
ಅಮುಲ್ ಮತ್ತು ನಂದಿನಿ ನಡುವಿನ ಹಾಲಿನ ಪೈಪೋಟಿ ತೀವ್ರಗೊಳ್ಳುತ್ತಿದ್ದು, ಈಗ ಅದರ ಶಾಖ ಕ್ರಿಕೆಟ್ ಮೈದಾನಕ್ಕೂ ಕಾಲಿಡುವ ಎಲ್ಲಾ ಸಾಧ್ಯತೆಗಳಿವೆ. ನಮ್ಮ ರಾಜ್ಯದ ಹೆಮ್ಮೆಯ ಕೆಎಂಎಫ್ ನಂದಿನಿ ಬ್ರಾಂಡ್ ಹಾಲು ಮತ್ತು ಮೊಸರು ಮುಂತಾದ ಡೈರಿ ಉತ್ಪನ್ನಗಳನ್ನು ಮಾರ್ಕೆಟ್ ನಲ್ಲಿ ಸಖತ್ ಫೇಮಸ್ ಆಗಿದೆ. ಈ ಮಧ್ಯೆ ಜೂನ್ನಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್ ನಲ್ಲಿ ಒಂದು ಅಥವಾ ಹೆಚ್ಚಿನ ತಂಡಗಳ ಪ್ರಾಯೋಜಕತ್ವ ಪಡೆಯಲು ಆಲೋಚನೆ ನಡೆಸುತ್ತಿದೆ. ICC T20 ವಿಶ್ವಕಪ್ನಲ್ಲಿ ಭಾಗವಹಿಸುವ ಒಂದು ಅಥವಾ ಹೆಚ್ಚಿನ ತಂಡಗಳ ಜರ್ಸಿಯಲ್ಲಿ ನಂದಿನಿ ಲೋಗೋವನ್ನು ಪ್ರಚಾರ ಮಾಡಲು KMF, ಕಂಪನಿಗಳನ್ನು ಆಹ್ವಾನಿಸಿದ್ದು ಟೆಂಡರ್ ನೀಡಲಾಗಿದೆ