ಇತ್ತೀಚೆಗೆ ಮಾಜಿ ಪತಿ ಚಂದನ್ ಶೆಟ್ಟಿ ಹಾಗೂ ತಮ್ಮ ಎರಡನೇ ಮದ್ವೆ ಬಗ್ಗೆ ಮೌನ ಮುರಿದ ನಿವೇದಿತಾ ಗೌಡ ಟಾಕ್ ಆಫ್ ದಿ ಟೌನ್ ಆಗಿದ್ರು. ಇದೀಗ ಕನ್ನಡ ರ್ಯಾಪರ್ ಚಂದನ್ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್‌ನ ಕನ್ನಡದ ಕ್ರೀಸ್‌ಗೆ ಕರೆತಂದು, ಲೈಫ್ ಈಸ್ ಕ್ಯಾಸಿನೋ ಅಂದಿದ್ದಾರೆ. ಇಲ್ಲಿಯವರೆಗೂ ಕನ್ನಡಕ್ಕೆ ಸೀಮಿತ ಆಗಿದ್ದ ಚಂದನ್, ಈ ಬಾರಿಯ ಎಕ್ಸ್‌ಪೆರಿಮೆಂಟ್‌ನಿಂದ ಇಂಟರ್‌ನ್ಯಾಷನಲ್ ಲೆವೆಲ್‌ಗೆ ಸೌಂಡ್ ಮಾಡ್ತಿದ್ದಾರೆ.
ಇದು ಕನ್ನಡ ರ್ಯಾಪರ್ ಚಂದನ್ ಶೆಟ್ಟಿಯ ಲೇಟೆಸ್ಟ್ ರ್ಯಾಪ್ ಆಲ್ಬಮ್ ಸಾಂಗ್. ಲೈಫ್ ಈಸ್ ಕ್ಯಾಸಿನೋ ಅನ್ನೋ ಈ ಹಾಡು ಚಂದನ್ ಶೆಟ್ಟಿ ಕರಿಯರ್‌ನ ಬಿಗ್ಗೆಸ್ಟ್ ಆಲ್ಬಮ್ ಎವರ್. ಹೌದು.. ಇದೇ ಮೊದಲ ಬಾರಿಗೆ ಇಂಟರ್‌ನ್ಯಾಷನಲ್ ಕೊಲ್ಯಾಬೊರೇಷನ್ ಆಗಿ ಮಾಡಿರೋ ಆಲ್ಬಮ್ ಸಾಂಗ್ ಇದಾಗಿದ್ದು, ನೋಡುಗರ ಮೈ ಕೈ ಕುಣಿಸುವಂತಿದೆ. ಅದ್ರಲ್ಲೂ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್‌ರನ್ನ ಈ ಹಾಡಿನ ಮೂಲಕ ಕನ್ನಡದ ಗ್ಲಾಮರ್ ಕ್ರೀಸ್‌ಗೆ ಕರೆತಂದಿದ್ದಾರೆ ಚಂದನ್.
ಕನ್ನಡ ರ್ಯಾಪರ್ ಕ್ರೀಸ್‌ಗೆ ಕ್ರಿಸ್ ಗೇಲ್.. ಲೈಫ್ ಈಸ್ ಕ್ಯಾಸಿನೋ
ಯೂನಿವರ್ಸ್ ಬಾಸ್ ಗೇಲ್ ಕಮಾಲ್.. ಸ್ಟೈಲಿಶ್ ಲುಕ್ಸ್ ಕಿಕ್
ವೆಸ್ಟ್ ಇಂಡೀಸ್ ಕ್ರಿಕೆಟರ್ ಆಗಿರೋ ಕ್ರಿಸ್ ಗೇಲ್, ಆರ್‌ಸಿಬಿಯಿಂದ ನಮ್ಮ ಕನ್ನಡಿಗರಿಗೂ ಅಚ್ಚುಮೆಚ್ಚಿನ ಕ್ರಿಕೆಟರ್. ಅಲ್ಲದೆ, ಮೋಜು-ಮಸ್ತರಿಗೆ ಕೇರ್ ಆಫ್ ಅಡ್ರೆಸ್ ಆಗಿರೋ ಗೇಲ್, ಈ ಹಾಡಿನ ಮೂಲಕ ಅದನ್ನ ಆನ್‌ಸ್ಕ್ರೀನ್ ಮೇಲೂ ಎಕ್ಸ್‌ಪ್ಲೋರ್ ಮಾಡಿರೋದು ಇಂಟರೆಸ್ಟಿಂಗ್. ಅಂದಹಾಗೆ ಚಂದನ್ ಶೆಟ್ಟಿ ಮ್ಯೂಸಿಕ್ ಕಂಪೋಸ್ ಮಾಡಿ, ಹಾಡಿರೋ ಈ ಹಾಡಿಗೆ ಸ್ವತಃ ಚಂದನ್ ಹಾಗೂ ಗೇಲ್ ಸಾಹಿತ್ಯ ರಚಿಸಿದ್ದಾರೆ.
