ADVERTISEMENT

ಕ್ವೀನ್ಸ್ ಪ್ರೀಮಿಯರ್ ಲೀಗ್​​ನ ‘ಕ್ರೀಡೋತ್ಸವ’ ಲೋಗೋ ಲಾಂಚ್‌ ಮಾಡಿದ ನಟಿ ರಮ್ಯಾ

ಕ್ವೀನ್ಸ್ ಪ್ರೀಮಿಯರ್ ಲೀಗ್ (QPL) ಇದರ ಬಹುನಿರೀಕ್ಷಿತ ದ್ವಿತೀಯ ಆವೃತ್ತಿಯ ‘ಕ್ರೀಡೋತ್ಸವ’ ಲೋಗೋವನ್ನು ಇಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿಲಾಯಿತು. ಕಳೆದ ವರ್ಷ ಯಶಸ್ವಿಯಾಗಿ ನಡೆದ ಮೊದಲ ಆವೃತ್ತಿಗೆ ಸಿಕ್ಕ ಭರ್ಜರಿ ಪ್ರತಿಕ್ರಿಯೆ ನಂತರ, ಈ ಸಲದ ಆವೃತ್ತಿಯಲ್ಲಿ 12 ಹೊಸ ಕ್ರೀಡೆಗಳನ್ನು ಸೇರಿಸಿಕೊಳ್ಳಲಾಗಿದ್ದು, ಇದು ಕೇವಲ ಕ್ರೀಡೆ ಮಾತ್ರವಲ್ಲ, ಒಂದು ಮನರಂಜನೆಯ ಹಬ್ಬವಾಗುತ್ತಿದೆ.

RelatedPosts

ADVERTISEMENT
ADVERTISEMENT

25 ಮಿಲಿಯನ್ ಡಿಜಿಟಲ್ ವೀಕ್ಷಣೆಗಳು ಮತ್ತು 5000+ ಪ್ರೇಕ್ಷಕರು ಎಂಬ ಮೊದಲ ಆವೃತ್ತಿಯ ಭರ್ಜರಿ ಯಶಸ್ಸಿನ ಬಳಿಕ, QPL 2.0 ಭಾರತವ್ಯಾಪಿ ಚಳುವಳಿಯಾಗಿ ರೂಪುಗೊಳ್ಳಲು ಸಜ್ಜಾಗಿದೆ.

ಕಾರ್ಯಕ್ರಮದಲ್ಲಿ QPL ಸ್ಥಾಪಕ ಶ್ರೀ ಮಹೇಶ್ ಗೌಡ, ಜನಪ್ರಿಯ ನಟಿ ಹಾಗೂ ಸ್ಯಾಂಡಲ್ವುಡ್ ಕ್ವೀನ್ ಶ್ರೀಮತಿ ರಮ್ಯಾ, ಹಾಗೂ ಪ್ರಸಿದ್ಧ ನಟ ಮತ್ತು QPL ಸಮಿತಿಯ ಸದಸ್ಯ ಶ್ರೀ ಪ್ರಮೋದ್ ಶೆಟ್ಟಿ ಉಪಸ್ಥಿತರಿದ್ದರು. ಜೊತೆಗೆ ಬಾಲಿವುಡ್ ನಟಿ ಶ್ರೀಮತಿ ಎಲಿ ಎವ್ರಾಮ್ ಕೂಡ ತಮ್ಮ ಬೆಂಬಲವನ್ನು ಸೂಚಿಸಲು ಆಗಮಿಸಿದ್ದರು. ಬೆಂಗಳೂರಿನ ಕ್ರೀಡೆ, ಫ್ಯಾಷನ್ ಮತ್ತು ಚಲನಚಿತ್ರ ಲೋಕದ ಗಣ್ಯರು ಈ ವೇಳೆ ಹಾಜರಿದ್ದರು.

“QPL 2.0 ಮೂಲಕ ನಾವು ಕೇವಲ ಮುಂದಿನ ಹಂತಕ್ಕೆ ಹೋಗುತ್ತಿಲ್ಲ. ನಾವು ಮಹಿಳೆಯರಿಗಾಗಿ ಕ್ರೀಡೆ ಮತ್ತು ಮನರಂಜನೆ ಕ್ಷೇತ್ರವನ್ನು ಪೂರ್ತಿಯಾಗಿ ಬದಲಾಯಿಸುತ್ತಿದ್ದೇವೆ,” ಎಂದು ಶ್ರೀ ಮಹೇಶ್ ಗೌಡ ಹೇಳಿದರು. “ಈ ಸೀಸನ್ನಲ್ಲಿ ನಾವು 50 ಮಿಲಿಯನ್ ಡಿಜಿಟಲ್ ವೀಕ್ಷಣೆಗಳ ಗುರಿ ಹೊಂದಿದ್ದೇವೆ, ಭಾರತದೆಲ್ಲೆಡೆ ವಿಸ್ತರಿಸಲು ತಯಾರಾಗಿದ್ದೇವೆ. ಇಂದು ಯುವಕರು ಮೊಬೈಲ್ ಗೇಮಿಂಗ್ ಹಾಗೂ ತಂತ್ರಜ್ಞಾನದಲ್ಲಿ ಹೆಚ್ಚು ನಿಲುಕುತ್ತಿರುವುದನ್ನು ನೋಡಿ ಚಿಂತೆಗೊಳಗಾಗಬೇಕಾಗಿದೆ. ಸಿನಿ ತಾರೆಗಳು ತಾವು ಫಿಟ್ ಆಗಿ ಉಳಿಯಲು ಸಮಯ ಒದಗಿಸುತ್ತಿರುವುದೇ ಯುವ ಜನತೆಗೆ ಪ್ರೇರಣೆಯಾಗಿದೆ. ನಿಜವಾದ ಸಬಲೀಕರಣ ನಿಜವಾದ ಭಾಗವಹಿಸುವಿಕೆಯಿಂದ ಶುರುವಾಗುತ್ತದೆ.”

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದಾಗ ನಟಿ ರಮ್ಯಾ, “ಕ್ಯೂಪಿಎಲ್ ಮಹಿಳಾ ಕಲಾವಿದರ ಬೆಂಬಲಿಸಿ, ಅವರನ್ನು ಉತ್ತೇಜಿಸುತ್ತಿರುವ ರೀತಿ ನನಗೆ ತುಂಬಾ ಇಷ್ಟವಾಗಿದೆ. ಈ ವೇದಿಕೆಯ ಮೂಲಕ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಜೊತೆಗೆ ಮಹಿಳೆಯರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿತರಾಗಬೇಕು. ಇದು ನಮಗೆ ದೈಹಿಕವಾಗಿ ಆರೋಗ್ಯಕರವಾಗಿರುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಆನ್‌ಲೈನ್ ಗೇಮಿಂಗ್ ಹಾಗೂ ಸೋಷಲ್ ಮೀಡಿಯಾದಿಂದ ದೂರವಿರಲು ನೆರವಾಗುತ್ತದೆ. ಕ್ಯೂಪಿಎಲ್‌ನೊಂದಿಗೆ ನನ್ನ ಸಹಯೋಗ ಇರುವುದಕ್ಕೆ ನನಗೆ ಸಂತೋಷವಾಗಿದೆ.”

QPL 2.0 ಕಾರ್ಯಕ್ರಮವು ಯುವಜನತೆಗೆ ಡಿಜಿಟಲ್ ಮಾಧ್ಯಮದ ಹದ ಮೀರುವ ಬಳಕೆಯ ಬದಲು ಶಾರೀರಿಕ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಸಂದೇಶ ನೀಡುತ್ತದೆ.