ಮತ್ತೆ ರಾಜಮೌಳಿ ಅಡ್ಡಾಗೆ ಕಿಚ್ಚ.. ವಾರಣಾಸಿಯಲ್ಲಿ ಬಾದ್ ಷಾ..!!

‘ವಾರಾಣಾಸಿ’ ಟೀಂ ಸೇರಿಕೊಳ್ಳಲಿದ್ದಾರೆ ವರ್ಲ್ಡ್​ ಟಾಪ್ ಆ್ಯಕ್ಟರ್ಸ್​..!

Untitled design 2026 03 14T143244.985

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

ರಾಜಮೌಳಿ ಸಿನಿಮಾಗಳಲ್ಲಿ ಈಗಾಗಲೇ ಸ್ಯಾಂಡಲ್​ವುಡ್ ಬಾದ್ ಷಾ ಕಿಚ್ಚ ನಟಿಸಿದ್ದಾರೆ. ಈಗ ಹಾಗೂ ಬಾಹುಬಲಿ ಸಿನಿಮಾಗಳ ಮೂಲಕ ತಮ್ಮ ತಾಖತ್ತೇನು ಅಂತ ಈಗಾಗಲೇ ಕಿಚ್ಚ ಪ್ರೂ ಮಾಡಿದ್ದಾರೆ. ಸದ್ಯದ ಸದ್ದಿ ಏನೂ ಅಂದ್ರೆ ರಾಜಮೌಳಿಯ ವಾರಾಣಸಿ ಸಿನಿಮಾದಲ್ಲೂ ಕೂಡ ಸುದೀಪ್ ನಟಿಸ್ತಾಯಿದ್ದಾರೆ ಅನ್ನೋದು.

RRR ಸಿನಿಮಾ ಬಳಿಕ ಎಸ್ ಎಸ್‌ ರಾಜಮೌಳಿ ‘ವಾರಾಣಾಸಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಲೀಡ್ ರೋಲ್‌ನಲ್ಲಿ ನಟಿಸುತ್ತಿರುವ ಈ ಸಿನಿಮಾ ಈಗಾಗಲೇ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿರುವ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರೋದು ಈ ಸಿನಿಮಾದ ಹೈಲೈಟ್‌ಗಳಲ್ಲಿ ಒಂದು.. ಆದ್ರೆ ಈಗ ಮತ್ತೊಂದು ಸುದ್ದಿ ಟಾಲಿವುಡ್​ನಿಂದ ಸ್ಯಾಂಡಲ್​ವುಡ್​ವರೆಗೆ ಹರಿದಾಡ್ತಾಯಿದೆ.

ಮತ್ತೆ ರಾಜಮೌಳಿ ಅಡ್ಡಾಗೆ ಕಿಚ್ಚ.. ವಾರಣಾಸಿಯಲ್ಲಿ ಬಾದ್ ಷಾ..!!

‘ವಾರಾಣಾಸಿ’ ಟೀಂ ಸೇರಿಕೊಳ್ಳಲಿದ್ದಾರೆ ವರ್ಲ್ಡ್​ ಟಾಪ್ ಆ್ಯಕ್ಟರ್ಸ್​..!

ಹೀಗಾಗಿ ರಾಜಮೌಳಿ ವಾರಾಣಸಿ ಸಿನಿಮಾವನ್ನು 1300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುವುದಕ್ಕೆ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಕೂಡ ‘ವಾರಾಣಾಸಿ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಈಗ ಏಪ್ರಿಲ್ ತಿಂಗಳಿನಿಂದ ಸುದೀಪ್ ‘ವಾರಾಣಾಸಿ’ ತಂಡವನ್ನು ಸೇರಿಕೊಳ್ಳಲಿದ್ದಾರೆಂಬ ಸುದ್ದಿ ಓಡಾಡುತ್ತಿದೆ.

ಕೆಲವು ದಿನಗಳ ಹಿಂದಷ್ಟೇ ಕಿಚ್ಚ ಸುದೀಪ್ ‘ವಾರಾಣಾಸಿ’ ಸಿನಿಮಾ ನಟಿಸುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು. ರಾಜಮೌಳಿ ಕಿಚ್ಚ ಸುದೀಪ್‌ಗೆ ಪ್ರಮುಖ ಪಾತ್ರವನ್ನು ನೀಡಿದ್ದು, ಶೀಘ್ರದಲ್ಲಿಯೇ ಈ ತಂಡವನ್ನು ಸೇರಿಕೊಳ್ಳಲಿದ್ದಾರೆಂಬ ಸುದ್ದಿ ಓಡಾಡಿತ್ತು.ಈ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದಾಗಲೂ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದರು. ಹೀಗಾಗಿ ರಾಜಮೌಳಿ ಸಿನಿಮಾದಲ್ಲಿ ನಟಿಸೋದು ಗ್ಯಾರಂಟಿ ಅನ್ನೋದು ಅವರ ಅಭಿಮಾನಿಗಳಲ್ಲಿ ನಂಬಿಕೊಂಡಿದ್ದಾರೆ.

