‘ಪವರ್ ಮ್ಯಾನ್’ ಜೊತೆ ಕಾಟೇರ ಕಾಂಬೋ ಭರ್ಜರಿ ಕಂಬ್ಯಾಕ್..!

ರಾಜ್ ನಿವಾಸದಲ್ಲಿ ಯುವ ಸಿನಿಮಾದ ಟೈಟಲ್ ರಿವೀಲ್

ಹ್ಮೋ (17)

ದೊಡ್ಮನೆ ಕುಡಿ, ಯುವ ರಾಜಕುಮಾರ್ ಅವರ ನೆಕ್ಸ್ಟ್ ಮೂವಿ ಯಾವುದು ಅನ್ನೋ ಪ್ರಶ್ನೆಗೆ ಫೈನಲಿ ಉತ್ತರ ಸಿಕ್ಕಿದೆ. ಗಣೇಶನ ಹಬ್ಬದಂದೇ ಸ್ಯಾಂಡಲ್‌ವುಡ್‌ನಲ್ಲಿ ಪಟಾಕಿ ಸಿಡಿಸಿರೋ ಯುವ, ಪವರ್‌ಫುಲ್ ಟೈಟಲ್ ಒಂದನ್ನ ರಿವೀಲ್ ಮಾಡಿ ಅಭಿಮಾನಿಗಳಿಗೆ ಹಬ್ಬದ ಬೋನಸ್ ಕೊಟ್ಟಿದ್ದಾರೆ.

‘ಪವರ್ ಮ್ಯಾನ್’ ಜೊತೆ ಕಾಟೇರ ಕಾಂಬೋ ಭರ್ಜರಿ ಕಂಬ್ಯಾಕ್..!!   

ರಾಜ್ ನಿವಾಸದಲ್ಲಿ ಯುವ ಸಿನಿಮಾದ ಟೈಟಲ್ ರಿವೀಲ್

ಯುವ ‘ಪವರ್ ಮ್ಯಾನ್’ಗೆ ಜಡೇಶ್ ಕೆ. ಹಂಪಿ ಆಕ್ಷನ್ ಕಟ್

ಪುನೀತ್ ರಾಜಕುಮಾರ್ ನೆನೆಪು.. ಆದ್ರೆ ಅಪ್ಪು ಕಥೆಯಲ್ಲ..!

ಯುವ, ಎಕ್ಕ ಸಿನಿಮಾಗಳ ನಂತರ  ಯುವ ರಾಜಕುಮಾರ್ ಅವರ ಮುಂದಿನ ನಡೆ ಏನಿರಬಹುದು ಅನ್ನೋ ಕುತೂಹಲ ದೊಡ್ಮನೆ ಅಭಿಮಾನಿಗಳಲ್ಲಿ ಇತ್ತು. ಸದ್ಯ ಗಣೇಶ ಚತುರ್ಥಿಯ ಶುಭದಿನದಂದೇ ಯುವ ತಮ್ಮ ನೂತನ ಚಿತ್ರದ ಮಾಸ್ ಟೈಟಲ್ ಅನ್ನು ಅನಾವರಣಗೊಳಿಸಿದ್ದಾರೆ. ಸದಾಶಿವನಗರದ ವರನಟ ಡಾ.ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ವಾಸವಿದ್ದ ಪವಿತ್ರ ನಿವಾಸದಲ್ಲೇ ರಾಘವೇಂದ್ರ ರಾಜಕುಮಾರ್ ಅವರಿಂದ ಈ ಬಿಗ್ ಪ್ರಾಜೆಕ್ಟ್‌ಗೆ “ಪವರ್ ಮ್ಯಾನ್” ಎಂದು ಹೆಸರಿಡಲಾಗಿದೆ. ‘ದಿ ಗ್ರೇಟೆಸ್ಟ್ ಪವರ್ ಇನ್ ಎ ಗುಡ್ ಹಾರ್ಟ್’ ಎಂಬ ಟ್ಯಾಗ್‌ಲೈನ್‌ ಮೂಲಕವೇ ಸಿನಿಮಾ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ ಈ ಚಿತ್ರತಂಡ.

