ರಕ್ಷಿತಾ ಶೆಟ್ಟಿ ತಂಟೆಗೆ ಬಂದ ರಾಶಿಕಾಗೆ ಖಡಕ್ ತಿರುಗೇಟು ನೀಡಿದ ಗಿಲ್ಲಿನಟ

Untitled design 2025 10 30t085153.225

ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟ ತಮ್ಮ ಆಟದ ಶೈಲಿಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ರಕ್ಷಿತಾ ಶೆಟ್ಟಿ ಮತ್ತು ಕಾವ್ಯಾ ಸ್ಪರ್ಧಿಗಳ ಜೊತೆ ವಾಗ್ವಾದಕ್ಕೆ ಬಂದರೆ, ಗಿಲ್ಲಿ ನಟ ಮುಲಾಜಿಲ್ಲದೆ ತಿರುಗೇಟು ನೀಡುತ್ತಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ರಾಶಿಕಾ ವಿರುದ್ಧ ಗಿಲ್ಲಿಯ ಖಡಕ್ ವರ್ತನೆಯಿಂದ ರಾಶಿಕಾ ಹೌಹಾರಿದ್ದಾಳೆ. .

ಅಕ್ಟೋಬರ್ 29, 2025ರ ಎಪಿಸೋಡ್‌ನಲ್ಲಿ, ರಾಶಿಕಾ ಮತ್ತು ಗಿಲ್ಲಿ ನಟ ಒಂದೇ ತಂಡದಲ್ಲಿದ್ದರೂ, ರಾಶಿಕಾ ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿದರು. ಕೈ ನೋವಿನ ಕಾರಣ ಹೇಳಿ ರಾಶಿಕಾ ಅಡುಗೆ ಕೆಲಸದಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. ಎಲ್ಲ ಕೆಲಸವನ್ನೂ ರಕ್ಷಿತಾ ಶೆಟ್ಟಿಗೆ ಹಾಕುವ ಉದ್ದೇಶ ರಾಶಿಕಾಳದಾಗಿತ್ತು. ಆದರೆ ಅಶ್ವಿನಿ ಗೌಡ ಮತ್ತು ರಾಶಿಕಾ ಒಟ್ಟಾಗಿ ರಕ್ಷಿತಾ ವಿರುದ್ಧ ಒಗ್ಗೂಡಿದರೂ, ರಕ್ಷಿತಾ ಯಾವುದೇ ಭಯವಿಲ್ಲದೆ ಅವರ ವಿರುದ್ದ ಮಾತನಾಡಿದ್ದಳು.

ಗೇಮ್ ಆಡುವ ವೇಳೆ ರಾಶಿಕಾ ರಕ್ಷಿತಾ ಶೆಟ್ಟಿಯ ಮೇಲೆ ಉದ್ದೇಶಪೂರ್ವಕವಾಗಿ ಬಿದ್ದಿದ್ದು, ಬಿಡಿ ಎಂದು ರಕ್ಷಿತಾ ಕೇಳಿಕೊಂಡರೂ ಕಿವಿಗೊಡಲಿಲ್ಲ. ಇದನ್ನು ಗಿಲ್ಲಿ ನಟ ತೀವ್ರವಾಗಿ ಖಂಡಿಸಿದರು. ನಮ್ಮದೇ ತಂಡದ ವಿರುದ್ಧ ತಿರುಗಿ ಬೀಳುತ್ತೀಯಾ? ಎಂದು ರಾಶಿಕಾಳಿಗೆ ಗಿಲ್ಲಿ ಎಚ್ಚರಿಕೆ ನೀಡಿದರು. ನೀನು ಹೆಣ್ಣಾಗಿದ್ದರೆ ರಕ್ಷಿತಾಗೆ ಈ ರೀತಿ ಮಾಡುತ್ತಿರಲಿಲ್ಲ ಎಂದು ಗಿಲ್ಲಿ ಖಡಕ್‌ವಾಗಿ ಹೇಳಿದರು.

ಗೆಲುವಿನ ನಂತರ, ತಂಡದ ಕ್ಯಾಪ್ಟನ್‌ಗೆ ಸ್ಪರ್ಧಿಯಾಗಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಎಲ್ಲರೂ ರಾಶಿಕಾ ಹೆಸರನ್ನು ಸೂಚಿಸಿದರೂ, ಗಿಲ್ಲಿ ನಟ ರಿವೇಂಜ್ ತೀರಿಸಿಕೊಳ್ಳಲು ನಿರ್ಧರಿಸಿ, ನಾನು ರಾಶಿಕಾಗೆ ವೋಟ್ ಹಾಕಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ಇದರಿಂದ ಬಿಗ್ ಬಾಸ್ ಆ ಅವಕಾಶವನ್ನು ಹಿಂದಕ್ಕೆ ಪಡೆಯಿತು. ಈ ಘಟನೆಯಿಂದ ರಾಶಿಕಾ ಬೇಸರಗೊಂಡರು.

Exit mobile version