ಜುಲೈ 17 ರಂದು ಚಿತ್ರಮಂದಿರಗಳಲ್ಲಿ “ಫಾದರ್ಸ್ ಡೇ”

Untitled design (41)

ಇಲೆವೆನ್ ಎಲಿಮೆಂಟ್ಸ್ ಸಂಸ್ಥೆ ಲಾಂಛನದಲ್ಲಿ ರಾಜಾರಾಮ್ ರಾಜೇಂದ್ರನ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಚಿತ್ರ “ಫಾದರ್ಸ್ ಡೇ”. ತಂದೆ – ಮಗನ ಬಾಂಧವ್ಯ ಸಾರುವ ಈ ಚಿತ್ರ ಇದೇ ಜುಲೈ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದೊಂದು ಕನ್ನಡದ ಮೊದಲ ಬೈಕ್ ರೈಡರ್ ಚಿತ್ರವಾಗಿದೆ. ಚಿತ್ರ ಬಿಡುಗಡೆಗೂ ಪೂರ್ವದಲ್ಲಿ ALL OK ಸಾರಥ್ಯದಲ್ಲಿ ಮೂಡಿಬಂದಿರುವ ಪ್ರಮೋಷನ್ ಸಾಂಗ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ಫಾದರ್ಸ್ ಡೇ” ಕನ್ನಡದ ಮೊದಲ ಬೈಕರ್ ಚಿತ್ರವಾಗಿದೆ. ಇದು ಒಂದು ದಿನದಲ್ಲಿ ನಡೆಯುವ ಕಥೆ. ಅಪ್ಪ – ಮಗನ ಬಾಂಧವ್ಯದ ಕಥೆಯೂ ಹೌದು. ಸಹ ಪಯಣಿಗರು ಅಪ್ಪ – ಮಗ ಎಂದು ನೋಡುಗರಿಗೆ ತಿಳಿದಿರುತ್ತದೆ. ಆದರೆ ಅವರಿಗೆ ಅದು ಗೊತ್ತಿರುವುದಿಲ್ಲ. ಇದರ ಜೊತೆಗೆ ಯಾರು ನಿರೀಕ್ಷಿಸದ ಕ್ಲೈಮ್ಯಾಕ್ಸ್ ಸಹ ಈ ಚಿತ್ರದಲ್ಲಿದೆ. ಅದೇ ಚಿತ್ರದ ವಿಶೇಷ. ಇನ್ನೂ ಈ ಚಿತ್ರಕ್ಕೆ ಡಬ್ಬಿಂಗ್ ಮಾಡಿಲ್ಲ. ಚಿತ್ರೀಕರಣ ನಡೆಯುವಾಗ ಆಡಿದ ನೈಜ ಸಂಭಾಷಣೆಯನ್ನೇ ಬಳಸಿಕೊಳ್ಳಲಾಗಿದೆ. ಅಜಿತ್ ಹಂಡೆ ಹಾಗೂ ಹರ್ಷಿಲ್ ಕೌಶಿಕ್ ಅಪ್ಪ – ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮ್ರಾಗ್ನಿ ರಾಜನ್, ALL OK, ಕ್ಷೇಮ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಾಮ್ರಾಗ್ನಿ ಅವರು ಸಹ ಬೈಕ್ ರೈಡಿಂಗ್ ಮಾಡಿದ್ದಾರೆ. ಸೆನ್ಸಾರ್ ಮಂಡಳಿ U/A 7+ ಪ್ರಮಾಣಪತ್ರ ನೀಡಿದೆ. ಜುಲೈ 17 ಚಿತ್ರ ತೆರೆಗೆ ಬರುತ್ತಿದೆ. ‘ಫಾದರ್ಸ್ ಡೇ’ ದಿನ ಬಿಡುಗಡೆಯಾಗಿದ್ದ ಟ್ರೇಲರ್ ಗೆ ಪ್ರಶಂಸೆ ದೊರಕಿದೆ. ಚಿತ್ರ ಬಿಡುಗಡೆಗೂ ಮುಂಚೆ ಪ್ರಮೋಷನ್ ಸಾಂಗ್ ಅನಾವರಣವಾಗಿದೆ. ಮಕ್ಕಳಿಂದ ಹಿರಿಯರ ತನಕ ನೋಡಬಹುದಾದ ಮನೋರಂಜನೆಯ ಚಿತ್ರ ಇದಾಗಿದೆ ಎಂದು ಚಿತ್ರದ ನಿರ್ದೇಶಕ. ರಾಜಾರಾಮ್ ರಾಜೇಂದ್ರನ್ ತಿಳಿಸಿದರು.

