ಸ್ಯಾಂಡಲ್‌ವುಡ್ ಅಂಗಳದಲ್ಲಿ ಈಗ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಹವಾ ಜೋರಾಗಿದೆ. ಸಾಲು ಸಾಲು ಬ್ಲಾಕ್‌ಬಸ್ಟರ್ ಕೊಡ್ತಾ ಇರೋ ದುನಿಯಾ ವಿಜಿಯ್, ಈಗ ನಿರ್ದೇಶಕರಾಗಿಯೂ ಹ್ಯಾಟ್ರಿಕ್ ಗೆಲುವಿನ ಭರ್ಜರಿ ಪಟಾಕಿ ಸಿಡಿಸಿದ್ದಾರೆ. ವಿಜಯ್ ಡೈರೆಕ್ಷನ್ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಮತ್ತು ವಿಜಯ್ ಪುತ್ರಿ ಮೋನಿಷಾಗೆ ಬಿಗ್ ಬ್ರೇಕ್ ನೀಡಿದೆ. ಸಕ್ಸಸ್ ಮೀಟ್‌ನಲ್ಲಿ ಕಣ್ಣೀರಿಟ್ಟ ಮಗಳು, ಸಾಷ್ಟಾಂಗ ನಮಸ್ಕಾರ ಹಾಕಿದ ವಿಜಯ್ ಮತ್ತು ಮಾಸ್ ಟ್ರ್ಯಾಕ್‌ಗೆ ಮರಳಿದ ವಿನಯ್ ವಿಜಯಯೋತ್ಸವದ ಸ್ಟೋರಿ ಇಲ್ಲಿದೆ.
- ಸಿಟಿಲೈಟ್ಸ್ ಸಕ್ಸಸ್.. ವಿಜಯ್ ಹ್ಯಾಟ್ರಿಕ್ ಗೆಲುವಿನ ಸಂಭ್ರಮ
- ತಂದೆ ತ್ಯಾಗಕ್ಕೆ ಮೋನಿಷಾ ಕಣ್ಣೀರು.. ಟ್ರ್ಯಾಕ್‌ಗೆ ಬಂದ ವಿನಯ್
- ಸಿಟಿಲೈಟ್ಸ್ ವಿಜಯೋತ್ಸವದಲ್ಲಿ ವಿಜಯ್ ಸಾಷ್ಟಾಂಗ ನಮಸ್ಕಾರ
- ಮಗಳ ಕೆರಿಯರ್‌ಗಾಗಿ ನಿರ್ದೇಶನ.. ಸಿಟಿಲೈಟ್ಸ್ ಗೆಲ್ಲಿಸಿದ ಸಲಗ
ದುನಿಯಾ ಸಿನಿಮಾದಿಂದ ಗಾಂಧಿನಗರದ ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಗಟ್ಟಿಯಾಗಿ ಜಾಗ ಗಿಟ್ಟಿಸಿಕೊಂಡಿದ್ದ ವಿಜಯ್ ಕುಮಾರ್, ಈಗ ಬರಿ ನಟನಾಗಿ ಅಷ್ಟೇ ಅಲ್ಲದೆ ಸ್ಯಾಂಡಲ್‌ವುಡ್‌ನ ಪ್ರಾಮಿಸಿಂಗ್ ಡೈರೆಕ್ಟರ್ ಆಗಿ ಹ್ಯಾಟ್ರಿಕ್ ಗೆಲುವು ಬಾರಿಸಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಸಲಗ ಹಾಗೂ ಆಮೇಲೆ ಬಂದ ರೌದ್ರಾವತಾರದ ಭೀಮಾ ಸಿನಿಮಾಗಳ ಭರ್ಜರಿ ಸಕ್ಸಸ್ ನಂತರ, ಇದೀಗ ಸಿಟಿಲೈಟ್ಸ್ ಚಿತ್ರದ ಮೂಲಕ ಮೂರನೇ ಬಾರಿಗೆ ಗೆಲುವಿನ ಪತಾಕೆ ಹಾರಿಸಿದ್ದಾರೆ. ಮಾಸ್ ಹಾಗೂ ಎಮೋಷನಲ್ ಕಥಾಹಂದರ ಹೊಂದಿರೋ ಈ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದು, ಯಶಸ್ವಿಯಾಗಿ 2ನೇ ವಾರಕ್ಕೆ ಕಾಲಿಟ್ಟಿರೋದ್ರಿಂದ ಸಿಟಿಲೈಟ್ಸ್ ಟೀಮ್ ಅದ್ಧೂರಿಯಾಗಿ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು.
