ಬಿಗ್ ಬಾಸ್ ಕನ್ನಡ ಸೀಸನ್ 12ರ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದಂತೆ, ದೊಡ್ಡಮನೆಯಲ್ಲಿ ಡ್ರಾಮಾ ಮತ್ತು ಟ್ವಿಸ್ಟ್‌ಗಳು ಹೆಚ್ಚಾಗಿವೆ. ಮೂರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯ ನಂತರ ಮನೆಯ ವಾತಾವರಣ ಸಂಪೂರ್ಣವಾಗಿ ಬದಲಾಗಿದೆ. ರಘು ಮತ್ತು ರಿಷಾ ಗೌಡರ ಆಗಮನದಿಂದ ಮನೆ ನಡುಗಿದೆ. ಅದರ ಜೊತೆಗೆ ಸೂರಜ್ ಸಿಂಗ್ ಸೈಲೆಂಟ್ ಎಂಟ್ರಿಯೊಂದಿಗೆ ಅಚ್ಚರಿ ಮೂಡಿಸಿದ್ದಾರೆ. ಈ ಹೊಸ ಸ್ಪರ್ಧಿಗಳು ಮನೆಯ ಡೈನಾಮಿಕ್ಸ್ ಅನ್ನು ತಲೆಕೆಳಗು ಮಾಡಿದ್ದಾರೆ. ಮತ್ತು ಇದರ ಪರಿಣಾಮವಾಗಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ತೀವ್ರ ಗಲಾಟೆಗಳು ನಡೆದಿವೆ.
ಬಿಗ್ ಬಾಸ್ ಈ ವಾರದ ನಾಮಿನೇಷನ್ ಪ್ರಕ್ರಿಯೆಯನ್ನು ಶುರು ಮಾಡುತ್ತಿದ್ದಂತೆ, ಸ್ಪರ್ಧಿಗಳ ನಡುವೆ ತೀವ್ರ ಸಂಘರ್ಷಗಳು ಉಂಟಾಗಿವೆ. ಮೊದಲಿಗೆ ರಘು ತಮ್ಮ ಮೊದಲ ನಾಮಿನೇಷನ್ ಅನ್ನು ಗಿಲ್ಲಿ ಮೇಲೆ ಮಾಡಿದ್ದಾರೆ. ಅವರು ಗಿಲ್ಲಿಯನ್ನು ಕಾಮಿಡಿಯಲ್ಲಿ ಡಮ್ಮಿ ಕ್ಯಾರೆಕ್ಟರ್ ಎಂದು ಕರೆದು ನಾಮಿನೇಟ್ ಮಾಡಿದ್ದಾರೆ. ಗಿಲ್ಲಿಯನ್ನು ಐದಕ್ಕೂ ಹೆಚ್ಚು ಸ್ಪರ್ಧಿಗಳು ನಾಮಿನೇಟ್ ಮಾಡಿದ್ದು, ಅವರ ಸ್ಥಾನವನ್ನು ಅಪಾಯಕ್ಕೆ ಸಿಲುಕಿಸಿದೆ. ಆದರೆ ಇದರ ನಡುವೆಯೇ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಗೌಡ ನಡುವೆ ದೊಡ್ಡ ಜಗಳ ನಡೆದಿದೆ, ಇದು ಮನೆಯ ಗಮನ ಸೆಳೆದಿದೆ.
ರಕ್ಷಿತಾ ತಮ್ಮ ನಾಮಿನೇಷನ್‌ನಲ್ಲಿ ರಾಶಿಕಾ ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ನೀಡಿದ ಕಾರಣವೇನೆಂದರೆ, ರಾಶಿಕಾ ಇಂಡಿವಿಡ್ಯುಯಲ್ ಆಗಿ ಕೆಲಸ ಮಾಡದೇ ಇತರರನ್ನು ಆರ್ಡರ್ ಮಾಡುತ್ತಾರೆ. “ಅದನ್ನು ತೆಗೊಂದು ಬಾ, ಇದನ್ನು ತೆಗೊಂದು ಬಾ” ಎಂದು ಹೇಳಿ ಡಿಪೆಂಡೆಂಟ್ ಆಗಿರುವುದು ಎಂದು ರಕ್ಷಿತಾ ಆರೋಪಿಸಿದ್ದಾರೆ. ಇದು ರಾಶಿಕಾ ಅವರನ್ನು ರೊಚ್ಚಿಗೆದ್ದಂತೆ ಮಾಡಿದೆ. ರಾಶಿಕಾ ತಕ್ಷಣ ಪ್ರತಿಕ್ರಿಯಿಸಿ, “ನಾನು ಯಾರ ಮೇಲೆ ಡಿಪೆಂಡ್ ಆಗಿದ್ದೇನಮ್ಮ? ನಿನಗೆ ಏನು ಅರ್ಥ ಆಗಲ್ಲ, ಸುಮ್ನೆ ಬಂದು ಬಿಟ್ಟಿದ್ದೀಯಾ ಬಿಗ್ ಬಾಸ್ ಮನೆಗೆ? ಚೈಲ್ಡಿಶ್ ಬಿಹೇವಿಯರ್!” ಎಂದು ಹೇಳಿದ್ದಾರೆ. ಇಬ್ಬರ ನಡುವೆ ಮಾತಿನ ಜಗಳ ಉಲ್ಬಣಗೊಂಡು, ರಕ್ಷಿತಾ “ನೀವು ರೆಸ್ಪೆಕ್ಟ್ ಮಾಡ್ಬೇಕು” ಎಂದು ಹೇಳಿದ್ದರಿಂದ ವಿವಾದ ಮತ್ತಷ್ಟು ಹೆಚ್ಚಾಗಿದೆ.
ಈ ಗಲಾಟೆ ಮನೆಯ ಇತರ ಸ್ಪರ್ಧಿಗಳನ್ನು ಸಹ ಅಚ್ಚರಿಗೊಳಿಸಿದೆ. ಬಿಗ್ ಬಾಸ್ ಮನೆಯಲ್ಲಿ ಇಂತಹ ಸಂಘರ್ಷಗಳು ಸಾಮಾನ್ಯವಾದರೂ, ರಕ್ಷಿತಾ ಮತ್ತು ರಾಶಿಕಾ ನಡುವಿನ ಈ ಘಟನೆ ವಿಶೇಷವಾಗಿ ಗಮನ ಸೆಳೆದಿದೆ. ರಕ್ಷಿತಾ, ತಮ್ಮ ಸ್ಟ್ರಾಂಗ್ ಪರ್ಸನಾಲಿಟಿಯೊಂದಿಗೆ ಮನೆಯಲ್ಲಿ ಪ್ರಭಾವ ಬೀರಿದ್ದಾರೆ. ಆದರೆ ರಾಶಿಕಾ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ತಮ್ಮನ್ನು ಸ್ಥಾಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.





