ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್: ಚಿನ್ನದ ಬೆಲೆ ಮತ್ತೆ ಇಳಿಕೆ

Untitled design (14)

ನವದೆಹಲಿ, ಆಗಸ್ಟ್ 31: ಚಿನ್ನ ಖರೀದಿಸಲು ಎದುರು ನೋಡುತ್ತಿರುವವರಿಗೆ ಕೊಂಚ ನೆಮ್ಮದಿ ನೀಡುವ ಬೆಳವಣಿಗೆ ಕಂಡುಬಂದಿದೆ. ಕಳೆದ ವಾರದ ಬಹುತೇಕ ದಿನಗಳಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ, ಈ ವಾರದ ಆರಂಭದಲ್ಲೂ ಕುಸಿತ ಮುಂದುವರಿಸಿದೆ. ಸೋಮವಾರ ಚಿನ್ನದ ದರ ಸುಮಾರು 135 ರೂಪಾಯಿ ಇಳಿಕೆಯಾಗಿದೆ. ಕಳೆದ ಏಳು ದಿನಗಳ ಅವಧಿಯಲ್ಲಿ ಹಳದಿ ಲೋಹದ ಬೆಲೆ ಒಟ್ಟಾರೆ ಸುಮಾರು 660 ರೂಪಾಯಿ ತಗ್ಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಸ್ಪಾಟ್ ಗೋಲ್ಡ್ ದರ ಸುಮಾರು 2 ಡಾಲರ್‌ನಷ್ಟು ಕುಸಿದಿದೆ. ಮತ್ತೊಂದೆಡೆ, ಸ್ಪಾಟ್ ಸಿಲ್ವರ್ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಬೆಳ್ಳಿ ದರ ಸದ್ಯಕ್ಕೆ ಯಥಾಸ್ಥಿತಿಯಲ್ಲಿದೆ.

ಇಂದು, ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,43,700 ರೂಪಾಯಿ ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 1,56,770 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 25,500 ರೂಪಾಯಿ ಇದೆ.

ಬೆಂಗಳೂರಿನಲ್ಲಿಯೂ ಚಿನ್ನದ ದರ ರಾಷ್ಟ್ರೀಯ ಸರಾಸರಿ ದರದಷ್ಟೇ ಇದ್ದು, 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ 1,43,700 ರೂಪಾಯಿ ಇದೆ. ಬೆಳ್ಳಿ ದರ 100 ಗ್ರಾಂಗೆ 25,500 ರೂಪಾಯಿ ಇದೆ.

ಆಗಸ್ಟ್ 31ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರ

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ

ನಗರ 1 ಗ್ರಾಂ ಬೆಲೆ
ಬೆಂಗಳೂರು ರೂ.14,370
ಚೆನ್ನೈ ರೂ.14,370
ಮುಂಬೈ ರೂ.14,370
ದೆಹಲಿ ರೂ.14,385
ಕೋಲ್ಕತಾ ರೂ.14,370
ಕೇರಳ ರೂ.14,370
ಅಹ್ಮದಾಬಾದ್ ₹14,375
ಜೈಪುರ್ ರೂ. 14,385
ಲಕ್ನೋ ರೂ.14,385
ಭುವನೇಶ್ವರ್ ರೂ.14,370

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ದರ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ದರ 1 ಗ್ರಾಂಗೆ 142.61 ಡಾಲರ್, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ 13,575 ಎಂದು ನೀಡಲಾಗಿದೆ. ಸ್ಪಾಟ್ ಸಿಲ್ವರ್ ದರ 1 ಗ್ರಾಂಗೆ 2.153 ಡಾಲರ್, ಅಂದರೆ ಸುಮಾರು ರೂ205 ಇದೆ.

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ದರ

ವಿವಿಧ ನಗರಗಳಲ್ಲಿ ಬೆಳ್ಳಿ ದರ

Exit mobile version