ಏಪ್ರಿಲ್​ನಲ್ಲಿ ವಾರಾಣಸಿ ಶೂಟಿಂಗ್​ ಸೆಟ್ ಸೇರಲಿದ್ದಾರಾ ಕಿಚ್ಚ..?​

ಈಗ.. ಬಾಹಬಲಿ ನಂತ್ರ ವಾರಣಾಸಿಯಲ್ಲಿ ಕಿಚ್ಚನ 15 ನಿಮಿಷ ಸೀನ್

ಸುದೀಪ್ ಈಗಾಗಲೇ ರಾಜಮೌಳಿ ನಿರ್ದೇಶಿಸಿದ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಈಗ’ದಿಂದ ಆರಂಭ ಆದ ಇವರ ಒಡನಾಟ ‘ಬಾಹುಬಲಿ’ ಸಿನಿಮಾದಲ್ಲಿಯೂ ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಿದ್ದು ಗೊತ್ತೇ ಇದೆ. ಈ ಕಾರಣಕ್ಕೆ ‘ವಾರಾಣಾಸಿ’ ಸಿನಿಮಾದಲ್ಲಿಯೂ ಕಿಚ್ಚ ಸುದೀಪ್‌ಗೆ ಪ್ರಮುಖ ಪಾತ್ರವೊಂದನ್ನೇ ನೀಡಿದ್ದಾರೆಂಬ ಸುದ್ದಿಯಿದೆ. ಸದ್ಯ ಸುದೀಪ್ ಇದೇ ಏಪ್ರಿಲ್ ತಿಂಗಳಿನಲ್ಲಿ ‘ವಾರಾಣಾಸಿ’ ತಂಡವನ್ನು ಸೇರಿಕೊಳ್ಳಲಿದ್ದಾರಂತೆ. ಸುಮಾರು 15 ದಿನಗಳು ಕಾಲ್‌ಶೀಟ್ ಕೊಟ್ಟಿದ್ದು, ರಾಜಮೌಳಿ ಕಿಚ್ಚ ಸುದೀಪ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಿದ್ದಾರಂತೆ. ಸದ್ಯ ಈ ಸಿನಿಮಾಗೆ ಬೇಕಿರುವ ತಯಾರಿಯನ್ನು ಕಿಚ್ಚ ಸುದೀಪ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಕಿಚ್ಚ ಸುದೀಪ್ ಆಗಲಿ, ರಾಜಮೌಳಿ ಟೀಮ್ ಆಗಲಿ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಒಂದು ವೇಳೆ ‘ವಾರಾಣಾಸಿ’ಯಲ್ಲಿ ಕಿಚ್ಚ ಸುದೀಪ್ ನಟಿಸೋದೇ ಆದರೆ, ರಾಜಮೌಳಿ ಯಾವ ಪಾತ್ರ ಕೊಟ್ಟಿರಬಹುದೆಂಬ ಕುತೂಹಲ ಮೂಡಿದೆ. ಅವರ ಅಭಿಮಾನಿಗಳಂತೂ ಈ ಸುದ್ದಿ ನಿಜವಾಗಲಿ ಎಂದು ಆಸೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ರಾಜಮೌಳಿ ತಮ್ಮ ಸಿನಿಮಾ ಬಗ್ಗೆ ಚಿಕ್ಕದೊಂದು ಸುದ್ದಿಯನ್ನೂ ಹೊರಗೆ ಬಿಡುವುದಿಲ್ಲ. ರಹಸ್ಯವಾಗಿ ಸಿನಿಮಾವನ್ನು ಶೂಟ್ ಮಾಡುತ್ತಾರೆ. ಸಿನಿಮಾ ಪ್ರಮೋಷನ್ ಶುರು ಮಾಡುವವರೆಗೂ ರಹಸ್ಯವನ್ನು ಬಿಟ್ಟುಕೊಡುವುದಿಲ್ಲ. ಹೀಗಾಗಿ ಕಿಚ್ಚ ಸುದೀಪ್ ನಟಿಸೋದು ಸದ್ಯಕ್ಕೆ ಗಾಳಿ ಸುದ್ದಿಯಾಗಿ ಮತ್ತೊಮ್ಮೆ ಎಲ್ಲೆಡೆ ಹರಿದಾಡುತ್ತಿದೆ.

 

Exit mobile version