ಇನ್ಮುಂದೆ ಟೆನ್ಷನ್‌ಗೆ ಹೇಳಿ ಬೈ ಬೈ.. ಶೀಘ್ರವೇ ಶುರುವಾಗಲಿದೆ ಕಾಮಿಡಿ ಕಿಲಾಡಿಗಳು..!

Untitled design 2025 10 23t162144.123

ಬೆಂಗಳೂರು, 23 ಅಕ್ಟೋಬರ್ 2025: ಕನ್ನಡದ ಮನರಂಜನಾ ವಲಯದಲ್ಲಿ ತನ್ನ ಅನನ್ಯ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿರುವ ಜೀ ಕನ್ನಡ ವಾಹಿನಿ, ಪ್ರೇಕ್ಷಕರನ್ನು ಮತ್ತೊಮ್ಮೆ ನಗೆಗಡಲಿನಲ್ಲಿ ತೇಲಿಸಲು ಸಜ್ಜಾಗಿದೆ. ಜೀ ವಾಹಿನಿಯ ಅತ್ಯಂತ ಜನಪ್ರಿಯ ಮನರಂಜನಾ ಕಾರ್ಯಕ್ರಮಗಳಲ್ಲೊಂದಾದ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಹೊಸ ಸೀಸನ್ ಅಕ್ಟೋಬರ್ 25, ರಿಂದ ಪ್ರಸಾರವಾಗಲಿದೆ.

ಕಾಮೆಡಿ ಕಿಲಾಡಿಗಳು’ ಹೊಸ ಸೀಸನ್‌ನ ನಿರೂಪಕರಾಗಿ ನಿರಂಜನ್ ದೇಶಪಾಂಡೆ ಕಾರ್ಯನಿರವಹಿಸುತ್ತಿದ್ದಾರೆ. ತಮ್ಮ ಅನನ್ಯ ಮಾತಿನ ಶೈಲಿ ಮತ್ತು ಹಾಸ್ಯ ಮಾಡುವುದರಿಂದ ಪ್ರೇಕ್ಷಕರನ್ನು ಸದಾ ರಂಜಿಸಿದ ನಿರಂಜನ್, ‘ಕಾಮೆಡಿ ಕಿಲಾಡಿಗಳು’ ಕಾರ್ಯಕ್ರಮಕ್ಕೆ ಹೊಸ ಚೈತನ್ಯವನ್ನು ತರಲಿದ್ದಾರೆ. 

ಇನ್ನೂ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಮೆಡಿ ಕಿಂಗ್ ಎಂದೇ ಖ್ಯಾತಿ ಪಡೆದಿರುವ ಜನಪ್ರಿಯ ನಟ ಜಗ್ಗೇಶ್ ಮತ್ತು ಚಿತ್ರರಂಗದ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಅವರಿದ್ದಾರೆ. ಕನ್ನಡ ಚಲನಚಿತ್ರರಂಗದಲ್ಲಿ ಹಾಸ್ಯ ಚಿತ್ರಗಳ ಮೂಲಕ ಜನಮನ ಸೂರೆಗೊಂಡಿರುವ ಜಗ್ಗೇಶ್ ಮತ್ತು ತಮ್ಮ ಚಿತ್ರಗಳ ಮೂಲಕ ವಿಭಿನ್ನ ಹಾಸ್ಯ ಪ್ರಕಾರಗಳನ್ನು ರೂಪಿಸಿದ ಯೋಗರಾಜ್ ಭಟ್ ಅವರ ಜೊತೆಗೆ, ಅನುಭವಿ ನಟಿ ತಾರಾ ಅನುರಾಧ ಅವರೂ ತೀರ್ಪುಗಾರರಾಗಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಲಿದ್ದಾರೆ. 

‘ಕಾಮೆಡಿ ಕಿಲಾಡಿಗಳು’ ಕಾರ್ಯಕ್ರಮವು ಕರ್ನಾಟಕದ ವಿವಿಧ ಭಾಗಗಳಿಂದ ಬರುವ ಹೊಸ ಹಾಸ್ಯ ಪ್ರತಿಭೆಗಳಿಗೆ ಒಂದು ವಿಶಾಲ ವೇದಿಕೆಯನ್ನು ನೀಡಲಿದೆ. ಈ ಪ್ರತಿಭಾನ್ವಿತ ಹಾಸ್ಯಕಲಾವಿದರು ತಮ್ಮ ಸ್ಕಿಟ್‌ಗಳು, ಹಾಸ್ಯನಾಟಕಗಳ ಮೂಲಕ ಜನರ ಮನಸನ್ನು ಗೆಲ್ಲಲು ಶೀಘ್ರವೇ ವೇದಿಕೆಗೆ ಬರದಿದ್ದಾರೆ

ಕಾರ್ಯಕ್ರಮದ ಹೊಸ ಸೀಸನ್‌ನ ಪ್ರಸಾರವು ಅಕ್ಟೋಬರ್ 25,ರಂದುಶುರುವಾಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. 

ಸತತ 19 ವರ್ಷಗಳಿಂದ ಕನ್ನಡ ಪ್ರೇಕ್ಷಕರನ್ನು ಮನರಂಜಿಸುತ್ತಿರುವ ಜೀ ಕನ್ನಡ ವಾಹಿನಿ, ‘ಕಾಮೆಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ತನ್ನ ಯಶಸ್ಸಿನ ಪರಂಪರೆಯನ್ನು ಮುಂದುವರೆಸಲಿದೆ. ಹಾಸ್ಯ ಪ್ರೇಮಿಗಳೆಲ್ಲರೂ ಈ ವಾರಾಂತ್ಯದಿಂದ ತಮ್ಮ ಟಿವಿ ಸೆಟ್‌ಗಳ ಮುಂದೆ ಕುಳಿತು, ಕಿಲಾಡಿ ಹಾಸ್ಯದ ಜೊತೆ ಕಿಲಾಡಿ ಮನರಂಜನೆಯನ್ನು ಅನುಭವಿಸಲು ಸಿದ್ಧರಾಗಬಹುದು. ಇನ್ನು ಟೆನ್ಷನ್‌ಗೆ ಬೈಬೈ ಮತ್ತು ನಗೆಗೆ ಜೈಜೈ ಹೇಳುವ ಸಮಯ ಇದಾಗಿದೆ

Exit mobile version