ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ಕೂಲಿ ಸಿನಿಮಾದ ಮಿಕ್ಸ್ ರಿವ್ಯೂಗಳು ಲೋಕೇಶ್ ಕನಕರಾಜ್‌ಗೆ ಸಿಕ್ಕಾಪಟ್ಟೆ ಎಫೆಕ್ಟ್ ನೀಡಿದೆ. ಒಂದ್ಕಡೆ ಆಮೀರ್ ಖಾನ್ ಪ್ರಾಜೆಕ್ಟ್ ಕ್ಯಾನ್ಸಲ್ ಮಾಡಿಕೊಂಡ್ರು. ಮತ್ತೊಂದ್ಕಡೆ ರಜನೀಕಾಂತ್-ಕಮಲ್ ಹಾಸನ್‌ನ ಒಂದೇ ಚಿತ್ರದಲ್ಲಿ ತೆರೆಗೆ ತರೋಕೆ ಸಜ್ಜಾಗಿದ್ದ ಲೋಕಿ ಕನಸಿಕ ಲೋಕ ಕೂಡ ಛಿದ್ರವಾಗಿದೆ. ಆದ್ರೆ ಇಂಟರೆಸ್ಟಿಂಗ್ ವಿಷಯ ಏನಂದ್ರೆ ಅದೇ ತಲೈವಾ-ಕಮಲ್ ಕಥೆಗೆ ಪ್ರಭಾಸ್-ಪವನ್ ಕಲ್ಯಾಣ್ ಫಿಕ್ಸ್ ಆಗಿದ್ದಾರೆ.
ಲೋಕೇಶ್ ಕನಕರಾಜ್ ಹೆಸರು ಕೇಳಿದ್ರೆ ಆ್ಯಕ್ಷನ್, ಇಂಟೆನ್ಸ್ ಸ್ಕ್ರೀನ್ ಪ್ಲೇ, ಮತ್ತು ಮಾಸ್ ಪ್ರೆಸೆಂಟೇಷನ್ ಖಂಡಿತಾ ಸಿಗತ್ತೆ ಅನ್ನೋ ಭರವಸೆ ಪ್ರೇಕ್ಷಕರಿಗೆ ಇದೆ. ಈಗ ಆ ಮಾಯೆ ತೆಲುಗು ಭಾಷೆಯಲ್ಲಿಯೂ ಕಾಣಲು ಸಿದ್ಧತೆ ನಡೆಯುತ್ತಿದೆ. ಲೋಕೇಶ್ ಕನಕರಾಜ್ ಅವರ ಹೊಸ ಚಿತ್ರದಲ್ಲಿ ಪ್ರಭಾಸ್ ಹಾಗೂ ಪವನ್ ಕಲ್ಯಾಣ್ ಇಬ್ಬರೂ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಕಾಂಬಿನೇಶನ್ ತೆಲುಗು ಚಿತ್ರರಂಗದಲ್ಲೇ ಅಲ್ಲ, ದಕ್ಷಿಣ ಭಾರತದಷ್ಟಕ್ಕೂ ಅತಿದೊಡ್ಡ ಸ್ಟಾರ್ ಕಾಂಬೋ ಅಂತ ಹೇಳಬಹುದು.
ರಜನಿ-ಕಮಲ್ ಕಥೆ.. ಪ್ರಭಾಸ್-ಪವನ್ ಜೊತೆ ಲೋಕಿ ಹೆಜ್ಜೆ
ಕೂಲಿಗೆ ಮಿಕ್ಸ್ ರಿವ್ಯೂ.. ಸ್ಟಾರ್ ಡೈರೆಕ್ಟರ್ ಕನಸು ನುಚ್ಚುನೂರು
ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ಡಾರ್ಲಿಂಗ್ ಪ್ರಭಾಸ್ ಇಬ್ಬರಿಗೂ ತಮ್ಮದೇ ಆದ ಫ್ಯಾನ್ ಬೇಸ್ ಇರುವುದರಿಂದ, ಸಿನಿಮಾ ಬಿಡುಗಡೆ ದಿನವೇ ಹಬ್ಬದಂತಾಗಬಹುದು. ಹೀಗಾಗಿ ಸಿನಿಮಾ ಮೇಲೆ ಬಾರಿ ಕ್ರೇಜ್ ಈಗಾಗಲೇ ಕ್ರಿಯೇಟ್ ಆಗಿದೆ. ಓಜಿ ಚಿತ್ರದಿಂದ ಪವನ್, ಕಲ್ಕಿಯಿಂದ ಪ್ರಭಾಸ್ ಇಬ್ಬರೂ ಸಂಚಲನ ಮೂಡಿಸಿದ್ದಾರೆ. ಇನ್ನು ಈ ಪ್ರಾಜೆಕ್ಟ್ ನ ನಮ್ಮ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡ್ತಿರೋದು ಮತ್ತೊಂದು ಹೈಲೈಟ್.
