ಮಾರ್ನಮಿ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದ ಬಾದ್‌ಷಾ ಕಿಚ್ಚ ಸುದೀಪ್, ಅದರ ಟ್ರೈಲರ್ ಕೂಡ ಲಾಂಚ್ ಮಾಡಿ, ಟೀಂಗೆ ಸಾಥ್ ನೀಡಿದ್ದಾರೆ. ಟೋಬಿ ಚೈತ್ರಾ ಆಚಾರ್ ನಟನೆಯ ಮಾರ್ನಮಿಯ ಕಥೆ ಏನು..? ಸ್ಯಾಂಪಲ್ಸ್ ಹೇಗಿದೆ..? ಕಿಚ್ಚ ಹೇಳಿದ್ದೇನು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ. ನೀವೊಮ್ಮೆ ನೋಡಿ

ಟೋಬಿ ಚೈತ್ರಾ ಆಚಾರ್ ‘ಮಾರ್ನಮಿ’ಗೆ ಸುದೀಪ್ ಸಾಥ್
ಹಿನ್ನೆಲೆ ಧ್ವನಿ ನೀಡಿದ್ರು.. ಟ್ರೈಲರ್ ಕೂಡ ಲಾಂಚ್ ಮಾಡಿದ್ರು
ಮಾರ್ನಮಿ ಅನ್ನೋ ಡಿಫರೆಂಟ್ ಟೈಟಲ್ ಜೊತೆ ಕಥಾವಸ್ತುವನ್ನು ಕೂಡ ಇಟ್ಕೊಂಡು ಇದೇ ನವೆಂಬರ್ 21ಕ್ಕೆ ಸಿನಿಮಾವೊಂದು ತೆರೆಗೆ ಬರ್ತಿದೆ. ಟೋಬಿ ಖ್ಯಾತಿಯ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಚೈತ್ರಾ ಜೆ ಆಚಾರ್ ಈ ಚಿತ್ರದ ನಾಯಕನಟಿ. ಇವರೊಟ್ಟಿಗೆ ಕಿರುತೆರೆಯ ಕಲಾವಿದ ರಿತ್ವಿಕ್ ಮಠದ್ ನಾಯಕನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡ್ತಿದ್ದಾರೆ. ಇತ್ತೀಚೆಗೆ ನಟ ಸುದೀಪ್ ಮಾರ್ನಮಿ ಚಿತ್ರದ ಟ್ರೈಲರ್ ಲಾಂಚ್ ಮಾಡಿ, ಟೀಂಗೆ ಸಾಥ್ ನೀಡಿದ್ದು ಇಂಟರೆಸ್ಟಿಂಗ್.

ಯೆಸ್.. ಮಾರ್ನಮಿ ಅಂದ್ರೆ ಕರಾವಳಿ ಭಾಗದಲ್ಲಿ ನಡೆಯೋ ದಸರಾ ಎಂದರ್ಥ. ಸಿನಿಮಾಗಾಗಿ ಇಡೀ ದಸರಾ ವೈಭವವನ್ನ ಸೆಟ್‌ಗಳ ಮೂಲಕ ಸೃಷ್ಠಿಸಿ, ಈ ಸಿನಿಮಾನ ಸೆರೆ ಹಿಡಿದಿರೋ ಚಿತ್ರತಂಡವನ್ನು ಮೆಚ್ಚಲೇಬೇಕಾದ ವಿಷಯವಾಗಿದೆ. ಹಾಗಾಗಿಯೇ ಸ್ವತಃ ಕಿಚ್ಚನೇ ಮಾರ್ನಮಿ ಚಿತ್ರಕ್ಕೆ ಹಿನ್ನೆಲೆ ಧ್ವನಿ ಕೂಡ ನೀಡಿದ್ರು. ಇದೀಗ ಟ್ರೈಲರ್ ಲಾಂಚ್ ಮಾಡಿ, ಚಿತ್ರತಂಡದ ಹಾನೆಸ್ಟ್ ಎಫರ್ಟ್, ಹಾರ್ಡ್ ವರ್ಕ್, ಇನ್ವಾಲ್ಮೆಂಟ್, ಎಮೋಷನ್‌ನ ಕೊಂಡಾಡಿದ್ದಾರೆ.
ಕರಾವಳಿಯ ದಸರಾ ಬೆರಗು.. ಮಾರ್ನಮಿ ಫುಲ್ ಮೆರುಗು
ಕಿರುತೆರೆ ರಿತ್ವಿಕ್ ಬೆಳ್ಳಿಯಾನ.. ಆರಡಿ ಕಟೌಟ್ ಅಭಯಹಸ್ತ
ರಿಶಿತ್ ಶೆಟ್ಟಿ ನಿರ್ದೇಶನದ ಸಿನಿಮಾ ಇದಾಗಿದ್ದು, ರಿತ್ವಿಕ್ ಹಾಗೂ ಚೈತ್ರಾ ಜೆ ಆಚಾರ್ ಜೊತೆಗೆ ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನು ಗೌಡ , ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರಾ ಶೆಟ್ಟಿ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ಸಲಗ, ಭೀಮ ಖ್ಯಾತಿಯ ಶಿವಸೇನ ಕ್ಯಾಮೆರಾ ಕೈಚಳಕ ಚಿತ್ರಕ್ಕಿದ್ದು, ವರದಾರಜ್ ಕಾಮತ್ ಆರ್ಟ್ ವರ್ಕ್, ಚರಣ್ ರಾಜ್ ಸಂಗೀತ ಮಾರ್ನಮಿಗಿದೆ. ಆ್ಯಕ್ಷನ್, ಎಮೋಷನ್, ಹುಲಿ ಕುಣಿತವನ್ನು ಬ್ಲೆಂಡ್ ಮಾಡಿ ಟ್ರೈಲರ್‌ನ ಆಕರ್ಷಕವಾಗಿ ಕಟ್ ಮಾಡಲಾಗಿದ್ದು, ಕಿಚ್ಚನ ಧ್ವನಿ ಸಿನಿಮಾಗೆ ಆನೆಬಲ ತಂದುಕೊಟ್ಟಿದೆ.





