ಹೊಸ ನಿರ್ದೇಶಕ ಚಂದ್ರಮೌಳಿಯ ‘ದಿಲ್ಮಾರ್’ಗೆ ಧ್ರುವ ಸರ್ಜಾ ಬೆಂಬಲ; ಟ್ರೇಲರ್ ಬಿಡುಗಡೆ

ಟ್ರಂಪ್ ಗೆ (4)

ಕೆಜಿಎಫ್ ಚಿತ್ರದ ಯಶಸ್ಸಿನ ಹಿನ್ನೆಲೆ ರಚಿಸಿದ ಡೈಲಾಗ್ ರೈಟರ್ ಚಂದ್ರಮೌಳಿ ಅವರ ನಿರ್ದೇಶನ ಚೊಚ್ಚಲ ಚಿತ್ರ ‘ದಿಲ್ಮಾರ್’ ಅಕ್ಟೋಬರ್ 24ರಂದು ತೆರೆಕಾಣಲಿದೆ. ಬೆಂಗಳೂರಿನಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಹೊಸ ತಂಡಕ್ಕೆ ಬೆಂಬಲ ನೀಡಿದರು.ಕಾರ್ಯಕ್ರಮದಲ್ಲಿ  ಚಿತ್ರದ ನಾಯಕ ಹೊಸ ಮುಖ ರಾಮ್ ಮತ್ತು ನಿರ್ದೇಶಕ ಚಂದ್ರಮೌಳಿ ಸಹ ಉಪಸ್ಥಿತಿದ್ದರು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ ಕೂಡ ಭಾಗವಹಿಸಿದ್ದರು. ಇದೇ ವೇಳೆ ಮಾತನಾಡಿದ ದೃವಸರ್ಜ, ದಿಲ್ಮಾರ್ ಚಿತ್ರದ ಮೊದಲ ಹೀರೋ ನಿರ್ದೇಶಕ ಚಂದ್ರಮೌಳಿ. ಇವರು ದೊಡ್ಡ ದೊಡ್ಡ ಚಿತ್ರಗಳಿಗೆ ಡೈಲಾಗ್ ಬರೆದಿದ್ದಾರೆ. ಒಂದು ವಿಷನ್ ಇರುವ ರೈಟರ್ ಈಗ ಡೈರೆಕ್ಟರ್ ಆಗಿದ್ದಾರೆ. ಡೈರೆಕ್ಟರ್‌ಗೆ ರೈಟಿಂಗ್ ಇದ್ದರೆ ಅವರು ವಂಡರ್ ಕ್ರಿಯೇಟ್ ಮಾಡುತ್ತಾರೆ. ಇವರು ಪ್ರಾಮಿಸಿಂಗ್ ಡೈರೆಕ್ಟರ್ ಆಗುತ್ತಾರೆ ಎಂದು ನಿರ್ದೇಶಕರ ಪ್ರತಿಭೆಯನ್ನು ಹೊಗಳಿದರು. ಟ್ರೇಲರ್ ನೋಡಿದ ತಕ್ಷಣ ಸಿನಿಮಾ ನೋಡಬೇಕು ಎನಿಸಿತು ಎಂದು ಧ್ರುವ ಅವರು ತಮ್ಮ ಅನುಭವವನ್ನು ಹಂಚಿಕೊಂಡರು. 

ಚಿತ್ರದ ನಾಯಕ ರಾಮ್ ಅವರು ಈ ಚಿತ್ರ ತಮ್ಮ ದೀರ್ಘಕಾಲದ ಕನಸಿನ ನನಸು ಎಂದು ತಿಳಿಸಿದರು. “2006ರಿಂದ ಇಂಡಸ್ಟ್ರಿಯಲ್ಲಿ ಇದ್ದೇನೆ. ಹೀರೋ ಆಗಬೇಕು ಎಂದು ಹಳ್ಳಿಯಿಂದ ಕನಸು ಕಟ್ಟಿಕೊಂಡು ಬಂದಿದ್ದೆ. ಆ ಕನಸು ಈ ಸಿನಿಮಾ ಮೂಲಕ ನನಸಾಗುತ್ತಿದೆ. ನಾನು ಅಂದು ಕಂಡ ಗುರಿ ತಲುಪಿದ್ದೇನೆ ಎಂಬ ಖುಷಿ ಇದೆ” ಎಂದು ರಾಮ್ ಅವರು ಭಾವುಕರಾದರು

ದಿಲ್ಮಾರ್’ ಚಿತ್ರವು ಸಮೃದ್ಧ ತಾರಾಬಳಗವನ್ನು ಹೊಂದಿದೆ. ಹೊಸ ನಾಯಕ ರಾಮ್‌ಗೆ ಜೊತೆಯಾಗಿ, ಖಳನಾಯಕನ ಪಾತ್ರದಲ್ಲಿ ಡೈಲಾಗ್ ಕಿಂಗ್ ಸಾಯಿ ಕುಮಾರ್ ಟಕ್ಕರ್ ನಟಿಸಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ; ತೆಲುಗು ಚಿತ್ರರಂಗದ ನಟಿ ಡಿಂಪಲ್ ಹಯಾತಿ ಮತ್ತು ಆದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶರತ್ ಲೋಹಿತಾಶ್ವ ಮತ್ತು ಅಶೋಕ್ ಅವರಂತಹ ಅನುಭವಿ ಕಲಾವಿದರು ಚಿತ್ರದ ತಾರಾಬಳಗವನ್ನು ಶಕ್ತಿಪೂರ್ಣಗೊಳಿಸಿದ್ದಾರೆ. ‘ಅರ್ಜುನ್ ರೆಡ್ಡಿ’ ಖ್ಯಾತಿಯ ರಾದನ್ ಚಿತ್ರದ ಸಂಗೀತ ಸಂಯೋಜಕರಾಗಿದ್ದಾರೆ. ತನ್ವಿಕ್ ಅವರ ಛಾಯಾಗ್ರಹಣ ಮತ್ತು ಶಶಾಂಕ್ ಮುರುಳಿಧರನ್ ಅವರ ಸಂಕಲನ ಚಿತ್ರಕ್ಕೆ ಇದೆ. ಚಿತ್ರವನ್ನು ಕೆ. ಮಹೇಶ್ ಮತ್ತು ನಾಗರಾಜ್ ಭದ್ರಾವತಿ ಅವರು ನಿರ್ಮಿಸಿದ್ದಾರೆ.

ದಿಲ್ಮಾರ್ ಚಿತ್ರದ ಟ್ರೇಲರ್ ಅನ್ನು ವೀಕ್ಷಕರು ಮತ್ತು ವಿಮರ್ಶಕರು ಪ್ರಾಮಿಸಿಂಗ್ ಎಂದು ಬಣ್ಣಿಸಿದ್ದಾರೆ. ಟ್ರೇಲರ್‌ನಲ್ಲಿ ಪ್ರೀತಿ ಮತ್ತು ದ್ವೇಷ, ಆಕ್ಷನ್ ಮತ್ತು ಭಾವನೆ ಇವೆಲ್ಲವನ್ನು ಬೆರೆಸಿ ಕಥೆಯನ್ನು ಸೊಗಸಾಗಿ ಮೂಡಿಸಲಾಗಿದೆ. ಲವ್ ಸ್ಟೋರಿಯಾದ ಜೊತೆಗೆ ಮಾಸ್ ಎಲಿಮೆಂಟ್ಸ್‌ನಿಂದ ಕೂಡಿದ ಈ ಚಿತ್ರವನ್ನು ನಿರ್ದೇಶಕ ಚಂದ್ರಮೌಳಿ ಅವರು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

Exit mobile version