ಆಭರಣ ಪ್ರಿಯರಿಗೆ ಶಾಕ್: ಚಿನ್ನದ ಬೆಲೆ ಏರಿಕೆ

ಸ್ವ (15)

ದೇಶದಲ್ಲಿ ಚಿನ್ನದ ಬೆಲೆ  ಮತ್ತೆ ಏರಿಕೆಯ ಹಾದಿಯಲ್ಲಿದ್ದು, ಆಭರಣ ಖರೀದಿದಾರರಿಗೆ ಮತ್ತಷ್ಟು ಹೊರೆ ತಂದಿದೆ. ನಿನ್ನೆ ಒಂದು ಗ್ರಾಂಗೆ 15 ರೂಪಾಯಿ ಏರಿಕೆಯಾಗಿದ್ದ ಚಿನ್ನದ ದರ, ಇಂದು ಏಕಾಏಕಿ 70 ರೂಪಾಯಿ ಹೆಚ್ಚಳ ಕಂಡಿದೆ. ಕಳೆದ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಒಟ್ಟು ಒಂದು ಗ್ರಾಂ ಚಿನ್ನದ ಬೆಲೆ 155 ರೂಪಾಯಿ ಏರಿಕೆಯಾಗಿದೆ. ಮತ್ತೊಂದೆಡೆ, ನಿನ್ನೆ 5 ರೂಪಾಯಿ ಏರಿಕೆ ಕಂಡಿದ್ದ ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಆಗದೆ ಸ್ಥಿರವಾಗಿದೆ.

ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,32,200 ರೂಪಾಯಿಗೆ ತಲುಪಿದೆ. ಅದೇ ರೀತಿ 24 ಕ್ಯಾರಟ್ ಅಪರಂಜಿ ಚಿನ್ನದ 10 ಗ್ರಾಂ ಬೆಲೆ 1,44,220 ರೂಪಾಯಿಯಾಗಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲದ ಕಾರಣ 100 ಗ್ರಾಂ ಬೆಳ್ಳಿ ಬೆಲೆ 23,500 ರೂಪಾಯಿಯಲ್ಲೇ ಮುಂದುವರಿದಿದೆ.

ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ

ರಾಜಧಾನಿ ಬೆಂಗಳೂರಿನಲ್ಲಿಯೂ ಚಿನ್ನದ ಬೆಲೆ ದೇಶದ ಸರಾಸರಿ ದರಕ್ಕೆ ಸಮಾನವಾಗಿದೆ. ಇಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,32,200 ರೂಪಾಯಿ ಇದ್ದು, 100 ಗ್ರಾಂ ಬೆಳ್ಳಿ ಬೆಲೆ 23,500 ರೂಪಾಯಿಯಾಗಿದೆ. ಆದರೆ ತಮಿಳುನಾಡು ಮತ್ತು ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ 100 ಗ್ರಾಂ ಬೆಳ್ಳಿ ದರ 24,000 ರೂಪಾಯಿವರೆಗೆ ದಾಖಲಾಗಿದೆ.

ಜುಲೈ 21ರ ಚಿನ್ನ ಮತ್ತು ಬೆಳ್ಳಿ ದರ

ಬೆಂಗಳೂರಿನ ದರ

ವಿವಿಧ ನಗರಗಳಲ್ಲಿನ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)

ವಿವಿಧ ನಗರಗಳಲ್ಲಿನ ಬೆಳ್ಳಿ ಬೆಲೆ (1 ಗ್ರಾಂ)

Exit mobile version