ಇಂದಿನ ಚಿನ್ನ ಮತ್ತು ಬೆಳ್ಳಿ ದರ: ಚಿನ್ನ ಖಾರಿದಿಸುವವರಿಗೆ ಬಿಗ್‌ ಶಾಕ್‌..!

Untitled design 2025 11 28T134231.549

ಬೆಂಗಳೂರು: ಕಳೆದ ದಿನ 15 ರೂಪಾಯಿ ಕುಸಿದಿದ್ದ ಚಿನ್ನದ ಬೆಲೆ ಇಂದು ಶುಕ್ರವಾರ (ನವೆಂಬರ್ 29) 65 ರೂಪಾಯಿ ಏರಿಕೆಯೊಂದಿಗೆ ಮತ್ತೆ ಚೇತರಿಸಿಕೊಂಡಿದೆ. ಈ ಏರಿಕೆಯಿಂದಾಗಿ 24-ಕ್ಯಾರಟ್ ಅಪರಂಜಿ ಚಿನ್ನದ ಗ್ರಾಮ್‌ ದರ ಮತ್ತೆ 12,800 ರೂಪಾಯಿ ಗಡಿ ದಾಟಿದೆ. ಬೆಳ್ಳಿಯ ಬೆಲೆಯೂ ಸತತ ಮೂರನೇ ದಿನದಂತೆ ಏರಿಕೆಯ ನಡಿಗೆಯನ್ನು ಮುಂದುವರೆಸಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ

ಚಿನ್ನ: ನಗರದ ಪ್ರಮುಖ ಆಭರಣದಂಗಡಿಗಳಲ್ಲಿ ಇಂದು 22-ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್‌ಗೆ 1,17,750 ರೂಪಾಯಿಗೆ ನಿಗದಿಯಾಗಿದೆ. 24-ಕ್ಯಾರಟ್ ಅಪರಂಜಿ ಚಿನ್ನದ ದರ 10 ಗ್ರಾಮ್‌ಗೆ 1,28,460 ರೂಪಾಯಿ (ಗ್ರಾಮ್‌ಗೆ 12,846 ರೂ.) ಆಗಿದೆ.

ಬೆಳ್ಳಿ: ಕಳೆದ ಎರಡು ದಿನಗಳಲ್ಲಿ 6 ರೂ. ಏರಿದ್ದ ಬೆಳ್ಳಿಯ ಬೆಲೆ ಇಂದು ಮತ್ತೊಂದು 3 ರೂಪಾಯಿ ಏರಿಕೆಯೊಂದಿಗೆ 100 ಗ್ರಾಮ್‌ಗೆ 17,600 ರೂಪಾಯಿ (ಗ್ರಾಮ್‌ಗೆ 176 ರೂ.) ಎಂದು ನಿಗದಿಯಾಗಿದೆ. ಹೀಗಾಗಿ ಮೂರು ದಿನಗಳಲ್ಲಿ ಬೆಳ್ಳಿಯ ಬೆಲೆ ಒಟ್ಟು 9 ರೂಪಾಯಿ ಏರಿಕೆ ಕಂಡಿದೆ.

ದೇಶದ ವಿವಿಧ ನಗರಗಳಲ್ಲಿ 22-ಕ್ಯಾರಟ್ ಚಿನ್ನದ ದರ (ಪ್ರತಿ ಗ್ರಾಮ್‌ಗೆ)

ಚಿನ್ನದ ಬೆಲೆ ದೇಶದ ವಿವಿಧ ನಗರಗಳಲ್ಲಿ ಸರಿಸುಮಾರು ಒಂದೇ ರೀತಿ ಇದ್ದರೂ, ಸ್ಥಳೀಯ ತೆರಿಗೆ ಮತ್ತು ಸರಬರಾಜು ಅವಲಂಬಿಸಿ ಸ್ವಲ್ಪ ವ್ಯತ್ಯಾಸಗಳು ಕಾಣಸಿಗುತ್ತವೆ.

ಚೆನ್ನೈ, ಕೇರಳ ಮತ್ತು ಭುವನೇಶ್ವರ್‌ನಂತಹ ನಗರಗಳಲ್ಲಿ ಬೆಳ್ಳಿಯ ಬೆಲೆ (ಗ್ರಾಮ್‌ಗೆ 183 ರೂ.) ಸ್ವಲ್ಪ ಹೆಚ್ಚಿರುವುದು ಗಮನಾರ್ಹವಾಗಿದೆ.

ವಿದೇಶೀ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆಗಳು ಮಿಶ್ರ ಪ್ರವೃತ್ತಿ ತೋರಿಸುತ್ತಿವೆ. ಕೆಲವೆಡೆ ಯಥಾಸ್ಥಿತಿ ಇರುವಾಗ, ಇನ್ನೂ ಕೆಲವೆಡೆ ಅಲ್ಪ ಏರಿಕೆ ದಾಖಲಾಗಿದೆ. ಪ್ರಸ್ತುತ, ಭಾರತದಲ್ಲಿ 22-ಕ್ಯಾರಟ್ ಚಿನ್ನದ ಸರಾಸರಿ ದರ (ಗ್ರಾಮ್‌ಗೆ ಸುಮಾರು 11,775 ರೂ.) ವಿಶ್ವದ ಇತರೆ ಭಾಗಗಳಿಗೆ ಹೋಲಿಸಿದರೆ ಸ್ವಲ್ಪ ಏರಿಕೆಯಲ್ಲಿದೆ.

ವಿವಿಧ ದೇಶಗಳಲ್ಲಿ 22-ಕ್ಯಾರಟ್ ಚಿನ್ನದ ಪ್ರತಿ ಗ್ರಾಮ್‌ ದರ (ಭಾರತೀಯ ರೂಪಾಯಿಯಲ್ಲಿ)

ಗಮನಿಸಿ: ಇಲ್ಲಿ ನೀಡಲಾದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿವೆ. ಈ ದರಗಳು ನಗರದಿಂದ ನಗರಕ್ಕೆ ಮತ್ತು ಅಂಗಡಿಯಿಂದ ಅಂಗಡಿಗೆ ವ್ಯತ್ಯಾಸವಾಗಬಹುದು. ಜಿಎಸ್‌ಟಿ, ಮೇಕಿಂಗ್ ಚಾರ್ಜ್ ಮತ್ತು ಇತರೆ ವೆಚ್ಚಗಳು ಈ ಮೂಲ ದರದ ಮೇಲೆ ಸೇರಿಸಲಾಗುವುದರಿಂದ, ಅಂತಿಮ ಬೆಲೆ ಇದಕ್ಕಿಂತ ಹೆಚ್ಚಾಗಿರುತ್ತದೆ. ನಿಖರವಾದ ಮಾರುಕಟ್ಟೆ ದರಗಳಿಗಾಗಿ ನೇರವಾಗಿ ನಿಮ್ಮ ಸ್ಥಳೀಯ ಅಭರಣದಂಗಡಿಗೆ ಸಂಪರ್ಕಿಸಿ.

Exit mobile version