ತನುಲ್ ದಿಲ್ವಾಲಿ ಕ್ಯಾಮೆರಾ ಕೈಚಳಕ, ಅಂಕುರ್ ಪಜನಿ ಡೈರೆಕ್ಷನ್ ಇರೋ ಈ ಹಾಡು ಕಂಪ್ಲೀಟ್ ಕ್ಯಾಸಿನೋ ಕಲರ್‌ಫುಲ್ ಲೈಪ್‌ನ ಪರಿಚಯಿಸೋ ಕಾರ್ಯ ಮಾಡಿದೆ. ಅಲ್ಲದೆ, ದುಡ್ಡಿನ ಮಹತ್ವದ ಬಗ್ಗೆ ಚಂದನ್ ಬಹಳ ಅರ್ಥಪೂರ್ಣ ಪದಪುಂಜ ಪೋಣಿಸಿ, ಅದನ್ನ ಹಾಡಿನ ಮೂಲಕ ಪ್ರೇಕ್ಷಕರಿಗೆ ಮನರಂಜನೆಯ ಮೂಲಕ ತಲುಪಿಸೋ ಕಾರ್ಯದಲ್ಲಿ ಯಶಸ್ವಿ ಆಗಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಮಿಶ್ರಿತ ಈ ಹಾಡು ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಸದ್ದು ಮಾಡ್ತಿರೋದು ಖುಷಿಯ ವಿಚಾರ.
ದುಡ್ಡೇ ದೊಡ್ಡಪ್ಪ.. ದುಡ್ಡಿದ್ರೆ ದುನಿಯಾ.. ದುಡ್ಡಿದ್ದವನೇ ಗಾಡ್..!!
ಮೋಜು, ಮಸ್ತಿ.. ಕ್ಯಾಸಿನೋ ವರ್ಲ್ಡ್.. ಪೈಸಾ & ಗ್ಲಾಮ್ ಡಾಲ್ಸ್
ಅಂದಹಾಗೆ ಇದು ಬರೀ ಕ್ಯಾಸಿನೋದಲ್ಲಿ ಪಾರ್ಟಿ ಮಾಡೋರಿಗೆ ಅಥ್ವಾ ಜೂಜು ಆಡೋರಿಗಷ್ಟೇ ಅಲ್ಲ, ಒಂದೊಳ್ಳೆ ಡ್ಯಾನ್ಸಿಂಗ್ ನಂಬರ್ ಆಗಿಯೂ ಹೊರಹೊಮ್ಮಿದೆ. ವಿಶೇಷ ಅಂದ್ರೆ ಇದು ಗ್ಯಾಂಬ್ಲಿಂಗ್‌ನ ಪ್ರೇರೇಪಿಸೋ ಸಾಂಗ್ ಅಲ್ಲ. ಅದನ್ನ ಡಿಸ್ಕ್ರಪ್ಷನ್‌ನಲ್ಲಿ ನೀಟ್ ಆಗಿ ಮೆನ್ಷನ್ ಮಾಡಿದ್ದಾರೆ ಚಂದನ್ ಶೆಟ್ಟಿ. ಔಟ್ ಅಂಡ್ ಔಟ್ ಎಂಟರ್‌ಟೈನ್ಮೆಂಟ್‌ಗಾಗಿ ಮಾಡಿರೋ ಸಾಂಗ್ ಎಂದಿರೋ ಚಂದನ್, ಈ ಹಿಂದಿನ ತನ್ನ ಎಲ್ಲಾ ಕಷ್ಟ-ಸುಖಗಳಲ್ಲಿ ಭಾಗಿಯಾಗಿ, ಹರಸಿ, ಹಾರೈಸ್ತಾ ಬರ್ತಿರೋ ಕನ್ನಡಿಗರಿಗೆ ಧನ್ಯವಾದ ಕೂಡ ತಿಳಿಸಿದ್ದಾರೆ.
ಕನ್ನಡದ ಱಪರ್ ಒಬ್ಬ ಹೀಗೆ ಇಂಟರ್‌ನ್ಯಾಷನಲ್ ಸ್ಟಾರ್ ಕ್ರಿಕೆಟರ್‌ನ ಇಟ್ಕೊಂಡು, ಇಷ್ಟೊಂದು ಲ್ಯಾವಿಶ್ ಆಗಿ ಹಾಡೊಂದನ್ನ ಕಟ್ಟೋದು ಸಾಮಾನ್ಯದ ಮಾತಲ್ಲ. ಕನ್ನಡದ ಮಟ್ಟಿಗೆ ಇದೊಂದು ದಾಖಲೆಯೇ ಸರಿ. ಇಂತಹ ಹತ್ತಾರು ರೆಕಾರ್ಡ್‌ಗಳನ್ನ ಬರೆಯೋ ಶಕ್ತಿ ಚಂದನ್ ಶೆಟ್ಟಿಯಲ್ಲಿದೆ. ನಿವೇದಿತಾ ಗೌಡಗೆ ವಿಚ್ಚೇದನ ನೀಡಿದ ಬಳಿಕ ಕೆಲಸದ ಮೇಲೆ ಫೋಕಸ್ಡ್ ಆಗಿರೋ ಚಂದುಗೆ ಇದು ಮೊದಲ ಜಯ. ಇಲ್ಲಿಂದ ಮತ್ತಷ್ಟು ಮ್ಯಾಜಿಕ್‌ಗಳನ್ನ ಮಾಡುವ ಧಾವಂತದಲ್ಲಿದ್ದಾರೆ ನಮ್ಮ ಹೆಮ್ಮೆಯ ಕನ್ನಡದ ಱಪರ್ ಚಂದನ್ ಶೆಟ್ಟಿ.





