ಚಿತ್ರದುರ್ಗ ಲೋಕಸಭಾ ಟಿಕೆಟ್ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ನೀಡಿದ್ದಕ್ಕೆ ಅಸಮಾಧಾನ ಭುಗಿಲೆದಿದ್ದು, ಕೋಟೆನಾಡಿನಲ್ಲಿ ಕಮಲ ಪಡೆಯ ಕಲಹ ತಾರಕಕ್ಕೇರಿದೆ. ತಮ್ಮ ಪುತ್ರನಿಗೆ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದ ಹೊಳಲ್ಕೆರೆ ಶಾಸಕ ಚಂದ್ರಪ್ಪ ಪಕ್ಷದ ನಾಯಕರ ವಿರುದ್ಧವೇ ಕೆರಳಿದ್ದಾರೆ. ಅಸಮಾಧಾನ ತಣಿಸಲು ಮುಂದಾಗಿರುವ ಬಿಜೆಪಿ, ಎಂಎಲ್ ಸಿ ರವಿಕುಮಾರ್ ಅವರನ್ನ ಸಂಧಾನಕಾರರನ್ನಾಗಿ ಕಳುಹಿಸಿತ್ತು. ನಿನ್ನೆ ಚಂದ್ರಪ್ಪ ಪುತ್ರ ರಘುಚಂದನ್ ಜೊತೆ ರವಿಕುಮಾರ್ ಚರ್ಚೆ ನಡೆಸಿದರು. ಈ ವೇಳೆ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡುತ್ತೇವೆ ಎಂಬ ಭರವಸೆಯನ್ನೂ ನೀಡಿ ಬಂದಿದ್ದರು. ಆದರೆ ರವಿಕುಮಾರ್ ಸಂಧಾನ ವಿಫಲ ಆದಂತೆ ಕಾಣುತ್ತಿದೆ. ಬಂಡಾಯ ಅಭ್ಯರ್ಥಿ ಆಗಿ ರಘುಚಂದನ್ ಕಣಕ್ಕಿಳಿಯಲು ನಿರ್ಧಾರಿದಸಿದ್ದಾರೆ. ಏಪ್ರಿಲ್ 3ಕ್ಕೆ ನಾಮಪತ್ರ ಸಲ್ಲಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.