ಗಾಯಗೊಂಡ ಸಿಂಹದ ಉಸಿರು ಅದರ ಘರ್ಜನೆಗಿಂತ ಜೋರಿರಲಿದೆ ಅನ್ನೋ ಮಾತಿದೆ. ಅದ್ರಂತೆ ಶೂಟಿಂಗ್ ವೇಳೆ ಗಾಯಗೊಂಡು, ಇಷ್ಟು ದಿನ ರೆಸ್ಟ್‌ನಲ್ಲಿದ್ದ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್, ಇದೀಗ ಡ್ರ್ಯಾಗನ್ ಅಡ್ಡಾಗೆ ಮರಳುವ ಸೂಚನೆ ನೀಡಿದ್ದಾರೆ. ಹೇಗಿದೆ ತಾರಕ್ ನ್ಯೂ ಲುಕ್..? ನೀಲ್ ಏನು ಮಾಡ್ತಿದ್ದಾರೆ ಅನ್ನೋದಕ್ಕೆ ಈ ಸ್ಟೋರಿ ನೋಡಿ.
NTR ನ್ಯೂ ಲುಕ್.. ಡ್ರ್ಯಾಗನ್ ಅಡ್ಡಾದಿಂದ ನಯಾ ಖಬರ್
ಸಖತ್ ಕಿಕ್ ಕೊಡ್ತಿದೆ ತಾರಕ್ ಲುಕ್.. ಎಲ್ಲೆಡೆ ವೈರಲ್..!!
ಜೂನಿಯರ್ ಎನ್‌ಟಿಆರ್.. ವಿಶ್ವದಾದ್ಯಂತ ಅಭಿಮಾನಿ ಬಳಗ ಹೊಂದಿರೋ ಗ್ಲೋಬಲ್ ಸ್ಟಾರ್. ದೇವರ ಪಾರ್ಟ್-1 ಬಳಿಕ ಪಾರ್ಟ್-2ಗೂ ಮೊದಲು ಡ್ರ್ಯಾಗನ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ತಾರಕ್. ಮಾನ್‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆ ಎನ್‌ಟಿಆರ್ ಈ ಬಾರಿ ಕೈ ಜೋಡಿಸಿದ್ದು, ಈಗಾಗ್ಲೇ ಒಂದಷ್ಟು ಶೂಟಿಂಗ್ ಆಗಿ, ಅದರ ಫೂಟೇಜ್ ಕೂಡ ಡಿಲೀಟ್ ಆಗಿದೆ ಎನ್ನಲಾಗ್ತಿತ್ತು. ಆದ್ರೀಗ ಡ್ರ್ಯಾಗನ್ ಅಡ್ಡಾದಿಂದ ನಯಾ ಖಬರ್ ಹೊರಬಂದಿದೆ.
ಸದ್ಯದಲ್ಲೇ ಡ್ರ್ಯಾಗನ್ ಶೂಟಿಂಗ್ ಸೆಟ್‌ಗೆ ಮರಳುವ ಮುನ್ಸೂಚನೆ ನೀಡಿದ್ದಾರೆ ಜೂನಿಯರ್ ಎನ್‌ಟಿಆರ್. ಹೌದು.. ಅದಕ್ಕಾಗಿ ಬಿಯರ್ಡ್ ಹಾಗೂ ಹೇರ್ ಸ್ಟೈಲ್ ಬದಲಿಸಿದ್ದು, ದೊಡ್ಡದಾದ ಗಡ್ಡದಲ್ಲಿ ಸಿಕ್ಕಾಪಟ್ಟೆ ಕಿಕ್ ಕೊಡ್ತಿದ್ದಾರೆ ಯಂಗ್ ಟೈಗರ್. ಅಂದಹಾಗೆ ಆ ಲುಕ್ ಬದಲಿಸೋಕೆ ಡ್ರ್ಯಾಗನ್ ಸಾರಥಿ ಪ್ರಶಾಂತ್ ನೀಲ್ ಕಾರಣ. ಖುದ್ದು ಅವರೇ ಮುಂದೆ ನಿಂತು ತಾರಕ್‌ಗೆ ನ್ಯೂ ಲುಕ್ ಕೊಡಿಸಿದ್ದಾರೆ. ಅದರಲ್ಲೂ ಏರ್‌ಪೋರ್ಟ್‌ನಲ್ಲಿ ಹೊರಬರ್ತಿರೋ ತಾರಕ್ ಸದ್ಯ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಎಲ್ಲೆಡೆ ರಾರಾಜಿಸ್ತಿದ್ದಾರೆ.
ಗಾಯಗೊಂಡ ತಾರಕ್ ಚೇತರಿಕೆ.. ಡ್ರ್ಯಾಗನ್ ಕಿಕ್‌ಸ್ಟಾರ್ಟ್
ಒಂದಲ್ಲ ಎರಡೆರಡು ಭಾಗಗಳಲ್ಲಿ NTR-ನೀಲ್ ಪ್ರಾಜೆಕ್ಟ್..!
ಅಂದಹಾಗೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆಯಡಿ ತಯಾರಾಗ್ತಿರೋ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಹಾಗೂ ತಾರಕ್ ಕಾಂಬೋನ ಡ್ರ್ಯಾಗನ್ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗ್ತಿದೆ. ಅದಕ್ಕಾಗಿ ಜಿಮ್‌ನಲ್ಲಿ ಸಿಕ್ಕಾಪಟ್ಟೆ ಬೆವರು ಹರಿಸುತ್ತಿರೋ ತಾರಕ್, ಶೂಟಿಂಗ್ ವೇಳೆ ಆದ ಪೆಟ್ಟಿನಿಂದಲೂ ಚೇತರಿಸಿಕೊಂಡಿದ್ದಾರೆ. ಕಾಂತಾರ-1 ಚಿತ್ರದ ನಾಯಕನಟಿ ರುಕ್ಮಿಣಿ ವಸಂತ್ ಅವರೇ ಈ ಡ್ರ್ಯಾಗನ್‌ಗೂ ನಾಯಕಿ ಆಗಿದ್ದು, ಸದ್ಯದಲ್ಲೇ ಬಿಗ್ ನ್ಯೂಸ್ ಹೊರಬೀಳಲಿದೆ.