ರಜನೀಕಾಂತ್ ಜೊತೆಯ ಕೂಲಿ ಚಿತ್ರ ಬಿಡುಗಡೆಯಾದ ಬಳಿಕ, ಲೋಕೇಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಇಂಡಸ್ಟ್ರಿಯನ್ನೇ ಕಾಡುತ್ತಿತ್ತು. ಹೀಗಿರುವಾಗ ರಜನೀಕಾಂತ್-ಕಮಲ್ ಹಾಸನ್ ಜೋಡಿ ಮತ್ತೆ 46 ವರ್ಷಗಳ ಬಳಿಕ ಒಂದೇ ಚಿತ್ರದಲ್ಲಿ ಕಾಣಬಹುದು ಎನ್ನುವ ಸುದ್ದಿ ಈಗಾಗಲೇ ಸದ್ದು ಮಾಡಿತ್ತು. ಆದ್ರೆ ಕೂಲಿಗೆ ಸಿಕ್ಕ ಮಿಶ್ರ ಪ್ರತಿಕ್ರಿಯೆಗಳು ತಲೈವಾ-ಕಮಲ್‌ನ ಒಂದೇ ಚಿತ್ರದಲ್ಲಿ ತೋರಿಸೋಕೆ ಸಜ್ಜಾಗಿದ್ದ ಲೋಕೇಶ್ ಕನಕರಾಜ್ ಕನಸು ಭಗ್ನವಾಗಿದೆ. ಅವರುಗಳ ಬದಲಿಗೆ ಡಾರ್ಲಿಂಗ್ ಪ್ರಭಾಸ್- ಪವನ್ ಕಲ್ಯಾಣ್ ಹೆಸರು ದಟ್ಟವಾಗಿ ಕೇಳಿಬರ್ತಿದೆ.
46 ವರ್ಷದ ಬಳಿಕ ರಜನಿ-ಕಮಲ್ ಒಂದಾಗೋ ಕನಸು ಭಗ್ನ
ಲೋಕೇಶ್ ಕನಕರಾಜ್ ವಿಷನ್‌ಗೆ ಕನ್ನಡದ KVN ಆನೆ ಬಲ
ಮೂಲಗಳ ಪ್ರಕಾರ, ಲೋಕೇಶ್ ಕನಕರಾಜ್ ಈಗಾಗಲೇ ಕೆವಿಎನ್ ಬ್ಯಾನರ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಚಿತ್ರವೇ ಅವರ ಮುಂದಿನ ಪ್ರಾಜೆಕ್ಟ್ ಆಗಲಿದೆಯಂತೆ. ಚಿತ್ರದ ಕಥೆ ಕುರಿತು ಎಲ್ಲೂ ಬಹಿರಂಗವಾಗಿಲ್ಲ. ಆದರೆ ಲೋಕೇಶ್ ಅವರ ಟ್ರೇಡ್ಮಾರ್ಕ್ ಶೈಲಿ — ಕ್ರೈಮ್, ಪವರ್ ಪ್ಲೇ ಮತ್ತು ಸಾಮಾಜಿಕ ಅಂಶಗಳನ್ನು ಒಳಗೊಂಡ ಕಥೆಯಾಗಿರಬಹುದೆಂಬ ಊಹೆಗಳು ಗಟ್ಟಿಯಾಗಿವೆ. ಈ ಚಿತ್ರದ ಕುರಿತು ಅಫಿಶಿಯಲ್ ಅನೌನ್ಸ್ ಮೆಂಟ್ ಮಾತ್ರ ಬಾಕಿ ಇದೆ. ಆದರೆ ಎಲ್ಲವೂ ಅಂದುಕೊಂಡಂತೆ ನಡೆದರೆ, 2026ರ ಫಸ್ಟ್ ಹಾಫ್ ನಲ್ಲಿ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಇದರೊಟ್ಟಿಗೆ ಪ್ರಭಾಸ್ ಬಳಿ ಫೌಜಿ, ದಿ ರಾಜಾಸಾಬ್, ಸ್ಪಿರಿಟ್ ಸೇರಿದಂತೆ ಹಲವು ಬಿಗ್ ಬಜೆಟ್ ಪ್ರಾಜೆಕ್ಟ್ಸ್ ಇವೆ. ಪವನ್ ಕಲ್ಯಾಣ್ ಸಹ ಉಸ್ತಾದ್ ಭಗತ್ ಸಿಂಗ್ ಮೂಲಕ ಪ್ರೇಕ್ಷಕರ ಮುಂದೆ ಬರಬೇಕಿದೆ.
