ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವವೂ ನಡೆಯುತ್ತಿದೆ. ಬಿಹಾರದ ಮುಜಾಫರ್ ಪುರ ಕ್ಷೇತ್ರದ ಹಾಲಿ ಸಂಸದ ಅಜಯ್ ನಿಶಾದ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಪವನ್ ಖೇರಾ ಮತ್ತಿತರ ನಾಯಕರ ಸಮ್ಮುಖದಲ್ಲಿ ಅಜಯ್ ನಿಶಾದ್ ಕಾಂಗ್ರೆಸ್ ಸೇರಿದರು.ಕಾಂಗ್ರೆಸ್ ಸೇರ್ಪಡೆಗೂ ಮುನ್ನವೇ ಎಕ್ಸ್ ನಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ ನಿಶಾದ್, ಬಿಜೆಪಿಯ ದ್ರೋಹದಿಂದ ಆಘಾತಗೊಂಡು, ಪಕ್ಷದ ಎಲ್ಲಾ ಸ್ಥಾನಗಳು ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
