ಬೆಳಿಗ್ಗೆ ಏಳು ಗಂಟೆಯ ಒಳಗೆ ಈ ಏಳು ಕೆಲಸವನ್ನು ಮಾಡಿದರೆ ನಿಮ್ಮ ಶರೀರ ಗಟ್ಟಿಯಾಗಿಯೂ ಮತ್ತು ಸದೃಢವಾಗಿರುತ್ತದೆ. ಬೆಳಿಗ್ಗೆ ಬೇಗ ಏಳುವುದು ಒಂದು ಕಷ್ಟಕಾರ್ಯವಾಗಿರುತ್ತದೆ. ಆದರೆ ಬೆಳಿಗ್ಗೆ ಬೇಗ ಎದ್ದು ರಾತ್ರಿ ಬೇಗ ಮಲಗಿಕೊಳ್ಳುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಸುಖಮಯವಾಗಿರುತ್ತದೆ ಎಂದು ಆರೋಗ್ಯ ಸಲಹೆಗಾರರು ಹೇಳಿದ್ದಾರೆ.

1. ರಾತ್ರಿಯಿಡಿ ಮಲಗಿ ಬೆಳಿಗ್ಗೆ ಎದ್ದೇಳುವುದರಿಂದ ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ. ಅದ್ದರಿಂದ ದಿನದ ಪ್ರಾರಂಭವನ್ನು ಒಂದು ಗ್ಲಾಸ್ ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿ ಇರುತ್ತದೆ. ದೇಹದಲ್ಲಿ ಶಕ್ತಿ ಸಂಚಲಿಸುತ್ತದೆ.

2. ಬೆಳಿಗ್ಗೆ ಬೇಗ ಎದ್ದ ನಂತರ ನಾವು ಯಾವುದೇ ತರಹದ ಡಿಜಿಟಲ್, ಟೆಕ್ನಾಲಜಿಯ ವಸ್ತುಗಳನ್ನು ಉಪಯೋಗಿಸಬಾರದು. (ಉದಾಹರಣೆಗೆ ಮೊಬೈಲ್, ಲ್ಯಾಪ್ ಟಾಪ್) ಇದರಿಂದ ಆತಂಕ, ಒತ್ತಡ ಕಡಿಮೆಯಾಗುತ್ತದೆ.

3. ಬೆಳಿಗ್ಗೆ ಎದ್ದಾಗ ಕಡಿಮೆ ಸಮಯವಾದರೂ ಸರಿ ವ್ಯಾಯಾಮ ಮಾಡಲೇಬೇಕು. ಇದರಿಂದ ದೇಹದಲ್ಲಿ ರಕ್ತದ ಸಂಚಲನ ಸುಗಮವಾಗುತ್ತದೆ. ಶರೀರದಲ್ಲಿ ಸಕಾರಾತ್ಮಕ ಶಕ್ತಿಯ ಸಂಚಲನವಾಗುತ್ತದೆ.

4. ವ್ಯಾಯಮ ಮಾಡುವುದರಿಂದ ದೈಹಿಕ ಸಾಮರ್ಥ್ಯ ಅಧಿಕವಾಗುತ್ತದೆ. ಹಾಗೆಯೇ ಮಾನಸಿಕವಾಗಿ ಸಧೃಡವಾಗಿರಲು ಧ್ಯಾನ ಮಾಡುವುದು ಅತ್ಯವಶ್ಯಕ. ಇದರಿಂದ ದಿನವಿಡಿ ಮನಸ್ಸು ಚೈತನ್ಯಭರಿತವಾಗಿರುತ್ತದೆ.

5. ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಬಳಸುವ ಬದಲು ಕನಿಷ್ಠ 5-10 ನಿಮಿಷ ಪುಸ್ತಕವನ್ನು ಓದಿ. ಇದರಿಂದ ಹೊಸ ವಿಚಾರಗಳು, ಏಕಾಗ್ರತೆಯ ಬೆಳವಣಿಗೆ ಆಗುತ್ತದೆ. ನಮ್ಮ ಕ್ರಿಯೆಟಿವಿಟಿ ಅಧಿಕವಾಗುತ್ತದೆ.
6. ನೀವು ನಿಮ್ಮ ದಿನದ ಸಂಪೂರ್ಣ ಕೆಲಸವನ್ನು ಬೆಳಿಗ್ಗೆ ಒಂದು ಪುಸ್ತಕದಲ್ಲಿ ಬರೆದಿಡಿ. ಇದರಿಂದ ನಿಮ್ಮ ಸಮಯ ವ್ಯರ್ಥವಾಗದು. ನಿಮ್ಮ ಗುರಿಯನ್ನು ಬರೆದಿಡುವುದರಿಂದ ನಿಮಗೆ ನಿಮ್ಮ ಮೇಲೆ ಆತ್ಮವಿಶ್ವಾಸ ಹೆಚ್ಚುತ್ತದೆ.

7 . ಬೆಳಿಗ್ಗೆ ವ್ಯಾಯಮ ಮಾಡಿದ ನಂತರ ಸ್ನಾನ ಮಾಡುವುದನ್ನು ಮರೆಯದಿರಿ. ಇದರಿಂದ ರಕ್ತದ ಸಂಚಲನ ಉತ್ತಮವಾಗುತ್ತದೆ. ನಮ್ಮ ಮೂಡ್ ಚೆನ್ನಾಗಿ ಇರುತ್ತದೆ. ಆರೋಗ್ಯ ಸಲಹೆಗಾರರ ಪ್ರಕಾರ ಬಿಸಿ ನೀರಿಗಿಂತ ತಣ್ಣೀರು ಸ್ನಾನ ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ತಿಳಿಸಿದ್ದಾರೆ.