ಈ ಸಕ್ಸಸ್ ಮೀಟ್‌ನ ಅತ್ಯಂತ ಭಾವನಾತ್ಮಕ ಸನ್ನಿವೇಶ ಅಂದ್ರೆ ದುನಿಯಾ ವಿಜಯ್ ಪುತ್ರಿ, ನಟಿ ಮೋನಿಷಾ ಅವರ ಕಣ್ಣೀರು. ಪ್ರಥಮ ಅಭಿನಯದಲ್ಲೇ ಕನ್ನಡಿಗರ ಮೆಚ್ಚುಗೆ ಗಳಿಸಿರೋ ಮೋನಿಷಾ, ತಮ್ಮ ತಂದೆಯ ತ್ಯಾಗವನ್ನು ನೆನೆದು ಸುದ್ದಿಗೋಷ್ಠಿಯಲ್ಲೇ ಭಾವುಕರಾದರು. “ನನ್ನ ಅಪ್ಪ ಎಂದಿಗೂ ನನ್ನ ಮುಖದ ಎದುರು ‘ನಿನ್ನ ಅಭಿನಯ ಚೆನ್ನಾಗಿದೆ’ ಅಂತ ಹೊಗಳಿದ್ದೇ ಇಲ್ಲ. ಆದ್ರೆ ಹಿಟ್ ಸಿನಿಮಾಗಳನ್ನು ಕೊಟ್ಟು ತಾವೊಬ್ಬ ಯಶಸ್ವಿ ನಿರ್ದೇಶಕರಾಗಿದ್ದಾಗ, ಮಗಳ ಕೆರಿಯರ್‌ಗೋಸ್ಕರ ಸಿನಿಮಾ ನಿರ್ದೇಶನ ಮಾಡಿ ಗೆಲ್ಲಿಸಿದರು. ಥ್ಯಾಂಕ್ ಯೂ ಅಪ್ಪ” ಅಂತ ಹೇಳುತ್ತಾ ತಂದೆಯ ಪ್ರೀತಿ ಮತ್ತು ತ್ಯಾಗಕ್ಕೆ ವೇದಿಕೆಯಲ್ಲೇ ಕಣ್ಣೀರಿಟ್ಟರು.
ಇನ್ನೊಂದೆಡೆ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಅವರಿಗೆ ಈ ಸಿಟಿಲೈಟ್ಸ್ ಸಿನಿಮಾ ಕಂಪ್ಲೀಟ್ ಮಾಸ್ ಟ್ರ್ಯಾಕ್ ಓಪನ್ ಮಾಡಿಕೊಟ್ಟಿದೆ. ಈ ಹಿಂದೆ ಸಿಂಪಲ್ ಹಾಗೂ ಸಾಫ್ಟ್ ಬಾಯ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ವಿನಯ್ ರಾಜ್‌ಕುಮಾರ್ ಅವರ ಕೆರಿಯರ್‌ಗೆ ಈ ಸಿನಿಮಾ ದೊಡ್ಡ ಮೈಲೇಜ್ ತಂದುಕೊಟ್ಟಿದೆ. ಮಾಸ್ ಅವತಾರದಲ್ಲೂ ತಾವು ‘ಸೈ’ ಅಂತ ತೋರಿಸಿಕೊಟ್ಟಿರೋ ವಿನಯ್, ನನಗಿಂತ ಹೆಚ್ಚು ನಂಬಿಕೆ ನನ್ನ ಮೇಲೆ ಇಟ್ಟಿದ್ದ ಡೈರೆಕ್ಟರ್ ವಿಜಿ ಸರ್‌ಗೆ ತುಂಬಾ ಥ್ಯಾಂಕ್ಸ್. ಅಭಿಮಾನಿಗಳು ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡು, ಅವರ ಕಣ್ಣಲ್ಲಿ ಹೆಮ್ಮೆ ನೋಡಿದ್ದಕ್ಕೆ ಖುಷಿಯಾಗ್ತಿದೆ. ಥಿಯೇಟರ್ ವಿಸಿಟ್ ಮಾಡಿದಾಗ ಪ್ರತಿಯೊಬ್ಬರೂ ನಮ್ಮ ಪಾತ್ರಗಳನ್ನು ಮೆಚ್ಚಿಕೊಂಡಿದ್ದಾರೆ ಅಂತ ಸಂಭ್ರಮ ಹಂಚಿಕೊಂಡರು.
- ಮಾಸ್-ಎಮೋಷನ್ ಸಿಟಿಲೈಟ್ಸ್ ಕಥೆಗೆ ಪ್ರೇಕ್ಷಕರ ಜೈಕಾರ..!
- ದೊಡ್ಮನೆ ಕುಡಿ ಜೊತೆ ಮಾಸ್ ಸಿನಿಮಾ ಮಾಡಲು ಭಯ..!
- ಶಿವಣ್ಣ-ಗೀತಕ್ಕ ಅಭಿಮಾನಿಗಳಿಗೆ ವಿಜಯ್ ಹೇಳಿದ್ದೇನು..?
