ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಸೋಷಿಯಲ್ ಮೀಡಿಯಾದಿಂದಲೂ ಬ್ರೇಕ್ ಪಡೆದಿರುವ ಸ್ವೀಟಿ ಸದ್ಯ ಈಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಈ ನಡುವೆ ಅನುಷ್ಕಾ ಮದುವೆ ವಿಚಾರ ಈಗ ಮತ್ತೆ ಮುನ್ನಲ್ಲೇಗೆ ಬಂದಿದೆ.
ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಸೋಷಿಯಲ್ ಮೀಡಿಯಾದಿಂದಲೂ ಬ್ರೇಕ್ ತೆಗೆದುಕೊಂಡಿರುವ ಸ್ವೀಟಿ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಈಗ ಏನು ಮಾಡುತ್ತಿದ್ದಾರೆ, ಎಲ್ಲಿದ್ದಾರೆ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈ ನಡುವೆ ಅನುಷ್ಕಾ ಮದುವೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. 44ರ ವಯಸ್ಸಾದರೂ ಇನ್ನೂ ಸಿಂಗಲ್ ಆಗಿರುವ ಅನುಷ್ಕಾ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತುಗಳು ಮತ್ತೆ ಕೇಳಿಬರುತ್ತಿವೆ.
ಮತ್ತೆ ಮುನ್ನಲೆಗೆ ಬಂತು ಸ್ವೀಟಿ ಮದುವೆ ಸಮಾಚಾರ.!
ವಯಸ್ಸು 44 ಆದ್ರೂ ಅನುಷ್ಕಾ ಶೆಟ್ಟಿ ಇನ್ನೂ ಸಿಂಗಲ್!
ಪ್ರಭಾಸ್ ಅಲ್ಲ…ಉದ್ಯಮಿಯ ಜೊತೆ ಸ್ವೀಟಿ ಮದುವೆ..?
ಅನುಷ್ಕಾ ಮದುವೆ ಬಗ್ಗೆ ಗಾಸಿಪ್ ಹೊಸದಲ್ಲ. ಕಳೆದ ಹಲವು ವರ್ಷಗಳಿಂದ ಅವರ ಮದುವೆ ವಿಚಾರ ಟಾಲಿವುಡ್‌ನಲ್ಲಿ ಆಗಾಗ ಕೇಳಿಬರುತ್ತಲೇ ಇದೆ. ಆದರೆ ಪ್ರತೀ ಸಲವೂ ಸ್ವೀಟಿ ಈ ವಿಷಯಕ್ಕೆ ನೇರವಾಗಿ ಪ್ರತಿಕ್ರಿಯಿಸದೇ ಒಂದು ಸ್ಮೈಲ್ ಕೊಟ್ಟು ಸೈಲೆಂಟ್ ಆಗಿಬಿಡುತ್ತಾರೆ. ಇದೀಗ ಮತ್ತೆ ಅನುಷ್ಕಾ ಮದುವೆ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಇನ್ನೊಂದೆಡೆ ನಟ ಪ್ರಭಾಸ್ ಮತ್ತು ಅನುಷ್ಕಾ ಮದುವೆ ಗಾಸಿಪ್ ಕೂಡ ಟಾಲಿವುಡ್‌ನಲ್ಲಿ ಸದಾ ಚರ್ಚೆಯ ವಿಷಯವಾಗಿರುತ್ತದೆ. ಇವರಿಬ್ಬರ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಹಲವು ಬಾರಿ ಇಬ್ಬರೂ ಮದುವೆ ಆದ್ರೆ ಚೆನ್ನಾಗಿರುತ್ತೆ ಅಂತ ಹೇಳಿಕೊಂಡಿದ್ದಾರೆ. ಆದರೆ ಪ್ರಭಾಸ್ ಮತ್ತು ಅನುಷ್ಕಾ ಇಬ್ಬರೂ ನಾವು ಜಸ್ಟ್ ಫ್ರೆಂಡ್ಸ್ ಅಂತ ಹೇಳಿ ಈ ಗಾಸಿಪ್‌ಗೆ ತೆರೆ ಎಳೆದಿದ್ದಾರೆ. ಆದರೂ ಇವರಿಬ್ಬರ ಹೆಸರು ಒಟ್ಟಿಗೆ ಬಂದಾಗಲೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗುತ್ತದೆ.
ಈ ವರ್ಷವಾದ್ರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ದೇವಸೇನಾ..!?
ಸೋಷಿಯಲ್ ಮೀಡಿಯಾದಿಂದ ಬ್ರೇಕ್…ಮದುವೆ ಪ್ಲಾನ್ ಸೂಚನೆನಾ?
ಈಗ ಕೇಳಿಬರುತ್ತಿರುವ ಮತ್ತೊಂದು ಟಾಕ್ ಪ್ರಕಾರ, ಅನುಷ್ಕಾ ಈ ವರ್ಷವೇ ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಕುಟುಂಬದ ಒತ್ತಡದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಮಾತುಗಳೂ ಹರಿದಾಡುತ್ತಿವೆ. ಕೆಲವು ವರದಿಗಳ ಪ್ರಕಾರ ಕುಟುಂಬ ಸಂಬಂಧಿಯೊಂದಿಗೇ ಮದುವೆ ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಮತ್ತೊಂದೆಡೆ ಒಬ್ಬ ಉದ್ಯಮಿಯೊಂದಿಗೆ ವಿವಾಹವಾಗಲಿದ್ದಾರೆ ಎಂಬ ಸುದ್ದಿಯೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಆದರೆ ಈ ಎಲ್ಲ ಸುದ್ದಿಗಳ ಬಗ್ಗೆ ಅನುಷ್ಕಾ ಶೆಟ್ಟಿ ಅಥವಾ ಅವರ ಕುಟುಂಬದವರು ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಇದು ಕೇವಲ ಗಾಸಿಪ್ ಮಾತ್ರವೇನಾ ಅಥವಾ ನಿಜವಾಗಿಯೂ ಸ್ವೀಟಿ ಮದುವೆ ಮಂಟಪಕ್ಕೆ ಕಾಲಿಡ್ತಾರಾ ಅನ್ನೋ ಪ್ರಶ್ನೆ ಇನ್ನೂ ಹಾಗೆ ಉಳಿದಿದೆ. ಒಟ್ಟಿನಲ್ಲಿ 44ರ ವಯಸ್ಸಿನಲ್ಲೂ ಸಿಂಗಲ್ ಆಗಿರುವ ಅನುಷ್ಕಾಗೆ ಈ ವರ್ಷವಾದರೂ ಮದುವೆ ಆಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಈಗ ಎಲ್ಲರ ಕಣ್ಣು ಸ್ವೀಟಿ ಮದುವೆ ಮೇಲೆ ನೆಟ್ಟಿದೆ.
