘ಬುಲ್ ಬುಲ್’ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕೆ ಮುನ್ನ ಅವರು ‘ಅರಸಿ’ ಧಾರಾವಾಹಿಯಲ್ಲಿ ನಟಿಸಿದ್ದರು. ‘ರನ್ನ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ಸೈಮಾ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿ ಮತ್ತು ಫಿಲ್ಮ್ಫೇರ್ ಸೌತ್ ಕ್ರಿಟಿಕ್ಸ್ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿ ಲಭಿಸಿದೆ .

ರಚಿತಾ ಅವರ ಕುಟುಂಬವೂ ಕಲಾಪ್ರೇಮಿಗಳಿಂದ ತುಂಬಿದೆ. ಅವರ ತಂದೆ ರಾಮ್ ಪ್ರಮುಖ ಭರತನಾಟ್ಯ ಕಲಾವಿದರಾಗಿದ್ದು, 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಅವರ ಹಿರಿಯ ಸಹೋದರಿ ನಿತ್ಯಾ ರಾಮ್ ಕನ್ನಡ ಮತ್ತು ತಮಿಳು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಚಿತಾ ಅವರೂ ಭರತನಾಟ್ಯ ಮತ್ತು ಕಥಕ್ ನೃತ್ಯದಲ್ಲಿ ತರಬೇತಿ ಪಡೆದು 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.

Exit mobile version