ಕಾಂತಾರ ಶೈಲಿಯ ಕರಿಕಾಡ ಚಿತ್ರದ ಟೀಸರ್ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸುತ್ತಿದೆ. ಹೊಸ ಪ್ರತಿಭೆಗಳೇ ಕೂಡಿ ಮಾಡಿರೋ ಕರಿಕಾಡ ಒನ್ಸ್ ಅಗೈನ್ ದಟ್ಟವಾದ ಕಾಡು, ವರಾಹ, ಬೇಟೆ ವಿಚಾರಗಳಿಂದ ಗಮನ ಸೆಳೆದಿದೆ. ರಾಮ್ ಚರಣ್ ತೇಜಾರ ರಂಗಸ್ಥಳಂ, ಧನುಷ್ ಅಸುರನ್ ಬಗೆಯ ಮೇಕಿಂಗ್‌ನಿಂದ ವ್ಹಾವ್ ಫೀಲ್ ತರಿಸಿರೋ ಟೀಸರ್‌ನ ಹೇಗಿದೆ ಹೇಳ್ತೀವಿ ಈ ಸ್ಟೋರಿ ನೋಡಿ.
ಬರೋಬ್ಬರಿ 900 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್‌ನಿಂದ ಈ ವರ್ಷ ಅತಿಹೆಚ್ಚು ಗಳಿಸಿದ ಇಂಡಿಯನ್ ಸಿನಿಮಾ ಆಗಿ ರಾರಾಜಿಸ್ತಿರೋ ಕಾಂತಾರ-1 ಸಿನಿಮಾ ಟೀಂ ಇತ್ತೀಚೆಗೆ ಕೇಕ್ ಕತ್ತರಿಸಿ ಸಂಭ್ರಮಾಚರಿಸಿದೆ. ಹೊಂಬಾಳೆ ಫಿಲಂಸ್ ಹಾಗೀ ರಿಷಬ್ ಶೆಟ್ಟಿ, ಇಡೀ ಚಿತ್ರತಂಡವನ್ನು ಕರೆಸಿ, ಆ ಸಕ್ಸಸ್‌ನ ಸೆಲೆಬ್ರೇಟ್ ಮಾಡಿದೆ. ಅಷ್ಟೇ ಅಲ್ಲ, ಆ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಗೆಲುವು ಕೇವಲ ನಮ್ಮದಲ್ಲ, ಎಲ್ಲರದ್ದು.. ನಿಮ್ಮ ಪ್ರೀತಿಗೆ ಎಂದೆಂದಿಗೂ ಋಣಿ ಎಂದಿದೆ ಟೀಂ ಕಾಂತಾರ-1.
ಕಾಂತಾರ ಶೈಲಿಯ ಕರಿಕಾಡ.. ಸಕ್ಸಸ್ ಸಂಭ್ರಮದಲ್ಲಿ ಶೆಟ್ರು..!
‘ಈ ಗೆಲುವು ನಮ್ಮದಲ್ಲ ಎಲ್ಲರದ್ದು’- ರಿಷಬ್ & ಹೊಂಬಾಳೆ
ಕಲೆ ಅನ್ನೋದು ಯಾರಪ್ಪನ ಸ್ವತ್ತೂ ಅಲ್ಲ. ಶ್ರದ್ಧೆ ಇದ್ದವನಿಗೆ ಅದು ಒಲಿದೇ ಒಲಿಯುತ್ತೆ. ಇಲ್ಲೊಂದು ಕರಿಕಾಡ ಅನ್ನೋ ಚಿತ್ರತಂಡ, ಜಸ್ಟ್ ಸಿಂಗಲ್ ಟೀಸರ್‌ನಿಂದ ಸ್ಯಾಂಡಲ್‌ವುಡ್ ಅಷ್ಟೇ ಅಲ್ಲದೆ, ಬಾಲಿವುಡ್‌ನಲ್ಲೂ ಸಂಚಲನ ಮೂಡಿಸಿದೆ. ಅದಕ್ಕೆ ಕಾರಣ ಚಿತ್ರದ ಕಥೆಯಲ್ಲಿರೋ ಗಟ್ಟಿತನ, ಪಾತ್ರಗಳ ಜೀವಂತಿಕೆ ಹಾಗೂ ಅದ್ಭುತ ಗುರು ಅನಿಸೋ ಮೇಕಿಂಗ್.
