ಮುಂಬೈ: ಬಾಲಿವುಡ್ ನಟ ಗೋವಿಂದಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳವಾರ ರಾತ್ರಿ ತಡವಾಗಿ ಮುಂಬೈನ ಜುಹು ನಿವಾಸದಲ್ಲಿ ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದು, ಗೋವಿಂದ ಅವರನ್ನು ತಕ್ಷಣ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ನೇಹಿತ ಮತ್ತು ಕಾನೂನು ಸಲಹೆಗಾರ ಲಲಿತ್ ಬಿಂದಾಲ್ ಅವರು ಈ ವಿಷಯ ದೃಢಪಡಿಸಿದ್ದು, ಗೋವಿಂದ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಗೋವಿಂದ ಅವರು ಪ್ರಜ್ಞೆ ತಪ್ಪಿದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆತರಲಾಯಿತು. ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮೂಲಗಳ ಪ್ರಕಾರ, ಗೋವಿಂದ ಅವರ ಆರೋಗ್ಯ ಈಗ ಸ್ಥಿರವಾಗಿದೆ. ಆದರೆ ಪ್ರಜ್ಞೆ ತಪ್ಪಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸೋಮವಾರ (ನವೆಂಬರ್ 10) ರಂದು ಗೋವಿಂದ ಅವರು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಿರಿಯ ನಟ ಧರ್ಮೇಂದ್ರ ಅವರನ್ನು ಭೇಟಿ ಮಾಡಲು ತೆರಳಿದ್ದರು. ಧರ್ಮೇಂದ್ರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಆರ್ಯನ್ ಖಾನ್ ಮೊದಲಾದ ನಟರೂ ಧರ್ಮೇಂದ್ರ ಅವರ ಆರೋಗ್ಯ ವಿಚಾರಿಸಿದ್ದಾರೆ.
ಬಾಲಿವುಡ್ ನಟ ಗೋವಿಂದ ಬಾಳಲ್ಲಿ ಬಿರುಗಾಳಿ.. ಆ ನಟಿಯೇ ಡಿವೋರ್ಸ್‌ಗೆ ಕಾರಣ!
ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಸುದ್ದಿಗಳು ಹೆಚ್ಚುತ್ತಲೇ ಇದೆ. ಇದೀಗ ಬಾಲಿವುಡ್ ಸ್ಟಾರ್ ನಟನ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ಗೋವಿಂದ ಮತ್ತು ಅವರ ಪತ್ನಿ ಸುನಿತಾ ಅಹುಜಾ 37 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನಕ್ಕೆ ಸಜ್ಜಾಗಿದ್ದಾರೆ.
1987ರಲ್ಲಿ ವಿವಾಹವಾದ ಈ ಜೋಡಿ, ಮೂವರು ಮಕ್ಕಳಿದ್ದಾರೆ. ಸುನೀತಾ ಅವರು ಕಳೆದ ಕೆಲವು ದಿನಗಳ ಹಿಂದೆ ಪ್ರತ್ಯೇಕವಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಒಂದು ಸಂದರ್ಶನದಲ್ಲಿ, “ನಾನು ಹಾಗೂ ಗೋವಿಂದ ಒಟ್ಟಿಗೆ ವಾಸಿಸುವುದಿಲ್ಲ. ಅವರು ಮಕ್ಕಳೊಂದಿಗೆ ಒಂದು ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ, ನಾನು ಅದೇ ಕಟ್ಟಡದ ಮತ್ತೊಂದು ಬಂಗಲೆಯಲ್ಲಿ ವಾಸಿಸುತ್ತಿದ್ದೇನೆ,” ಎಂದು ಹೇಳಿದ್ದರು.
ವಿಚ್ಛೇದನಕ್ಕೆ ಕಾರಣಗಳು
ಗೋವಿಂದ-ಸುನಿತಾ ವಿಚ್ಛೇದನದ ಹಿಂದೆ ವೈಯಕ್ತಿಕ ಕಾರಣವೆಂದು ಹೇಳಲಾಗುತ್ತಿದೆ. ಆದರೆ, ಕೆಲವು ಮೂಲಗಳು ಗೋವಿಂದ ಒಬ್ಬ ಮರಾಠಿ ನಟಿಯೊಂದಿಗಿನ ಸಂಬಂಧವೇ ಈ ಬಿರುಕಿಗೆ ಕಾರಣ ಎಂದು ಹೇಳಲಾಗ್ತಿದೆ. ಆ ನಟಿಯ ಜೊತೆ ಗೋವಿಂದ ಅವರು ಲವ್‌ನಲ್ಲಿದ್ದಾರೆ ಎಂಬ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇವರಿಬ್ಬರು ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನದ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಬಾಲಿವುಡ್ ಸುತ್ತಮುತ್ತಲೂ ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ.