ಇದೊಂದು ಕನ್ನಡಕ್ಕೆ ಹೊಸತರಹದ ಸಿನಿಮಾ ಎಂದು ಮಾತನಾಡಿದ ನಟ ಅಜಿತ್ ಹಂಡೆ, “ಫಾದರ್ಸ್ ಡೇ” ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ಅಪ್ಪನನ್ನು ಹುಡುಕಿ ಬರುವ ಮಗನ ಕಥೆಯೂ ಹೌದು. ಈ ಚಿತ್ರದಲ್ಲಿ 1200 ಸಿಸಿ ಬೈಕ್ ಓಡಿಸಿದ್ದು ಒಳ್ಳೆಯ ಅನುಭವ. ಬೈಕ್ ಓಡಿಸಲು ಶುರು ಮಾಡಿದಾಗ ನನಗೆ ಹೇಳಿ ಮಾಡಿಸಿದ ಬೈಕ್ ಅನಿಸಿತು. ಬೈಕ್ ಕೂಡ ಚಿತ್ರದ ಪ್ರಮುಖ ಪಾತ್ರಧಾರಿ ಎನ್ನಬಹುದು. ಚಿತ್ರೀಕರಣದ ಅನುಭವ ಕೂಡ ಚೆನ್ನಾಗಿತ್ತು ಎಂದರು.

ನನ್ನ ಅಭಿನಯದ “ಆಚಾರ್ & ಕೋ”, ” ಅನಾಮಧೇಯ ಅಶೋಕ್” ಕುಮಾರ್” ಚಿತ್ರಕ್ಕೆ ತಾವು ನೀಡಿದ ಪ್ರೋತ್ಸಾಹಕ್ಕೆ ಚಿರ ಋಣಿ ಎಂದು ಮಾತನಾಡಿದ ನಾಯಕ ಹರ್ಷಿಲ್ ಕೌಶಿಕ್, “ಫಾದರ್ಸ್ ಡೇ” ಎಲ್ಲಾ ವಯಸ್ಸಿನವರು ಮುಜುಗರವಿಲ್ಲದೆ ನೋಡಬಹುದಾದ ತಿಳಿಹಾಸ್ಯ ಹಾಗೂ ಶುದ್ದ ಮನೋರಂಜನೆಯ ಚಿತ್ರ. ಮ್ಯೂಸಿಕ್ ಸಹ ತುಂಬಾ ಚೆನ್ನಾಗಿದೆ. ALL OK ಹಾಗೂ ತಂಡದವರು ಒಂದೊಳ್ಳೆ ಪ್ರಮೋಷನ್ ಸಾಂಗ್ ನೀಡಿದ್ದಾರೆ. ಎಲ್ಲರಿಗೂ ಇಷ್ಟವಾಗುವಂತಹ ಕಥಾಹಂದರವಿರುವ ನಮ್ಮ “ಫಾದರ್ಸ್ ಡೇ” ಚಿತ್ರ ಜುಲೈ 17 ರಂದು ಬಿಡುಗಡೆಯಾಗುತ್ತಿದೆ‌‌ . ನೋಡಿ. ಪ್ರೋತ್ಸಹಿಸಿ ಎಂದರು.

ನಾನು ಪ್ರಮೋಷನ್ ಹಾಡಿಗೆ ಮಾತ್ರ ಸಂಗೀತ ನಿರ್ದೇಶನ ಮಾಡಿದ್ದೇನೆ. ಉಳಿದ ಹಾಡುಗಳಿಗೆ ಜೋ ಪ್ಯಾನಿಕರ್ ಸಂಗೀತ ನೀಡಿದ್ದಾರೆ.  ಈ ಚಿತ್ರದಲ್ಲಿ “ಬ್ಲೂಸ್” ಶೈಲಿಯ ಸಂಗೀತವಿರುವುದು ವಿಶೇಷ ಎಂದು ಚಿತ್ರದಲ್ಲಿ ನಟಿಸಿರುವ ಹಾಗೂ ಒಂದು ಹಾಡಿಗೆ ಸಂಗೀತ ನೀಡಿರುವ ALL OK. ಹೇಳಿದರು.

ನನ್ನ ತಂದೆ ಹಾಗೂ ತಾಯಿ ಬೈಕ್ ರೈಡರ್ಸ್. ನನಗೂ ಚಿಕ್ಕಂದಿನಿಂದಲೂ ಬೈಕ್ ಓಡಿಸುವುದರಲ್ಲಿ ಆಸಕ್ತಿ. ಈ ಚಿತ್ರದಲ್ಲೂ ಬೈಕ್ ರೈಡರ್ ಪಾತ್ರದಲ್ಲೇ ಅಭಿನಯಿಸಿದ್ದೇನೆ ಎಂದು ನಟಿ ಸಮ್ರಾಗ್ನಿ ರಾಜನ್ ತಿಳಿಸಿದರು. ನಟಿ ಕ್ಷೇಮ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕಿ ಜೋ ಪ್ಯಾನಿಕರ್ ಪತ್ರಿಕಾಗೋಷ್ಠಿಯಲ್ಲಿದ್ದರು.

Exit mobile version