ಅಂದಹಾಗೆ ಈ ಚಿತ್ರತಂಡದವರೆಲ್ಲಾ ಕಾರ್ಪೊರೇಟ್ ಸೆಕ್ಟರ್‌ನಲ್ಲಿ ಕೆಲಸ ಮಾಡ್ಕೊಳ್ತಾ, ವೀಕೆಂಡ್‌ಗಳಲ್ಲಿ ಹಾಗೂ ರಜೆ ದಿನಗಳಲ್ಲಿ ಚಿತ್ರಿಸಿರೋ ಸಿನಿಮಾ ಇದು. ಥೇಟ್ ಕಾಂತಾರ ರೀತಿ ದಟ್ಟವಾದ ಕಾಡಲ್ಲಿ, ಸಿಕ್ಕಾಪಟ್ಟೆ ಎಫರ್ಟ್‌ಗಳನ್ನ ಹಾಕಿ ಚಿತ್ರಿಸಲಾಗಿದ್ದು, ವರಾಹ ದೈವದ ಪ್ರತಿರೂಪ ಕಾಡು ಹಂದಿ ಇಲ್ಲಿ ಹೈಲೈಟ್ ಅನಿಸ್ತಿದೆ. ಮ್ಯೂಸಿಕಲ್ ಕಮ್ ಅಡ್ವೆಂಚರಸ್ ಎಲಿಮೆಂಟ್ಸ್ ಇರೋ ಕರಿಕಾಡ ಬರೋಬ್ಬರಿ ಐದು ಭಾಷೆಯಲ್ಲಿ ತಯಾರಾಗಿದ್ದು, 1200ಕ್ಕೂ ಅಧಿಕ ಸ್ಕ್ರೀನ್ಸ್‌ನಲ್ಲಿ ತೆರೆಗೆ ಬರಲಿದೆ. ಟೀಸರ್ ಲಾಂಚ್ ಮಾಡಿದ ಕ್ರೇಜಿಸ್ಟಾರ್ ತನಯ ಮನೋರಂಜನ್, ಟೀಂಗೆ ಶುಭ ಕೋರಿದ್ರು.
ಕಾಡ ನಟರಾಜ್ & ಕಾರ್ಪೊರೇಟ್ ಟೀಂ ಎಕ್ಸ್‌ಪೆರಿಮೆಂಟ್
5 ಭಾಷೆಗಳು.. 1200 ಥಿಯೇಟರ್ಸ್.. ಅತ್ಯದ್ಭುತ ಮೇಕಿಂಗ್
ಕಾಂತಾರ ಚಿತ್ರದ ಬಳಿಕ ದಕ್ಷಿಣ ಕನ್ನಡ ಭಾಗದ ಮಣ್ಣಿನ ಕಥೆಗಳಿಗೆ, ಆಚಾರಗಳಿಗೆ ಹೊಸ ಜೋಶ್ ಬಂತು. ಅದೇ ರೀತಿ ಈ ಕರಿಕಾಡ ಮಲೆನಾಡಿನ ಕಥೆಯನ್ನ ಹೊಂದಿದ್ದು, ಕಾಡ ನಟರಾಜ್ ಅನ್ನೋ ಯುವ ಪ್ರತಿಭೆ ಈ ಚಿತ್ರದಿಂದ ನಾಯಕನಟರಾಗಿ ಹೊರಹೊಮ್ಮುತ್ತಿದ್ದಾರೆ. ಶಾರ್ಟ್ ಫಿಲ್ಮ್ ಮಾಡಿಕೊಂಡು ಸಿನಿಮಾ ಕಡೆ ಒಲವು ತೋರಿದ್ದ ನಟರಾಜ್, ಅದನ್ನ ಕರಿಕಾಡ ಮೂಲಕ ನನಸು ಮಾಡಿಕೊಳ್ತಿದ್ದಾರೆ.
ತುಳು ಚಿತ್ರರಂಗದ ಚೆಲುವೆ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಬಲರಾಜವಾಡಿ, ಯಶ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣವಿದೆ. ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್‌ನಡಿ ಕಾಡ ನಟರಾಜ್ ಪತ್ನಿ ದೀಪ್ತಿ ದಾಮೋದರ್ ತನ್ನ ಪತಿಯ ಕನಸಿನ ಗುರಿಗೆ ದಾರಿ ತೋರಿಸಿರೋದು ವಿಶೇಷ. ಈ ದಾರಿಗೆ ಸ್ನೇಹಿತರಾದ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣದ ಸಾಥ್ ನೀಡಿದ್ದಾರೆ. ಕೆ ವೆಂಕಟೇಶ್ ನಿರ್ದೇಶಿಸಿದ್ದು, ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಸಂಗೀತ ಚಿತ್ರಕ್ಕಿದೆ. ಜೀವನ್ ಗೌಡ ಕ್ಯಾಮೆರಾ ಕೈಚಳಕ, ದೀಪಕ್ ಸಿ.ಎಸ್ ಶಾರ್ಪ್ ಎಡಿಟಿಂಗ್ ಚಿತ್ರಕ್ಕಿದೆ. ರಾಮ್ ಚರಣ್ ರಂಗಸ್ಥಳಂ ಹಾಗೂ ಧನುಷ್ ಅಸುರನ್ ಚಿತ್ರದ ಮೇಕಿಂಗ್‌ನಂತಿರೋ ಈ ಚಿತ್ರದ ಟೀಸರ್‌ನಲ್ಲಿರೋ ಒಂದೊಂದು ಶಾಟ್ ಕೂಡ ಹುಬ್ಬೇರಿಸ್ತಿವೆ.





