ವಾರದಲ್ಲಿ ಅಚ್ಚುಕಟ್ಟಾಗಿ ಆಡುವ ಒಬ್ಬ ಸದಸ್ಯನಿಗೆ ಕಿಚ್ಚ ಸುದೀಪ್ ಚಪ್ಪಾಳೆ ನೀಡುತ್ತಾರೆ. ಹೀಗೆ ಪ್ರತಿ ವಾರದಂತೆ ಈ ವಾರ ಗಿಲ್ಲಿ ನಟನಿಗೆ ತಮ್ಮ ಚಪ್ಪಾಳೆ ನೀಡಿ,ಇದು ನನ್ನದು ಮಾತ್ರವಲ್ಲ ಇಡೀ ಕರ್ನಾಟಕ ಜನರದು ಎಂದು ಹೇಳಿ ಪ್ರಶಂಸಿಸದ್ದಾರೆ.
ರಕ್ಷಿತಾ ಶೆಟ್ಟಿ ಅವರ ಮೇಲೆ ಇತರ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾನ್ವಿ ಅವರು ಮಾಡಿದ ಅತಿಯಾದ ‘ರ್ಯಾಗಿಂಗ್’ (ಕಿರುಕುಳ) ವಿರುದ್ಧ ಗಿಲ್ಲಿ ನಿರಂತರವಾಗಿ ನಿಂತದ್ದನ್ನು ಹೈಲೈಟ್ ಮಾಡಿದರು. ಇತರರು ಮೌನವಾಗಿ ನೋಡುತ್ತಿದ್ದ ಸನ್ನಿವೇಶದಲ್ಲಿ, ಗಿಲ್ಲಿ ಪ್ರತಿ ಹಂತದಲ್ಲೂ ರಕ್ಷಿತಾ ಅವರ ಪರವಾಗಿ ನಿಂತಿದ್ದರಿಂದ ಗಿಲ್ಲಿಗೆ ಈ ಬಾರಿ ಕಿಚ್ಚನ ಚಪ್ಪಾಳೆ ದೊರೆತಿದೆ.
ಸುದೀಪ್ ಅವರು ಇದರ ಮಹತ್ವವನ್ನು ವಿವರಿಸುತ್ತಾ, ಸರಿಯಾದ ಸಮಯದಲ್ಲಿ ಸ್ಟ್ಯಾಂಡ್ ತಗೊಳೋದು ಮುಖ್ಯ. ನೀವು ತೆಗೆದುಕೊಳ್ಳುವ ಸ್ಟ್ಯಾಂಡ್ಗೆ ಇಡೀ ಕರ್ನಾಟಕ ಚಪ್ಪಾಳೆ ತಟ್ಟುತ್ತೆ. ಹಾಗೆ ತೆಗೆದುಕೊಳ್ಳುವ ಸ್ಟ್ಯಾಂಡ್ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ಹೇಳಿದರು.





