ಬಂಗಾರದ ಬೆಲೆ ಭಾರಿ ಏರಿಕೆ: 1.50 ಲಕ್ಷದತ್ತ ಸಾಗಿದ ಚಿನ್ನದ ದರ

Untitled design (92)

ಬೆಂಗಳೂರು: ದೇಶಾದ್ಯಂತ ಚಿನ್ನದ ಬೆಲೆ ತೀವ್ರ ಏರಿಕೆಯಾಗಿದ್ದು, ಇಂದು (ಡಿ.23) ಚಿನ್ನ ಮತ್ತು ಬೆಳ್ಳಿ ಬೆಲೆಗಳು  ಭಾರಿ ಏರಿಕೆ ಕಂಡಿವೆ. ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ಬರೋಬ್ಬರಿ 300 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಮತ್ತೊಂದೆಡೆ ಬೆಳ್ಳಿ ಕೂಡ ತನ್ನ ಹಳೇ ದಾಖಲೆಯನ್ನು ಅಳಿಸಿ ಹಾಕಿ ಹೊದ ದಾಖಲೆ ಸೃಷ್ಟಿಸಿದೆ.

ಚಿನ್ನದ ದರದಲ್ಲಿ ದಿಢೀರ್ ಏರಿಕೆ

ಇಂದಿನ ಮಾರುಕಟ್ಟೆ ಮೌಲ್ಯದ ಪ್ರಕಾರ, ಭಾರತದಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 1,27,000 ರೂಪಾಯಿ ತಲುಪಿದೆ. ಇನ್ನು ಅತ್ಯಂತ ಶುದ್ಧವಾದ 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 1,38,550 ರೂಪಾಯಿ ಆಗಿದ್ದು, ಶೀಘ್ರದಲ್ಲೇ 1.40 ಲಕ್ಷದ ಗಡಿ ದಾಟುವ ಮುನ್ಸೂಚನೆ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಮತ್ತು ಹಬ್ಬಗಳ ಸೀಸನ್ ಈ ದರ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಬೆಳ್ಳಿ ಬೆಲೆ

ಕೇವಲ ಚಿನ್ನ ಮಾತ್ರವಲ್ಲದೆ, ಬೆಳ್ಳಿ ಕೂಡ ಬೆಲೆ ಏರಿಕೆಯ ಪೈಪೋಟಿಗೆ ಇಳಿದಿದೆ. ಬೆಂಗಳೂರಿನಲ್ಲಿ ಇಂದು 100 ಗ್ರಾಂ ಬೆಳ್ಳಿಯ ಬೆಲೆ 22,300 ರೂಪಾಯಿ ತಲುಪಿದ್ದರೆ, ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳಲ್ಲಿ ಇದು ಬರೋಬ್ಬರಿ 23,400 ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ. ಒಂದು ಕೆಜಿ ಬೆಳ್ಳಿಯ ದರವು ಲಕ್ಷಾಂತರ ರೂಪಾಯಿಗಳತ್ತ ಸಾಗಿದ್ದು ಆಭರಣ ಪ್ರೇಮಿಗಳಿಗೆ ಶಾಕ್ ನೀಡಿದೆ.

ರಾಜ್ಯದ ವಿವಿಧ ನಗರಗಳಲ್ಲಿ ದರಗಳ ವಿವರ (22 ಕ್ಯಾರಟ್ ಚಿನ್ನ – 1 ಗ್ರಾಂ)

ಬೆಂಗಳೂರು ಮಾತ್ರವಲ್ಲದೆ ದೇಶದ ವಿವಿಧ ನಗರಗಳಲ್ಲಿ ಬೆಲೆ ವ್ಯತ್ಯಾಸವಾಗಿದ್ದು, ಅದರ ಪಟ್ಟಿ ಇಲ್ಲಿದೆ:

ವಿದೇಶಗಳಲ್ಲಿ ಚಿನ್ನದ ಬೆಲೆ

ಭಾರತಕ್ಕೆ ಹೋಲಿಸಿದರೆ ವಿದೇಶಗಳಲ್ಲಿ ಚಿನ್ನದ ಬೆಲೆ ತುಸು ಕಡಿಮೆ ಇದೆ. ಕೆಲವು ಪ್ರಮುಖ ದೇಶಗಳ 1 ಗ್ರಾಂ (22 ಕ್ಯಾರಟ್) ಚಿನ್ನದ ದರ ಇಲ್ಲಿದೆ:

ಗಮನಿಸಿ: ಮೇಲೆ ನೀಡಿರುವ ದರಗಳು ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಗಿದ್ದು, ನಗರದಿಂದ ನಗರಕ್ಕೆ ಮತ್ತು ಅಂಗಡಿಯಿಂದ ಅಂಗಡಿಗೆ ವ್ಯತ್ಯಾಸವಾಗಬಹುದು. ಈ ದರದ ಮೇಲೆ 3% ಜಿಎಸ್​ಟಿ (GST) ಮತ್ತು ಹೆಚ್ಚುವರಿ ಮೇಕಿಂಗ್ ಚಾರ್ಜಸ್ ಅನ್ವಯವಾಗುತ್ತವೆ. ಹೀಗಾಗಿ ಗ್ರಾಹಕರು ಖರೀದಿಸುವ ಮುನ್ನ ಆಭರಣ ಮಳಿಗೆಯಲ್ಲಿ ದರವನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.

Exit mobile version