ಈ ಪವರ್‌ಫುಲ್ ಸಿನಿಮಾಗೆ ಸ್ಯಾಂಡಲ್‌ವುಡ್‌ನ ಸಕ್ಸೆಸ್‌ಫುಲ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಜಗದೀಶ್ ಗೌಡ ಜೊತೆಯಾಗಿ ಬಂಡವಾಳ ಹೂಡುತ್ತಿದ್ದು, ಅಟ್ಲಾಂಟ ನಾಗೇಂದ್ರ ಸಹ-ನಿರ್ಮಾಪಕರಾಗಿದ್ದಾರೆ. ಇನ್ನು ‘ಕಾಟೇರ’ ಖ್ಯಾತಿಯ ಜಡೇಶ್ ಕೆ ಹಂಪಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಬಿ. ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ಮ್ಯಾಜಿಕ್ ಈ ಚಿತ್ರಕ್ಕಿರಲಿದೆ. ಇದು ನಮ್ಮ ನೆಲದ ಸತ್ವವಿರೋ, ಪ್ರತಿಯೊಬ್ಬರಿಗೂ ಹಾಗೂ ಮುಖ್ಯವಾಗಿ ಮಕ್ಕಳಿಗೆ ತೀರಾ ಆಪ್ತವಾಗೋ ಮಾಸ್ ಅಂಡ್ ಇಮೋಷನಲ್ ಕಥೆಯಾಗಿದ್ದು, ಸಿನಿಮಾದಲ್ಲಿ ಯುವ ಅವರ ಹೈ-ವೋಲ್ಟೇಜ್ ಡ್ಯಾನ್ಸ್ ಮತ್ತು ಭರ್ಜರಿ ಆಕ್ಷನ್ ಸನ್ನಿವೇಶಗಳೇ ಮೇನ್ ಹೈಲೈಟ್ ಆಗಿರಲಿವೆ.

ಟೈಟಲ್ ರೀವಿಲ್ ವೇಳೆ ಇಡೀ ದೊಡ್ಮನೆ ಕುಟುಂಬ ಉಪಸ್ಥಿತರಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಹಾಗು ಅವರ ಮಗಳು ಕೂಡ ಪವರ್ ಮ್ಯಾನ್ ಟೈಟಲ್ ರೀವಿಲ್ ಗೆ ಸಾಕ್ಷಿಯಾಗಿದ್ರು. ಇನ್ನು ಶೀರ್ಷಿಕೆಯಲ್ಲಿ ‘ಪವರ್’ ಎಂಬ ಪದವಿರೋದ್ರಿಂದ ಇದು ಅಪ್ಪು ಅವರ ಜೀವನಾಧಾರಿತ ಚಿತ್ರವಿರಬಹುದಾ ಎಂಬ ಚರ್ಚೆಗೂ ನಿರ್ದೇಶಕ ಜಡೇಶ್ ತೆರೆ ಎಳೆದಿದ್ದು, “ಇದು ಪುನೀತ್ ರಾಜಕುಮಾರ್ ಅವರ ಕುರಿತಾದ ಚಿತ್ರವಲ್ಲ, ಆದರೆ ಒಳ್ಳೆಯ ಮನಸ್ಸಿನ ಶಕ್ತಿಯ ಕಥೆ” ಎಂದು ಸ್ಪಷ್ಟಪಡಿಸಿದ್ದಾರೆ.

ಎಕ್ಕಾ ನಂತರ ಸೈಲೆಂಟ್ ಆಗಿದ್ದ ಯುವ, ಇದೀಗ ಸಂಪೂರ್ಣ ಸ್ಕ್ರಿಪ್ಟ್ ವರ್ಕ್ ಮುಗಿಸಿಕೊಂಡು ಮುಂದಿನ ತಿಂಗಳಿಂದ ಕ್ಯಾಮೆರಾ ಎದುರಿಸಲು ಫುಲ್ ಜೋಶ್‌ನಲ್ಲಿ ರೆಡಿಯಾಗಿದ್ದಾರೆ. ಒಟ್ಟಿನಲ್ಲಿ ‘ಪವರ್ ಮ್ಯಾನ್’ ಎಂಬ ಅಬ್ಬರದ ಹೆಸರಿನೊಂದಿಗೆ ಬಂದಿರೋ ದೊಡ್ಮನೆ ಕುಡಿಯ ಈ ಹೊಸ ಆಟ, ಗಾಂಧಿನಗರದ ಬಾಕ್ಸ್ ಆಫೀಸ್‌ನಲ್ಲಿ ಯಾವ ಮಟ್ಟಿಗೆ ಶೇಕ್ ಮಾಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version