- 2ನೇ ವಾರಕ್ಕೆ ಸಿಟಿಲೈಟ್ಸ್..ಗೆಲುವಿನಲ್ಲಿ ಟೀಂ ಸಕ್ಸಸ್ ಮೀಟ್
ಸಿನಿಮಾ ಗೆದ್ದು ಯಶಸ್ಸಿನ ತೇಲುತ್ತಿರುವ ನಿರ್ದೇಶಕ ಹಾಗೂ ನಟ ದುನಿಯಾ ವಿಜಯ್, ತಮ್ಮ ಪ್ರೇಕ್ಷಕ ಪ್ರಭುಗಳಿಗೆ ಮತ್ತು ಬೆಂಬಲಿಸಿದ ಗಣ್ಯರಿಗೆ ಕೃತಜ್ಞತೆ ಸಲ್ಲಿಸುತ್ತಾ ವೇದಿಕೆಯಲ್ಲೇ ಸಾಷ್ಟಾಂಗ ನಮಸ್ಕಾರ ಹಾಕಿ ಗೌರವ ಸಮರ್ಪಿಸಿದರು. “ನಾನು ದುನಿಯಾ ಸಿನಿಮಾ ಮಾಡಿದಾಗ ಯಾರೋ ಒಬ್ಬ ಅನಾಮಿಕನಾಗಿದ್ದೆ, ಆದ್ರೆ ಕನ್ನಡಿಗರು ನನ್ನನ್ನು ದೇವರಂತೆ ಕೈಹಿಡಿದು ನಡೆಸಿದ್ರು. ಈಗ ನನ್ನ ಮಗಳಿಗೂ ಅದೇ ಆಶೀರ್ವಾದ ನೀಡಿದ್ದೀರಾ. ಜೊತೆಗೆ ದೊಡ್ಮನೆಯಿಂದ ವಿನಯ್‌ನ ಕರ್ಕೊಂಡು ಬಂದು ಮಾಸ್ ಸಿನಿಮಾ ಮಾಡುವಾಗ ಸ್ವಲ್ಪ ಭಯವಿತ್ತು. ಆದ್ರೆ ಶಿವಣ್ಣ, ಗೀತಕ್ಕ ಹಾಗೂ ಎಲ್ಲಾ ಹೀರೋಗಳ ಅಭಿಮಾನಿಗಳು ಚಿತ್ರವನ್ನು ನೋಡಿ ಹಾರೈಸಿದ್ದಾರೆ ಎಂದು ವಿಜಯ್ ಎಮೋಷನಲ್ ಆಗಿ ಮಾತನಾಡಿದರು.
ನಿರ್ದೇಶಕ ವಿಜಿಯ್ ಅವರ ಮಾಸ್ ಪಲ್ಸ್ ಮತ್ತು ರಾ ವಿಶ್ಯುವಲ್ಸ್ ಈ ಬಾರಿಯೂ ವೀಕ್ಷಕರನ್ನು ಥಿಯೇಟರ್‌ನತ್ತ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಯಾವುದೇ ಹಮ್ಮು-ಬಿಮ್ಮು ಇಲ್ಲದೆ, ಕಷ್ಟಪಟ್ಟು ಬಂದ ದಾರಿಯನ್ನು ಮರೆಯದೆ ಮಾಧ್ಯಮದವರು ಹಾಗೂ ಅಭಿಮಾನಿಗಳ ಮುಂದೆ ತಲೆಬಾಗಿದ ದುನಿಯಾ ವಿಜಯ್ ಅವರ ಸರಳತೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೊದಲ ಸಿನಿಮಾದಲ್ಲೇ ನಟಿ ಮೋನಿಷಾ ತಮ್ಮ ಸಹಜ ಅಭಿನಯದಿಂದ ಭವಿಷ್ಯದ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದರೆ, ವಿನಯ್ ರಾಜ್‌ಕುಮಾರ್ ಅವರ ರಾ-ಆಕ್ಷನ್ ಲುಕ್ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಇಡೀ ಸಿನಿಮಾದ ಗೆಲುವು ಪ್ರತಿಯೊಬ್ಬ ತಾಂತ್ರಿಕ ವರ್ಗ ಹಾಗೂ ನಟರ ಶ್ರಮಕ್ಕೆ ಸಿಕ್ಕ ಫಲ ಎಂದು ಚಿತ್ರತಂಡ ಹರ್ಷ ವ್ಯಕ್ತಪಡಿಸಿದೆ.
ಸದ್ಯ ಸಕ್ಸಸ್ ಮೀಟ್‌ನಲ್ಲಿ ಗೆಲುವಿನ ಬಣ್ಣ ಎರಚಿಕೊಂಡಿರೋ ಸಿಟಿಲೈಟ್ಸ್ ಸಿನಿಮಾತಂಡ, ಇಂದಿನಿಂದ ವಿಜಯ ಯಾತ್ರೆಯನ್ನು ಹಮ್ಮಿಕೊಂಡಿದೆ. ಕರ್ನಾಟಕದ ಪ್ರತಿ ಜಿಲ್ಲೆಗೂ ಭೇಟಿ ಕೊಟ್ಟು, ಥಿಯೇಟರ್‌ಗಳಲ್ಲಿ ಸಿನಿಮಾ ನೋಡಿ ಹಾರೈಸಿದ ಅಭಿಮಾನಿಗಳನ್ನು ನೇರವಾಗಿ ಭೇಟಿ ಮಾಡಿ ಧನ್ಯವಾದ ತಿಳಿಸಲು ಇಡೀ ಸಿಟಿಲೈಟ್ಸ್ ಟೀಮ್ ಗ್ರ್ಯಾಂಡ್ ಆಗಿ ರಸ್ತೆಗಿಳಿದಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





